ಮೈಸೂರು: ಜಿಲ್ಲೆಯ ಸರಗೂರು ತಾಲೂಕು ಬಿ.ಮಟಕೆರೆ ಎಸ್‌ಟಿ ಕಾಲೋನಿಯಲ್ಲಿ ಹಠತ್ ಕಾಡಾನೆ ದಾಳಿ ಮಾಡಿ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟಿರುವ ಧಾರೂಣ ಘಟನೆ ಜರುಗಿದೆ.
ಗ್ರಾಮದ ನಿವಾಸಿ ಮಾದ (60) ಎಂಬುವರೇ ಆನೆ ದಾಳಿಗೆ ಬಲಿಯಾದ ರೈತ. ಇಂದು ಬೆಳಗ್ಗಿನ ಜಾವ ಬಹಿರ್ದಸೆಗೆಂದು ತೆರಳುತ್ತಿದ್ದಾಗ ಕಾಡಾನೆ ಹಠತ್ ದಾಳಿ ಮಾಡಿದೆ. ಮಾದನ ಕೂಗಾಟ ಕೇಳಿದ ಗ್ರಾಮಸ್ಥರು ದೌಡಾಯಿಸಿ ಆನೆ ಕಡೆಗೆ ಕಲ್ಲು ತೂರಿ ಆನೆಯನ್ನು ಹಿಮ್ಮೆಟ್ಟಿಸಿದರೂ ಬದುಕಿಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ಕಾಡಂಚಿನ ಗ್ರಾಮಸ್ಥರನ್ನು ರಕ್ಷಿಸಬೇಕೆಂದು ಆಗ್ರಹಿಸಿದ್ದಾರೆ.

