Online News in ಕನ್ನಡ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ರಾಜ್ಯ ತಂಬಾಕು ಬೆಳೆಗಾರರ ನಿಯೋಗ

ತಂಬಾಕು ತೆರಿಗೆ ಹೆಚ್ಚಳ ಪರಿಶೀಲನೆಗೆ ಮನವಿ
ಪಿರಿಯಾಪಟ್ಟಣ : ಎಫ್‌ಸಿವಿ ತಂಬಾಕು ರೈತರ ನಿಯೋಗ ಸಂಸದೆ ಡಿ. ಪುರಂದೇಶ್ವರಿ ಅವರ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ತಂಬಾಕು ತೆರಿಗೆ ಹೆಚ್ಚಳ ಪರಿಶೀಲನೆಗೆ ಮನವಿ ಸಲ್ಲಿಸಲಾಯಿತೆಂದು ಕರ್ನಾಟಕ ವರ್ಜೀನಿಯಾ ತಂಬಾಕು ಬೆಳೆಗಾರರ ಸಂಘದ ಕಾರ್ಯದರ್ಶಿ ಪಿರಿಯಾಪಟ್ಟಣ ವಿಕ್ರಮ್ ರಾಜ್ ಅರಸು ತಿಳಿಸಿದ್ದಾರೆ.
ಈ ಸಂಬಂಧ ಗುರುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದ ಎಫ್‌ಸಿವಿ ತಂಬಾಕು ರೈತರು, ರಾಜಮೌಂಡ್ರಿ ಸಂಸದೆಯಾದ ಶ್ರೀಮತಿ ಡಗ್ಗುಬಾಟಿ ಪುರಂದೇಶ್ವರಿ ಅವರ ನೇತೃತ್ವದಲ್ಲಿ, ತಂಬಾಕು ಮಂಡಳಿ ಅಧ್ಯಕ್ಷ ಯಶವಂತ್ ಕುಮಾರ್ ಅವರೊಂದಿಗೆ ದೆಹಲಿಯಲ್ಲಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಇತ್ತೀಚಿನ ತೆರಿಗೆ ಹೆಚ್ಚಳದಿಂದ ನಿಯಂತ್ರಿತ ಎಫ್‌ಸಿವಿ ತಂಬಾಕು ಉದ್ಯಮ ಮತ್ತು ರೈತರ ಜೀವನೋಪಾಯಕ್ಕೆ ಸಂಭವಿಸುವ ಗಂಭೀರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಸಂಸದೆ ಪುರಂದೇಶ್ವರಿ ಅವರು ಮಾತನಾಡುತ್ತಾ, ತೆರಿಗೆಯ ಅನಿರೀಕ್ಷಿತ ಹೆಚ್ಚಳವು ಎಫ್‌ಸಿವಿ ತಂಬಾಕು ಬೆಳೆಯಮೇಲೆ ಅವಲಂಬಿತವಾಗಿರುವ ಲಕ್ಷಾಂತರ ರೈತ ಕುಟುಂಬಗಳಿಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ನಿಯಂತ್ರಿತ ಮಾರುಕಟ್ಟೆ ವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದು ವಿವರಿಸಿದರು.
ಅವರು ಕಾನೂನಾತ್ಮಕ ವ್ಯಾಪಾರದ ಕುಸಿತದಿಂದ ಸರ್ಕಾರಕ್ಕೆ ಆದಾಯ ನಷ್ಟ, ಕಾನೂನು ಬಾಹಿರ ವ್ಯಾಪಾರದಿಂದ ಆಗುವ ಸರ್ಕಾರಿ ಆದಾಯ ನಷ್ಟ ಮತ್ತು ರಾಷ್ಟ್ರೀಯ ಆದಾಯ ಹಾಗೂ ಜಾರಿ ಪ್ರಯತ್ನಗಳನ್ನು ದುರ್ಬಲಗೊಳಿಸುವ ಅಕ್ರಮ ವ್ಯಾಪಾರ ವಿಸ್ತರಣೆಯ ಗಂಭೀರ ಅಪಾಯವನ್ನು ಎತ್ತಿ ತೋರಿಸಿದರು. ಹಾಗೂ, ದೇಶಿ ಉದ್ಯಮವನ್ನು ರಕ್ಷಿಸಲು ತಂಬಾಕಿನ ಸ್ಥಿರ ಲಭ್ಯತೆ ಮತ್ತು ಕಡಿಮೆ ಗುಣಮಟ್ಟದ ತಂಬಾಕಿನ ಬಳಕೆಯನ್ನು ಖಚಿತಪಡಿಸುವುದರಿಂದ, ರೈತರ ಆದಾಯ ಮತ್ತು ಮಾರಾಟ ಸ್ಥಿರತೆ ಹಾಗೂ ದೇಶೀಯ ಬೇಡಿಕೆ ಮುಖ್ಯವೆಂದು ಒತ್ತಿ ಹೇಳಿದರು.
