ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗ ಬಲೂನ್ಗೆ ಗಾಳಿ ತುಂಬುವ ಸಿಲೆಂಡರ್ ಸ್ಪೋಟಗೊಂಡ ಪ್ರಕರಣದಲ್ಲಿ ಸಾವಿನ ಸಂಖ್ಯೆ 2ಕ್ಕೆ ಏರಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮಹಿಳೆ ಮಂಜುಳಾ ಎಂಬುವರು ಮೃತಪಟ್ಟಿದ್ದಾರೆ.
ನಂಜನಗೂಡಿನ ನಿವಾಸಿ ಮಂಜುಳಾ ಅವರಿಗೆ 43 ವರ್ಷ ವಯಸ್ಸಾಗಿತ್ತು. ಕಳೆದ ರಾತ್ರಿ ಸ್ಪೋಟದಲ್ಲಿ ಗಾಯಗೊಂಡಿದ್ದ ಮಂಜುಳಾ ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಸ್ಥಳದಲ್ಲಿಯೇ ಬಲೂನ್ ಮಾರಾಟ ಮಾಡುತ್ತಿದ್ದ ಸಲೀಂ ಮೃತಪಟ್ಟಿದ್ದರು.
ಇವರೊಂದಿಗೆ, ಅರಮನೆ ನೋಡಲೆಂದು ಬಂದಿದ್ದ ಮೈಸೂರಿನ ಬೆಳವಾಡಿ ನಿವಾಸಿ ಲಕ್ಷ್ಮೀ, ದಾವರಣಗೆರೆಯ ದಾನೇಶ್ವರ ನಗರದ ನಿವಾಸಿ ಕೊಟ್ರೇಶ್ ಮತ್ತು ರಂಜಿತಾ ಎಂಬುವರು ಗಾಯಗೊಂಡಿದ್ದಾರೆ.


