ಧರ್ಮಸ್ಥಳ- ಉತ್ಖನನಕ್ಕೂ ಮುನ್ನ ಎಸ್‍ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ 10 ದಿನಗಳ ಕಾರ್ಯಾಚರಣೆಯ ವರದಿ ಪಡೆದಿದ್ದಾರೆ.
ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಆಗಮಿಸಿದ ಎಸ್‍ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದರು.ಡಿಐಜಿ ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸಿ ಸ್ಟೆಲ್ಲಾ ವರ್ಗೀಸ್ ಭಾಗಿಯಾಗಿದ್ದರು. . ಹತ್ತು ದಿನದ ಕಾರ್ಯಾಚರಣೆಯ ಬಗ್ಗೆ ಮೊಹಂತಿ ವರದಿ ಪಡೆದಿದ್ದಾರೆ. ಅಧಿಕಾರಿಗಳಿಂದ ತನಿಖಾ ಪ್ರಗತಿಯ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಜಯಂತ್ ಟಿ ಹೊಸ ದೂರುದಾರ ಅವರ ತನಿಖೆಯನ್ನೂ ಎಸ್ ಐಟಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.ಪ್ರತೀದಿನ 11-30 ಕ್ಕೆ ಆರಂಭ ಆಗುತ್ತಿದ್ದ ಸಭೆ 12-27 ರವರೆಗೂ ನಡೆದಿಲ್ಲ.
ಇತ್ತ ಅನನ್ಯಾ ಭಟ್ ತಾಯಿ ಸುಜಾತಾ ಪರ ವಕೀಲರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.ಧರ್ಮಸ್ಥಳದ ಆರಣ್ಯ ಭಾಗಗಳಲ್ಲಿ ಶವ ಹೂತಿಡಲಾಗಿದೆ ಎನ್ನುವ ಪ್ರಕರಣ ಇದೀಗ ಭಾರೀ ಸಂಚಲನ ಮೂಡಿಸಿದೆ. ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಹೊಸ ಆರೋಪ ಮಾಡಿದ್ದಾರೆ.
ಜಿಪಿಅರ್ ಯಂತ್ರಗಳ ಕೃತಕ ಅಭಾವ ಸೃಷ್ಟಿ ಹೇಗೆ?
ಜಿಪಿಅರ್ ಯಂತ್ರಗಳ ಕೃತಕ ಅಭಾವ ಸೃಷ್ಟಿ ಬಗ್ಗೆ ವಕೀಲ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಈ ಯಂತ್ರಗಳನ್ನ ಒದಗಿಸುವ ಖಾಸಗಿ ಕಂಪನಿಗಳ ಮೇಲೆ ಒತ್ತಡ ಅಥವಾ ಬೆದರಿಕೆ ಹಾಕಲಾಗಿದೆ ಎಂದು ಆರೋಪ ಮಾಡ್ತಿದ್ದಾರೆ. ನಿಜಕ್ಕೂ ಜಿಪಿಆರ್ ತಂತ್ರಜ್ಞಾನದ ಕೊರತೆ ಹಾಗೂ ಲಭ್ಯತೆಯ ಕೊರತೆ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ತಂತ್ರಜ್ಞಾನ ಬಳಸುವ ಬಳಕೆಗೆ ಒತ್ತಾಯ
ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರು ಉತ್ಖನನದ ಕಾರ್ಯಾಚರಣೆಯಲ್ಲಿ ಉPಖ ತಂತ್ರಜ್ಞಾನ ಬಳಸುವ ಬಗ್ಗೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗ್ತಿದೆ. ಶವ ಹೂತಿಟ್ಟ ಸ್ಥಳಗಳಲ್ಲಿ ಮಾನವ ಅವಶೇಷಗಳನ್ನು ಪತ್ತೆ ಹಚ್ಚಲು ಇದು ಸಹಾಯವಾಗುತ್ತದೆ. ಈ ತಂತ್ರಜ್ಞಾನವು ವೈಜ್ಞಾನಿಕ ಹಾಗೂ ಸಮಗ್ರ ತನಿಖೆಗೆ ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಜೆಸಿಬಿ ಯಂತ್ರಗಳನ್ನು ತಯಾರಿಸುವ ಹಾಗೂ ಪೂರೈಸುವ ಖಾಸಗಿ ಕಂಪನಿಗಳ ಸಂಖ್ಯೆ ತುಂಬಾ ಕಡಿಮೆಯಿದೆ. ಈ ಕಾರಣದಿಂದಾಗಿ ಈ ಉಪಕರಣಗಳ ಮಾರುಕಟ್ಟೆಯು ಸಹಜವಾಗಿ ನಿರ್ಬಂಧಿತವಾಗಿದೆ ಎಂದಿದ್ದಾರೆ. ನಾವು ಪಡೆದ ಮಾಹಿತಿಯ ಪ್ರಕಾರ ಲಭ್ಯವಿರುವ ಉPಖ ಯಂತ್ರಗಳನ್ನು ಕೆಲ ನಿರ್ದಿಷ್ಟ ಹಾಗೂ ಅಜ್ಞಾತ ಹಿತಾಸಕ್ತಿಗಳು ಮುಂಗಡವಾಗಿ ಬುಕಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಕೀಲರ ಗಂಭೀರ ಆರೋಪ
ಈ ತನಿಖೆಗೆ ಯಂತ್ರಗಳನ್ನು ಒದಗಿಸುವ ಬಗ್ಗೆ ಖಾಸಗಿ ಕಂಪನಿಗಳ ಮೇಲೆ ಒತ್ತಡ ಅಥವಾ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಅನುಮಾನವಿದ್ದು, ಈ ಬೆಳವಣಿಗೆ ಅತೀ ಗಂಭೀರವಾಗಿದೆ. ಶೋಧ ಸಾಮಗ್ರಿಗಳ ಲಭ್ಯತೆ ಮೇಲೆ ಪ್ರಭಾವ ಬೀರುವ ಮೂಲಕ ತನಿಖೆಯನ್ನು ಅಡ್ಡಿಪಡಿಸಲಾಗ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ ಎಂದು ವರದಿ ಆಗಿದೆ.
