ಮೈಸೂರು: ಒಳ ಮೀಸಲಾತಿ ಜಾರಿಗಾಗಿ ನಿಯೋಜಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ವರದಿಯೂ ಅವೈಜ್ಞಾನಿಕವಾಗಿದ್ದು, ಪರಿಶಿಷ್ಟ ಜಾತಿಯ ೧೦೧ ಜಾತಿಗಳ ಒಡಕಿಗೆ ಕಾರಣವಾಗಿದೆ. ಪಕ್ಷಪಾತಿಯಂತೆ ವರದಿ ತಯಾರಿಸಿರುವ ನಾಗಮೋಹನ್ ದಾಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಮತ್ತು ರಾಷ್ಟಿಯ ಪರಿಶಿಷ್ಟ ಜಾತಿ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಕರ್ನಾಟಕ ಸಂವಿಧಾನ ಸಂರಕ್ಷöಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಎನ್.ಭಾಸ್ಕರ್ ತಿಳಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್ಎಸ್ಎಸ್ ಸೂಚನೆಯಂತೆ ನಾಗಮೋಹನ್ ದಾಸ್ ಒಳ ಮೀಸಲಾತಿ ವರದಿ ಸಿದ್ದಪಡಿಸಿ ಹೊಲಯ ಮಾದಿಗ ಜಾತಿಗಳನ್ನು ಛಿದ್ರ ಛಿದ್ರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಪರಿಶಿಷ್ಟ ಜಾತಿ ಸಮುದಾಯಗಳನ್ನು ಕಾಂಗ್ರೆಸ್ ಪಕ್ಷ ದಿಂದ ದೂರ ಮಾಡಿ ಬಿಜೆಪಿ ತನ್ನತ್ತ ಸೆಳೆಯಲು ಮಾಡಿರುವ ಹುನ್ನಾರವಾಗಿದೆ.
ಬಲಗೈ ಸಮುದಾಯದ ಸಚಿವರು ಶಾಸಕರು ಮುಂದಿನ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತಾರೆಂದು ಮಾದಿಗ ಸಮಾಜದ ಭಾಸ್ಕರ್ ಪ್ರಸಾದ್ ಸವಾಲು ಹಾಕಿರುತ್ತಾರೆ. ಅದನ್ನು ಸ್ವೀಕರಿಸುತ್ತಾ ನಿಮ್ಮ ಎಡಗೈ ಸಮುದಾಯದ ಸಚಿವರು ಶಾಸಕರು ಹೇಗೆ ಗೆಲ್ಲುತ್ತಾರೆ ನೋಡೋಣ. ಈ ರೀತಿಯ ಗೊಡ್ಡು ಬೆದರಿಕೆ ನಮ್ಮಲ್ಲಿ ನಡೆಯುವುದಿಲ್ಲ. ಮಾದಿಗ ಸಮಾಜ ಹಿಂದಿನಿಂದಲೂ ಬಿಜೆಪಿಗೆ ಮತ ಕೊಡುತ್ತಿರುವುದು ಗುಟ್ಟಿನ ವಿಷಯವಲ್ಲ. ನಿಮ್ಮ ನಂಬಿ ಸ್ಪರ್ಧಿಸುವ ಅಗತ್ಯ ಇಲ್ಲ. ಬಿಜೆಪಿ ಗುಲಾಮರಂತೆ ಹೇಳಿಕೆ ನೀಡುವವರು ಕಾಂಗ್ರೆಸ್ ಪಕ್ಷವನ್ನು ಹಾಳುಗೆಡವ ಪ್ರಯತ್ನವಾಗಿದೆ.
