ನಾಗರಹೊಳೆ: ಅಂತರಾಷ್ಟ್ರೀಯ ಹುಲಿಗಳ ಶ್ರುಂಗ ಸಭೆಯ ಅಂಗವಾಗಿ ಅಂತರಾಷ್ಟ್ರೀಯ ಹುಲಿಗಳ ಮೈತ್ರಿ International Big Cat Alliance (IBCA), ರಾ಼ಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority,) ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಯೋಗದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯದಲ್ಲಿ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯ ನಿರ್ವಹಣಾ ಕ್ರಮಗಳ ಎಸ್ಎಕ್ಯುಟಿವ್ ಕೋರ್ಸ್ (Indian Technical and Economic Cooperation (ITEC) Executive Course in Karnataka) ಕಾರ್ಯಕ್ರಮದ ಅಂಗವಾಗಿ ನಿನ್ನೆ ಮತ್ತು ಇಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಸದರಿ ಕಾರ್ಯಕ್ರಮದಲ್ಲಿ ಅರ್ಮೇನಿಯಾ, ಭೂತಾನ್, ಕಾಂಬೋಡಿಯಾ, ಗೌಟೆಮಾಲ, ಕಜಕಿಸ್ಥಾನ, ಲೈಬಿರಿಯಾ, ಮೆಕ್ಸಿಕೋ, ಮಾಲಾವಿ, ಮಾಲಿ, ಮಲೇಶಿಯಾ, ಮಯನ್ಮಾರ್, ನೇಪಾಳ, ನೈಜರ್, ಮಂಗೋಲಿಯಾ, ಪನಾಮಾ, ಪೆರು, ರೊಮಾನಿಯಾ, ಸೊಮಾಲಿಯ, ಶ್ರೀಲಂಕಾ ಹಾಗೂ ರಷ್ಯಾ ದೇಶಗಳಿಂದ ವಿದೇಶಿ ಅಧಿಕಾರಿಗಳು ಹಾಗೂ ಸಂಶೋಧಕರನ್ನು ಒಳಗೊಂಡಂತೆ ಒಟ್ಟು 38 ಗಣ್ಯರು ಭಾಗವಹಿಸಿದ್ದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದ ಮೊದಲನೆ ದಿನ ನಡೆದ ತರಗತಿ ಅಧೀವೇಶನಗಳಲ್ಲಿ ನಡೆದ ಚಟುವಟಿಕೆ :

1. ಸುಸ್ಥಿರ ಪರಿಸರ ಪ್ರವಾಸೋದ್ಯಮ ಮತ್ತು ಜನಸಂಪರ್ಕ ಕಾರ್ಯಕ್ರಮಗಳು ವಿಷಯವಾಗಿ (Sustainable Eco-tourism & Outreach Programs)- ಡಾ. ಅನುಪ್ ಕೆ.ಸಿ., ಸಹಾಯಕ ಪ್ರಾಧ್ಯಾಪಕರು, ಅರ್ಕಾನ್ಸಾಸ್ ವಿಶ್ವವಿದ್ಯಾಲಯ, ಶ್ರೀ ಜೈ ಶರ್ಮಾ ನ್ಯಾಷನಲ್ ಜಿಯಾಗ್ರಫಿಕ್ ಪ್ರಮಾಣೀಕೃತ ಪ್ರಕೃತಿ ಶಿಕ್ಷಕ ಮತ್ತು ಐಯುಸಿಎನ್ ಸಿಇಸಿ ಮತ್ತು ಸಿಸಿಸಿ ಸದಸ್ಯರು, ಯುನೆಸ್ಕೋ ಮತ್ತು ಶ್ರೀ ಸಂತೋಷ್ ಸುತ್ತರ್ , ವನ ಲೋಕ್, ಬೆಂಗಳೂರು ಹವಾಮಾನ ಬದಲಾವಣೆ ಶಿಕ್ಷಣ,
2. ವನ್ಯಜೀವಿ ಸಂರಕ್ಷಣೆಗಾಗಿ ಭೂದೃಶ್ಯ ವಿಧಾನಗಳು, ವಿಷಯವಾಗಿ (Landscape approaches for wildlife conservation)- ಡಾ. ರಮೇಶ್ ಕೃಷ್ಣಮೂರ್ತಿ, ಭಾರತೀಯ ವನ್ಯಜೀವಿ ಸಂಸ್ಥೆಯ ವಿಜ್ಞಾನಿ ಡೆಹ್ರಾಡೂನ್ ಮತ್ತು ಡಾ. ಟಿ. ರಮೇಶ್ ವಿಜ್ಞಾನಿ ಮತ್ತು ರಾಮಾನುಜನ್ ಫೆಲೋ, ಸಂರಕ್ಷಣಾ ಪರಿಸರ ವಿಜ್ಞಾನ ವಿಭಾಗ, SACON ಕೊಯಮತ್ತೂರು ರವರುಗಳು ಪ್ರಾತ್ಯಕ್ಷಿಕೆ ನೀಡಿರುತ್ತಾರೆ.
