ಮೈಸೂರು: ಇತ್ತೀಚೆಗೆ ಮೈಸೂರು ನಗರದಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾಗಿ ಹಲವರನ್ನು ಬಂಧಿಸಿದ ಬೆನ್ನ ಹಿಂದೆಯೇ ಮೈಸೂರು ನಗರದ ರಾಸಾಯನಿಕ ಘಟಕಗಳ ಮೇಲೆ ದಾಳಿ ಮುಂದುವರೆಸಿರುವ ರಾಷ್ಟ್ರೀಯ ಕ್ರೈಮ್ ಬ್ಯೂರೋ ಅಧಿಕಾರಿಗಳು ಪ್ರತಿಯೊಂದು ಕೆಮಿಕಲ್ ಫ್ಯಾಕ್ಟರಿಗಳನ್ನು ಇಂಚಿಂಚ್ಚೂ ಜಾಲಾಡುತ್ತಿದ್ದಾರೆ.

ಇಂದು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಶ್ವಾನದಳಗಳನ್ನು ಬಳಸಿ ತಪಾಸಣೆ ನಡೆಸಲಾಗುತ್ತಿದೆ. ಕಾರ್ಯಾಚರಣೆಗೆ ಆರು ಶ್ವಾನಗಳನ್ನು ಬಳಸಲಾಗಿದೆ. ಪ್ರತಿಯೊಂದು ರಾಸಾಯನಿಕ ಮತ್ತು ಸುಗಂಧ ದ್ರವ್ಯ ಘಟಕಗಳನ್ನು ಜಾಲಾಡುತ್ತಿರುವ ಎನ್‌ಸಿಬಿ ತಂಡಕ್ಕೆ ಇದುವರೆಗೆ ಯಾವುದೇ ಸುಳಿವು ದೊರಕಿಲ್ಲ.
ಯಹೋಧ, ಭೈರಾ, ದತ್ತಿ, ಲಿಯೋ, ಸಿಂಬಾ, ಗರುಡ ಹೆಸರಿನ ಶ್ವಾನಗಳನ್ನು ಕಾರ್ಯಾಚರಣೆಗೆ ಬಳಸಲಾಗಿದೆ. ಈನಡುವೆ, ಮೊನ್ನೆಯಷ್ಟೇ ಹೆಬ್ಬಾಳದ ಕೈಗಾರಿಕಾ ಪ್ರದೇಶದ ಘಟಕವೊಂದರ ಮೇಲೆ ದಾಳಿ ನಡೆಸಲಾಗಿತ್ತು.


