Online News in ಕನ್ನಡ

ಜಯಲಲಿತಾ ಶಿಷ್ಯ ಪನ್ನೀರ್‌ ಸೆಲ್ವಂ ಡಿಎಂಕೆ ಪಕ್ಷಕ್ಕೆ ಸೇರ್ಪಡೆ

ಚೆನ್ನೈ: ತಮಿಳುನಾಡಿನ ಕ್ಷಿಪ್ರ ರಾಜಕೀಯ ಬೆಳವಣಿಗೆವೊಂದರಲ್ಲಿ ಎಐಎಡಿಎಂಕೆಯ ಉಚ್ಛಾಟಿತ ನಾಯಕ, ಜಯಲಲಿತಾ ಅವರ ಆಪ್ತ, ಮಾಜಿ ಮುಖ್ಯಮಂತ್ರಿ ಪನ್ನೀರ್‌ ಸೆಲ್ವರಂ ಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಹೊಸ ರಾಜಕೀಯ ಮನ್ವಂತರ ಆರಂಭಗೊಂಡಿದೆ.
ಚೆನ್ನೈನ ಡಿಎಂಕೆ ಪ್ರಧಾನ ಕಚೇರಿಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಸಮ್ಮುಖದಲ್ಲಿ ಪನ್ನೀರ್‌ ಸೆಲ್ವಂ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
೨೦೨೨ರ ಜುಲೈ ೧೧ರಂದು ಎಐಎಡಿಎಂಕೆಯ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ನೇಮಿಸಲಾಗಿತ್ತು. ಇದರ ಬೆನ್ನ ಹಿಂದೆಯೆ ಪನ್ನೀರ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇದೀಗ ಪನ್ನೀರ ಸೆಲ್ವಂ ಅವರ ಸೇರ್ಪಡೆಯಿಂದ ಡಿಎಂಕೆ ಪಕ್ಷಕ್ಕೆ ಶಕ್ತಿ ಬಂದಂತ್ತಾಗಿದೆ.

Call Now Button