-ಎನ್. ಭಾಸ್ಕರ್
ಇದನ್ನರಿಯದ ಕಾಂಗ್ರೆಸ್ ಸಚಿವರು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ರೀತಿಯಲ್ಲಿ ಹೇಳಿಕೆ ನೀಡಿ ರಾಜೀನಾಮೆಗೆ ಮುಂದಾಗುವುದು ಸರಿಯಲ್ಲ. ನಾಗಮೋಹನ್ ದಾಸ್ ತನ್ನ ಬಹು ದಿನದ ಆಸೆ ಈಡೇರಿದೆ ಎಂದು ಹೇಳಿರುವುದು ರಾಜ್ಯದ ಜನ ಪ್ರತಿನಿಧಿಗಳಿಗೆ ಅರ್ಥ ವಾಗಲಿಲ್ಲವೇ? ಇವರ ಉದ್ದೇಶ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆದು ಬಿಜೆಪಿ ಪಕ್ಷ ವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ವರದಿ ಸೃಷ್ಟಿಸಿ ೧೦೧ ಜಾತಿ ಗಳಲ್ಲಿ ಒಡಕು ಉಂಟು ಮಾಡುವ ರೀತಿಯಲ್ಲಿ ವರದಿ ಸಿದ್ದಪಡಿಸಿದ್ದಾರೆ.
ರಾಜ್ಯಾದಲ್ಲಿ ಹೊಲಯ ಮಾದಿಗರು ಅಣ್ಣ ತಮ್ಮಂದಿರಂತೆ ಇದ್ದೆವು ಬಿಜೆಪಿ ಮತ್ತು ಆರ್ಎಸ್ಎಸ್, ವಾದಿರಾಜನ್ ವ್ಯಕ್ತಿಯ ಮೂಲಕ ಸಮಾಜದ ಸ್ವಾಸ್ತ್ಯತೆ ಯನ್ನು ಹಾಳುಮಾಡಿ ಗಲಾಟೆ ಘ ರ್ಷಣೆಗೆ ಕಾರಣರಾಗಿ ಸಾರ್ವಜನಿಕರ ನೆಮ್ಮದಿ ಹಾಳುಮಾಡಿದ್ದಾರೆ. ಇವರೆಲ್ಲರೂ ಸೇರಿ ಪರಿಶಿಷ್ಟ ಜಾತಿಯ ೧೦೧ ಜಾತಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಎಂಗೆ ಮನವಿ: ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ಶೇ. ೧೭ ಹೆಚ್ಚಿಸಿ ಒಳ ಮೀಸಲಾತಿ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ ಸಂಬಧಿತ ಉಪ ಜಾತಿಗಳನ್ನು ಮೂರು ಪ್ರವರ್ಗಗಳಾಗಿ ಅಂದರೆ ಪ್ರವರ್ಗ ಎ, ಪ್ರವರ್ಗ ಬಿ, ಪ್ರವರ್ಗ ಸಿ ಎಂದು ವಿಂಗಡಿಸಿ ಮೀಸಲಾತಿಯನ್ನು ಕ್ರಮವಾಗಿ ಪ್ರವರ್ಗ ಎಗೆ ಶೇಕಡ ೬, ಪ್ರವರ್ಗ ಬಿಗೆ ಶೇ. ೬, ಪ್ರವರ್ಗ ಸಿಗೆ ಶೇ. ೫ರ ಅನುಪಾತದಲ್ಲಿ ವಿಂಗಡಿಸಿ ಜಾರಿಗೆ ತರಲು ಕಾಯಿದೆ ತಂದಿರುವುದು ಶ್ಲಾಘನೀಯ. ಅದರಂತೆ ಒಳ ಮೀಸಲಾತಿ ಕಾಯಿದೆ ಅನ್ವಯ ಮೀಸಲಾತಿ ಹಂಚಿಕೆಗೆ ಕಾನೂನು ರೂಪಿಸುವಲ್ಲಿ ಯಾವುದೇ ಪ್ರವರ್ಗಕ್ಕೂ ಅನ್ಯಾಯವಾಗದಂತೆ ರೋಸ್ಟರ್ ಬಿಂದುವನ್ನು ನಿಗದಿಪಡಿಸುವಲ್ಲಿ ಕ್ರಮವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎನ್.ಭಾಸ್ಕರ್ ಮನವಿ ಮಾಡಿದ್ದಾರೆ.


