Online News in ಕನ್ನಡ

ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಜೋ ಸೈಮನ್‌ ಹಠಾತ್‌ ನಿಧನ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ, ಸಾಹಸ ಸಿಂಹ ಖ್ಯಾತಿಯ ಜೋ ಸೈಮನ್‌ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾಗಲೇ ಜೋ ಸೈಮನ್‌ ಅವರಿಗೆ ಹೃದಯಾಘಾತವಾಯಿತು.
೮೦ ವರ್ಷದ ಜೋ ಸೈಮನ್‌ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಡಾ. ವಿಷ್ಣುವರ್ಧನ್‌ ಜೊತೆ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ʻಒಂದು ಪ್ರೇಮದ ಕಥೆ, ʻನನ್ನ ರೋಷ ನೂರು ವರಷುʼ, ಸಾಹಸ ಸಿಂಹ, ಊರಿಗೆ ಉಪಕಾರಿ, ಸಿಡಿದೆದ್ದ ಸಹೋದರ, ಪ್ರೇಮ ಜ್ಯೋತಿ, ಪ್ರೇಮ ಜಾಲ ರವಿವರ್ಮ, ಟೈಮ್‌ ಬಾಂಬ್‌ ಸೇರಿದಂತೆ ಅನೆಕ ಸಿನಿಮಗಳಿಗೆ ಕಟ್‌ ಆಕ್ಷನ್‌ ಹೇಳಿದ್ದರು.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ಕಲಾವಿದ ಜೋ ಸೈಮನ್‌ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

Call Now Button