Online News in ಕನ್ನಡ

ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ಗೆ ದಾಖಲಾದ ಪಿರಿಯಾಪಟ್ಟಣದ ೧೩ ವರ್ಷದ ಬಾಲಕ…!

ಪಿರಿಯಾಪಟ್ಟಣ: 13 ವರ್ಷ 9 ತಿಂಗಳ ವಯಸ್ಸಿನಲ್ಲಿ ಕಣ್ಣು ಮುಚ್ಚಿಕೊಂಡು 2  2 ಮಿರರ್ ಕ್ಯೂಬ್ ಅನ್ನು 15 ಸೆಕೆಂಡುಗಳಲ್ಲಿ ಪರಿಹರಿಸಿದ ಪಟ್ಟಣದ ಕೆ.ಎಲ್.ಗೌರಿನಂದನ ಏಷ್ಯಾ ಬುಕ್ ಆಫ್ ರೆಕಾರ್ಡ್ ಗೆ ದಾಖಲಾಗುವ ಮೂಲಕ ಗ್ರ್ಯಾಂಡ್ ಮಾಸ್ಟರ್ ಎನಿಸಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿಯಾಗಿರುವ ಕೂರನ ಲೋಕೇಶ್ ಮಧು ಮತ್ತು ಸಿಂಧು ದಂಪತಿಗಳ ಪುತ್ರ ಕೆ.ಎಲ್.ಗೌರಿನಂದನ ಮಡಿಕೇರಿ ಗಾಳಿಬೀಡು ನಲ್ಲಿರುವ ನವೋದಯ ವಿದ್ಯಾಸಂಸ್ಥೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದು 2025 ರ ಡಿಸೆಂಬರ್ 31 ರಂದು ಏಷ್ಯಾ ಬುಕ್ ಆಫ್ ರೆಕಾರ್ಡ್ ಗೆ ಈ ಪ್ರದರ್ಶನವನ್ನು ಕಳುಹಿಸಿದ್ದರು. ಕೇವಲ 15 ಸೆಕೆಂಡ್ ಗಳಲ್ಲಿ ಕಣ್ಣು ಮುಚ್ಚಿಕೊಂಡು 2 * 2 ಮಿರರ್ ಕ್ಯೂಬ್ ನ್ನು ಪರಿಹರಿಸಿದ 13 ವರ್ಷ 9 ತಿಂಗಳ ವಯಸ್ಸಿನ ಕೆ.ಎಲ್.ಗೌರಿನಂದನ ನ ದಾಖಲಾತಿಗಳನ್ನು ಪರಿಶೀಲಿಸಿರುವ ಏಷ್ಯಾ ಬುಕ್ ಆಫ್ ರೆಕಾರ್ಡ್ ವಿಭಾಗವು ಇದೀಗ ಈ ಬಾಲಕನಿಗೆ ಗ್ರಾಂಡ್ ಮಾಸ್ಟರ್ ಪ್ರಶಸ್ತಿ ನೀಡಿ ಗೌರವಿಸಿದೆ.
ಬಾಲಕನ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ಸ್ಥಳೀಯ ಬಂಧು ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.

Call Now Button