ತಂಬಾಕು ಮಂಡಳಿ ಅಧ್ಯಕ್ಷ ಯಶವಂತ್ ಕುಮಾರ್ ಅವರು ತೆರಿಗೆ ಹೆಚ್ಚಳದಿಂದ ಉಂಟಾಗುವ ಪರಿಣಾಮಗಳು, ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರ ಪಾಲ್ಗೊಳ್ಳುವಿಕೆ ಮತ್ತು ನಿಯಂತ್ರಿತ ಎಫ್‌ಸಿವಿ ತಂಬಾಕಿನ ಹರಾಜು ಕಾರ್ಯನಿರ್ವಹಣೆಯ ಮೇಲಿನ ಪರಿಣಾಮಗಳನ್ನು ವಿವರವಾಗಿ ವಿವರಿಸಿದರು. ತೆರಿಗೆ ಹೆಚ್ಚಳವು “ಆದಾಯ ತಟಸ್ಥ” ಕ್ರಮವೆಂದು ಹೇಳಲಾಗಿದ್ದರೂ, ಫೆಬ್ರುವರಿ 1ರಂದು ಜಾರಿಗೆ ಬರುವ ಘೋಷಿತ ಕಾನೂನು, ಸಿಗಾರೆಟ್‌ಗಳ ಮೇಲಿನ ತೆರಿಗೆ ಭಾರವನ್ನು ಸುಮಾರು 73% ಏರಿಸುತ್ತವೆ, ಇದು 2 ರಿಂದ 3 ಪಟ್ಟು ಹೆಚ್ಚಾಗುತ್ತದೆ, ಆದ್ದರಿಂದ ಕಾನೂನು ಬೇಡಿಕೆ ಮತ್ತು ಹರಾಜು ಆಧಾರಿತ ಎಫ್‌ಸಿವಿ ಪರಿಸರಕ್ಕೆ ಗಂಭೀರ ಒತ್ತಡ ಹಾಕುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಖರೀದಿದಾರರ ಭಾಗವಹಿಸುವಿಕೆ ದುರ್ಬಲಗೊಳ್ಳುವುದರಿಂದ ಹರಾಜು ಸ್ಪರ್ಧಾತ್ಮಕಥೆಯ ಮೇಲೆ ನೇರವಾಗಿ ಪರಿಣಾಮ ಬೀರಬಹುದು, ಇದರಿಂದ ರೈತರಿಗೆ ಕಡಿಮೆ ಬೆಲೆ ಮತ್ತು ಮಾರಾಟವಾಗದ ಪದಾರ್ಥದಲ್ಲಿ ಹೆಚ್ಚಳವಾಗುತ್ತದೆ. ಅಂತಿಮವಾಗಿ ರೈತರ ಜೀವನೋಪಾಯ ಮತ್ತು ಸಂಪೂರ್ಣ ಮೌಲ್ಯ ಸರಪಳಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದರು.
ಭೇಟಿಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ರೈತರ ಬೆಲೆ ಸಿದ್ಧವಾಗಿದ್ದು, ಮುಂದಿನ ತಿಂಗಲಿನಿಂದ ಹರಾಜು ಆರಂಭವಾಗುತ್ತವೆ ಎಂದು ತಿಳಿಸಿದರು. ತೆರಿಗೆ ಹೆಚ್ಚಳವು ದೇಶಿ ಬಳಕೆಯನ್ನು ತೀವ್ರವಾಗಿ ಕಡಿಮೆ ಮಾಡಬಹುದು, ತೀಕ್ಷ್ಣ ಬೆಲೆ ಕುಸಿತ, ಮಾರಾತ್ ಸ್ಟಾಕ್ ಸಂಗ್ರಹ ಮತ್ತು ವ್ಯಾಪಾರಿಗಳ ಖರೀದಿ ಆಸಕ್ತಿಯ ಕಡಿಮೆಗೆ ಕಾರಣವಾಗಬಹುದು ಎಂದು ಅವರು ಆಳವಾದ ಚಿಂತೆ ವ್ಯಕ್ತಪಡಿಸಿದರು.
ಕರ್ನಾಟಕದ ರೈತರು ಹರಾಜಿನಲ್ಲಿ ಬೆಲೆಗಳು ಈಗಾಗಲೇ ಸುಮಾರು 10% ಕುಸಿದಿವೆ ಮತ್ತು ಫೆಬ್ರುವರಿ 1ರಿಂದ ವ್ಯಾಪಾರಿಗಳು 18% ತಂಬಾಕು ಮೇಲಿನ ತೆರಿಗೆಯಿಂದಾಗಿ ಭಾಗವಹಿಸದಿರಬಹುದು ಎಂಬ ಮಾಹಿತಿ ಪಡೆದಿದ್ದೇವೆ ಎಂದು ವಿವರಿಸಿದರು. ಖರೀದಿದಾರ ಪಾಲ್ಗೊಳ್ಳುವಿಕೆ ಮುಂದುವರಿದು ಕಡಿಮೆಯಾದರೆ, ಹರಾಜು ವ್ಯವಸ್ಥೆಗೆ ಗಂಭೀರ ಪರಿಣಾಮ ಬೀರಿ ರೈತರು ಭಾರಿ ನಷ್ಟ ಅನುಭವಿಸುತ್ತಾರೆ ಎಂದು ಎಚ್ಚರಿಸಿದರು.
ಮಾನ್ಯ ಹಣಕಾಸು ಸಚಿವೆ ಸತಿ. ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ಚಿಂತೆಗಳನ್ನು ಜಾಗ್ರತೆಯಿಂದ ಆಲಿಸಿ, ರೈತರು ಎತ್ತಿ ಹಿಡಿದ ಅಂಶಗಳನ್ನು ಪರಿಶೀಲಿಸಿ, ಆತಂಕಗಳನ್ನು ಪರಿಶೀಲಿಸಿ ಪರಿಗಣಿಸುವುದಾಗಿ ಪ್ರತಿಕ್ರಿಯಿಸಿದರು. ಸರ್ಕಾರದ ವಿಧಾನ ಆದಾಯ ತಟಸ್ಥ ವಾಗಿರುತ್ತದೆ, ರೈತರು, ವ್ಯಾಪಾರ ಮತ್ತು ನಿಯಂತ್ರಿತ ಪರಿಸರದ ಮೇಲಿನ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳುತ್ತದೆ, ಮತ್ತು ತಂಬಾಕು ಕ್ಷೇತ್ರದಿಂದ ಹೆಚ್ಚಿನ ಆದಾಯವನ್ನು ಉತ್ಪಾದಿಸುವ ಉದ್ದೇಶವಿಲ್ಲ ಎಂದು ಹೇಳಿದರು.
ರಾಜಮೌಂಡ್ರಿ ಮಾನ್ಯ ಸಂಸದೆ ಪುರಂದೇಶ್ವರಿ ಅವರು ಈಗ ವಿಷಯಗಳನ್ನು ಸೂಕ್ತ ಮಂಡಳಿಗಳಲ್ಲಿ ಎತ್ತಿ ಹಿಡಿಯುತ್ತೇನೆ ಮತ್ತು ಸರ್ಕಾರದೊಂದಿಗೆ ಸಮಾಲೋಚನೆ ಮಾಡುತ್ತೇನೆ ಎಂದು ಭರವಸೆ ನೀಡಿದದಾರೆಂದು ವಿಕ್ರಮ್ ರಾಜ್ ಅರಸು ತಿಳಿಸಿದ್ದಾರೆ.

Call Now Button