ಮೈಸೂರು: ಪ್ರತಾಪ್ ಸಿಂಹ ನೀನು ಯೋಗ್ಯನಾಗಿದ್ದರೆ, ಗಂಡಸಾಗಿದ್ದರೆ ಮಾಧ್ಯಮಗಳ ಮುಂದೆ ಬಾ. ಇಬ್ಬರೂ ಬಹಿರಂಗವಾಗಿ ಡಿಬೇಟ್ ಮಾಡೋಣ. ನೀನು ಕೋರ್ಟ್ ನಿಂದ ತಂದಿರುವ ತಡೆಯಾಜ್ಞೆಗಳನ್ನು ತೆರವು ಮಾಡಿಸು, ತಕ್ಷಣವೇ ನಿನ್ನ ಕರ್ಮಕಾಂಡಗಳನ್ನು ಎಪಿಸೋಡ್ ರೀತಿಯಲ್ಲಿ ಜನರ ಮುಂದೆ ಇಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾಜಿ ಸಂಸದ ಪ್ರತಾಪ್ ಸಿಂಹನಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ನೀನು ಎಲ್ಲೆ ಮೀರಿ ನಡೆದುಕೊಳ್ಳುತ್ತಿದ್ದೀಯಾ. ನೀನು ರಾಜಕೀಯವಾಗಿ ನನ್ನ ಬಗ್ಗೆ ಮಾತನಾಡು. ನನ್ನ ಮಗಳು, ಪತ್ನಿಯ ಬಗ್ಗೆ ಯಾಕೆ ಮಾತನಾಡುತ್ತೀಯಾ..? ನಿನ್ನ ಹೆಂಡತಿ ಬಿ.ಎಲ್. ಸಂತೋಷ್ ಅವರಿಗೆ ಬರೆದ ಪತ್ರ ನನ್ನ ಬಳಿ ಇದೆ. ನಿನ್ನ ಹೆಂಡತಿ ಬಾಯಿಯಿಂದ ನನ್ನ ಗಂಡ ಸತ್ಯ ಹರಿಶ್ಚಂದ್ರ ಎಂದು ಹೇಳಿಸು ನೋಡೋಣ. ಎಲ್ಲಿಗೆ ಬರಬೇಕು ಹೇಳು ಅಲ್ಲಿಗೆ ಬಂದು ಚರ್ಚೆಗೆ ಕೂರುತ್ತೇನೆ ಎಂದು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ.
ಟಿಕೆಟ್ ತಪ್ಪಿದ ಮೇಲೆ ಪ್ರತಾಪ್ ಸಿಂಹ ಅರೆ ಹುಚ್ಚನಾಗಿದ್ದಾನೆ. ದಾರಿಯಲ್ಲಿ ಹೋಗುವವರೆನ್ನೆಲ್ಲಾ ಕಚ್ಚುತ್ತಿದ್ದಾನೆ.ಸಂಸ್ಕೃತಿ ಎನ್ನು ವುದನ್ನು ನನಗೆ ತಂದೆ ತಾಯಿ, ಸಮಾಜ ಹಾಗೂ ನನ್ನ ಪಕ್ಷ ಕಳಿಸಿಕೊಟ್ಟಿದೆ. ಇಂದು ಬೇರೆ ದಾರಿ ಇಲ್ಲದೆ ಆತನ ದಾಟಿಯಲ್ಲೇ ಮಾತನಾಡುತ್ತೇನೆ. ಅವರ ಹೆಂಡತಿ ಮಗಳು ಅಕ್ಕನ ಬಗ್ಗೆ ನಾನು ಮಾತನಾಡಿಲ್ಲ. ನಿರಂತರವಾಗಿ ನನ್ನ ಮಗಳ ಪತ್ನಿಯ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದಾನೆ. ನಾನು ಯಾರಿಗಾದರೂ ಮೋಸ, ಹೆಣ್ಣು ಮಕ್ಕಳಿಗೆ ಮೋಸ ಮಾಡಿದ್ರೆ ದಾಖಲೆ ಸಮೇತ ಬಿಡುಗಡೆ ಮಾಡಲಿ. ನಿನಗೆ ಧೈರ್ಯ ಇದ್ದರೆ ನನ್ನ ವಿರುದ್ಧ ಕೋರ್ಟ್ ನಿಂದ ತಂದಿರುವ ತಡೆಯಾಜ್ಞೆ ತೆರವು ಮಾಡಿಸಲಿ, ಆಗ ಸತ್ಯವನ್ನು ಜನರ ಮುಂದೆ ನಾನು ತಿಳಿಸುತ್ತೇನೆ ಎಂದಿದ್ದಾರೆ.
ನಿನ್ನ ಬಗ್ಗೆ ಪೊಲೀಸ್ ಆಯುಕ್ತರಿಗೆ ಯುವತಿಯೊಬ್ಬಳು ದೂರು ನೀಡಿದ್ದಾಳೆ. ಬೆಂಗಳೂರು-ಮೈಸೂರು ರಸ್ತೆಯಲ್ಲಿ 100 ಕೋಟಿ ಲಂಚ ಹೊಡೆದಿದ್ದೀಯಾ. ವಿಜಯನಗರ ದಲ್ಲಿ 6 ಕೋಟಿ ಮನೆ ಕಟ್ಟುತ್ತಿದ್ದೀಯ, ಸಕಲೇಶಪುರದಲ್ಲಿ ಯಾರ್ಯಾರ ಹೆಸರಿನಲ್ಲಿ ರೆಸಾರ್ಟ್ ಮಾಡಿಸಿದ್ದೀಯಾ ಎನ್ನುವುದು ನಮಗೆ ಗೊತ್ತಿದೆ. ಹಿಂದೆ ರೋಹಿಣಿ ಸಿಂದೂರಿ, ಶಿಲ್ಪಾನಾಗ್ ನಡುವೆ ತಂದಿಡುವ ಕೆಲಸ ಮಾಡಿದ್ದೆ. ನೀನೊಬ್ಬ ಕಚ್ಚೆ ಹರುಕ. ನೀನು ಯೋಗ್ಯನಾಗಿದ್ದರೆ ನನ್ನನ್ನು ರಾಜಕೀಯವಾಗಿ ಎದುರಿಸು, ಅದನ್ನು ಬಿಟ್ಟು ನಮ್ಮ ಮನೆಯವರ ಬಗ್ಗೆ ಯಾಕೆ ಮಾತನಾಡುತ್ತೀಯಾ ಎಂದು ಲಕ್ಷ್ಮಣ್ ಅವರು ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