ನಂತರ, ಸುಸ್ಥಿರ ಪರಿಸರ ಪ್ರವಾಸೋದ್ಯಮ ಅಧ್ಯಯನದ ಭಾಗವಾಗಿ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿ ನಂತರ ಸಾಕಾನೆಗಳ ನಿರ್ವಣೆ ಕುರಿತು ಅಧ್ಯಯನ ನಡೆಸಲು ಬಳ್ಳೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಲಾಗಿರುತ್ತದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದ ಕೊನೆಯ ದಿನ ದಿನಾಂಕ: 13-02-2026ರಂದು ಬೆಳಗಿನ ಹೊತ್ತಿನ ಕ್ಷೇತ್ರ ಭೇಟಿಯ ಅಧ್ಯಯನದೊಂದಿಗೆ ಆರಂಭಿಸಲಾಗಿರುತ್ತದೆ.
ನಂತರ, ಜಂಗಲ್ ಲಾಡ್ಜಸ್ & ರೆಸಾರ್ಟ್ಗಳು, ಕಾರಾಪುರದಲ್ಲಿ ವನ್ಯಪ್ರಾಣಿಗಳ ತರಗತಿ ಅಧೀವೇಶನ ಜರುಗಿದ್ದು, ಸದರಿ ಅಧಿವೇಶನಗಳಲ್ಲಿ
1) ವನ್ಯಪ್ರಾಣಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗಳು- ಶ್ರೀ ರಮೇಶ ಹೆಚ್., ಪಶುವೈದ್ಯಾಧಿಕಾರಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ.
2) ಸಂರಕ್ಷಣಾ ಕಾರ್ಯಗಳಿಗೆ ಆರ್ಥಿಕ ವ್ಯವಸ್ಥೆ- ಶ್ರೀ ರಾನೆನ್ ಬ್ಯಾನರ್ಜಿ, ಪಾಲುದಾರ ಮತ್ತು ನಾಯಕ, ಆರ್ಥಿಕ ಸಲಹಾ ಸೇವೆಗಳ ಸರ್ಕಾರಿ ವಲಯದ ನಾಯಕ, PwC ಇಂಡಿಯಾ, ಅವರಿಂದ ವೀಡಿಯೊ ಸಂದೇಶ.
3) ವಿದೇಶೀ ಪ್ರತಿನಿಧಿಗಳು ತಮ್ಮ ದೇಶದಲ್ಲಿನ ವನ್ಯಜೀವಿ ಸಂಪತ್ತು, ಅವುಗಳ ನಿರ್ವಹಣಾ ಕ್ರಮಗಳು, ಮಾನವ ವನ್ಯಪ್ರಾಣಿ ಸಂಘರ್ಷಗಳು ಮತ್ತು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಕುರಿತಾಗಿ ಪ್ರಾತ್ಯಕ್ಷಿಕೆ.
4) ಭಾರತದಲ್ಲಿ ಆನೆ ಸಂರಕ್ಷಣೆಗೆ ಇರುವ ಸವಾಲುಗಳು ಎಂಬ ವಿಷಯವಾಗಿ ಶ್ರೀ ರಮೇಶ್ ಕುಮಾರ್ ಪಾಂಡೆ, ಐಎಫ್ಎಸ್, ಹೆಚ್ಚುವರಿ ಮಹಾನಿರ್ದೇಶಕರು (ವನ್ಯಜೀವಿ), ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಭಾರತ ಸರ್ಕಾರ ರವರು ಪ್ರಾತ್ಯಕ್ಷಿಕೆ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ವಿದೇಶಾಂಗ ಸಚಿವಾಲಯದ ನಿರ್ದೇಶಕ ನಿತಿನ್ ಪ್ರಮೋದ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ ರಮೇಶ್ ಕುಮಾರ್ ಪಾಂಡೆ, ಐಬಿಸಿಎ ನಿದೇಶಕ ಜೆರೋಮ್ ಮಿಂಜ್, ಎನ್ಟಿಸಿಎ ಸದಸ್ಯ ಕಾರ್ಯದರ್ಶಿ ಡಾ. ಸಂಜಯನ್ ಕುಮಾರ್, ಸುಭಾಷ್ ಮಾಲ್ಖೆಡೆ, ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಹರಿಣಿ ವೇಣುಗೋಪಾಲ್, ಡಾ. ರಮೇಶ್ ಕುಮಾರ್, ಪ್ರಭಾಕರನ್, ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ಪಿ.ಎ. ಹಾಜರಿದ್ದರು.

