Online News in ಕನ್ನಡ

ಮೈಸೂರು ಮೃಗಾಲಯದಲ್ಲಿ ಪ್ರೀತಿ ಹುಲಿ ಸಾವು

ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ತಾರ ಮತ್ತು ರಾಕಿ ಹುಲಿಗಳಿಗೆ ೨೦೨೨ರಲ್ಲಿ ಜನಿಸಿದ ಸುಮಾರು ೩ ವರ್ಷದ ೯ ತಿಂಗಳ ʻಪ್ರೀತಿʼ ಹುಲಿ ಇಂದು ಮರಣ ಹೊಂದಿದೆ.
ಕಳೆದ ೫ ದಿನಗಳಿಂದ ಆಹಾರವನ್ನು ತ್ಯಜಿಸಿ ಹಿಮೋಪ್ರೋಟೋಜೋವ ಕಾಯಿಲೆಯಿಂದ ಬಳಲುತ್ತಿದ್ದ ಹೆಣ್ಣು ಹುಲಿಗೆ ಮೃಗಾಲಯದ ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಕಳೆದ ಮಧ್ಯರಾತ್ರಿ ಕಳೆದು ೧.೩೦ರಲ್ಲಿ ಮೃತಪಟ್ಟಿದೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.

Call Now Button