ಕೆಲ ಶಕ್ತಿಗಳು ಇಂತಹ ಕೆಲಸ ಮಾಡಿದ್ರೆ, ಅದು ನ್ಯಾಯಕ್ಕಾಗಿ ಹೋರಾಡುತ್ತಿರುವ ಕುಟುಂಬಗಳಿಗೆ ಅತೀ ದೊಡ್ಡ ಅನ್ಯಾಯವಾಗುತ್ತದೆ. ಪ್ರಕರಣದ ಸತ್ಯವನ್ನು ತಿಳಿಯುವ ಸಂದರ್ಭಗಳಲ್ಲಿ ಉPಖ ತಂತ್ರಜ್ಞಾನದಂತಹ ವಿಜ್ಞಾನಾಧಾರಿತ ವಿಧಾನಗಳು ಅತೀ ಅವಶ್ಯಕವಾಗಿದೆ ಎಂದು ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಹೇಳಿದ್ದಾರೆ.
ನೆಲ ಅಗೆಯುವ ಬದಲು, ಅಸ್ಥಿಪಂಜರ ಪತ್ತೆಗೆ ಜಿಪಿಆರ್ ಯಂತ್ರ ಬಳಸಲು ಮನವಿ ಮಾಡಲಾಗಿತ್ತು. ಆದರೆ ಜಿಪಿಆರ್ ಯಂತ್ರಗಳ ಕೃತಕ ಅಭಾವ ಸೃಷ್ಟಿಸಲಾಗಿದೆ. ಯಂತ್ರ ಕೊಡುವ ಕಂಪನಿಗಳ ಮೇಲೆ ಒತ್ತಡ ಹೇರಲಾಗಿದೆ. ಧರ್ಮಸ್ಥಳ ನಿಗೂಢ ಶವ ಗಳನ್ನು ಭೂಮಿ ಮೇಲಿಂದಲೇ ಪತ್ತೆ ಹಚ್ಚಲು ಸಹಾಯವಾಗುವ ಜಿಪಿಆರ್ ಯಂತ್ರ , ಆದರೆ ಇವುಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಈವರೆಗಿನ 12 ಸ್ಥಳಗಳಲ್ಲಿ ಆಗಿದ್ದೇನು?
ನೂರಾರು ಶವಗಳನ್ನು ಹೂತು ಹಾಕಿದ್ದೇನೆಂದು ಅನಾಮಿಕ ದೂರುದಾರ ಹೇಳಿದ್ದ. ಆದರೆ ಶೋಧಕಾರ್ಯ ಮುಗಿಯುತ್ತಾ ಬಂದಿದ್ದು, ಆತನ ಲೆಕ್ಕಾಚಾರ ಎಲ್ಲವೂ ತಲೆಕೆಳಕಾಗಿರುವಂತೆ ಕಾಣುತ್ತಿದೆ. ಆತನ ನಿರೀಕ್ಷೆಯಂತೆ ಅಸ್ಥಿಪಂಜರಗಳೂ ಸಿಕ್ಕಿಲ್ಲ. ಕೇವಲ 6ನೇ ಸ್ಥಳದಲ್ಲಿ ಮಾತ್ರ ಅಸ್ಥಿಪಂಜರದ ಮೂಳೆಗಳು ಸಿಕ್ಕಿದ್ದವು. ನಂತರ ಆತ ಗುರುತು ಮಾಡದೇ ಇರುವ ಒಂದು ಜಾಗದಲ್ಲಿ ಮೂಳೆಗಳು ಸಿಕ್ಕಿದ್ದವು. ಹೊರತಾಗಿ ಯಾವುದೇ ಜಾಗದಲ್ಲೂ ಕಳೇಬರ ಸಿಕ್ಕಿಲ್ಲ.
7 ದಿನಗಳ ಹಿಂದೆ ಜಾಗ ಗುರುತು ಮಾಡುವಾಗ ನೇತ್ರಾವತಿ ಸ್ನಾನಘಟ್ಟದಿಂದ ನೇತ್ರಾವತಿ ತಟಭಾಗದಲ್ಲಿ 10 ವರ್ಷದ ಹಳೆಯ ಘಟನೆಗಳನ್ನು ನೆನಪಿಸಿ ಹೇಳಿದ್ದ. ಆದರೆ ಈಗ 11 ಸ್ಥಳಗಳಲ್ಲೂ ಕಳೇಬರ ಸಿಕ್ಕಿಲ್ಲ, ಹೀಗಾಗಿ ದೂರುದಾರನ ನಡೆಯ ಬಗ್ಗೆ ಅನುಮಾನ ಇದೆ ಎಂದು ಚರ್ಚೆ ಮಾಡಲಾಗ್ತಿದೆ. ಹಲವರು ಆತ ಸುಳ್ಳು ಹೇಳುತ್ತಿದ್ದಾನೆ ಎಂದರೆ, ಇನ್ನು ಕೆಲವರು ಪ್ರವಾಹದಿಂದ ಕೊಚ್ಚಿಹೋಗಿರಬಹುದು ಎಂದೂ ವಾದ ಆಗುತ್ತಿದೆ.


