Online News in ಕನ್ನಡ

ಮೈಸೂರಿನ ಉಸ್ತಾದ್‌, ಹೆಸರಾಂತ ಕುಸ್ತಿಪಟು ಪೈಲ್ವಾನ್‌ ಟೈಗರ್‌ ಬಾಲಾಜಿ ನಿಧನ

ಮೈಸೂರು: ನಗರದ ಹೆಸರಾಂತ ಕುಸ್ತಿ ಪಟು ಟೈಗರ್ ಬಾಲಾಜಿ ಜೆಟ್ಟಿ (67) ಇಂದು ನಿಧನರಾದರು.
ನಗರದ ಸುಣ್ಣದಕೇರಿ ನಿವಾಸಿಯಾಗಿರುವ ಇವರು ಕುಸ್ತಿ ಪಂದ್ಯಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗೆದ್ದು ಖ್ಯಾತಿ ಗಳಿಸಿದ್ದರು.
ಕುಸ್ತಿ ಆಖಾಡದಲ್ಲಿ ತಮ್ಮ ಕುಸ್ತಿ ನೈಪುಣ್ಯತೆಯಿಂದ ಅಸಂಖ್ಯಾತ ಕುಸ್ತಿ ಪ್ರಿಯರ ಪಾಲಿಗೆ ಟೈಗರ್ ಎಂದೇ ಗುರುತಿಸಿಕೊಂಡಿದ್ದರು.
350ಕ್ಕೂ ಕುಸ್ತಿ ಪಂದ್ಯಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.
ಪ್ರಸ್ತುತ ಮೈಸೂರು ಅರಮನೆಯಲ್ಲಿ ನಾಡಹಬ್ಬ ದಸರಾ ಉತ್ಸವದ ಕೊನೆಯ ದಿನ ನಡೆಯುವ ವಜ್ರಮುಷ್ಠಿ ಕಾಳಗಕ್ಕೆ ಮೈಸೂರಿನ ಉಸ್ತಾದ್ ಆಗಿ ಪೈಲ್ವಾನರನ್ನು ತರಬೇತಿಗೊಳಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಅನಾರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇವರ ನಿಧನಕ್ಕೆ ಜೆಟ್ಟಿ ಜನಾಂಗದ ಹಲವಾರು ಮುಖಂಡರು ಸಂತಾಪ ಸೂಚಿಸಿದ್ದಾರೆ. ನಾಳೆ ಶನಿವಾರ ಚಾಮುಂಡಿ ಬೆಟ್ಟ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

Call Now Button