Online News in ಕನ್ನಡ

ಎಚ್‌ಪಿಎಂ ಹುಟ್ಟುಹಬ್ಬಕ್ಕೆ ಯುವಕರಿಗೆ ಉದ್ಯೋಗ ಗಿಫ್ಟ್‌

ಹುಣಸೂರಿನಲ್ಲಿ ಮೇ 23ರಂದು ಬೃಹತ್‌ ಉದ್ಯೋಗ ಮೇಳ ಆಯೋಜನೆ
ಹುಣಸೂರು: ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ರವರ 59 ನೇ ಹುಟ್ಟು ಹಬ್ಬದ ಅಂಗವಾಗಿ ಸ್ನೇಹಜೀವಿ ಬಳಗದ ಸಹಯೋಗದಲ್ಲಿ ಹುಣಸೂರಿನ ಅಂಬೇಡ್ಕರ್ ಭವನದಲ್ಲಿ ಮೇ.23 ರ ಶನಿವಾರ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ವಿಷನ್ ಅಸ್ತ್ರ ಇ.ವಿ. ಅಕಾಡೆಮಿ ಸಿ.ಇ.ಒ. ನಿಖಿಲ್ ಜೈನ್ ಸಿ.ಎಸ್. ತಿಳಿಸಿದರು.
ಉದ್ಯೋಗ ಮೇಳದ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಎಸ್.ಎಸ್.ಎಲ್.ಸಿ .ಪಾಸ್, ಪಿ.ಯು.ಸಿ, ಡಿಪ್ಲೋಮೋ, ಡಿಗ್ರಿಯಲ್ಲಿ ಉತ್ತೀರ್ಣ ಹಾಗೂ ಅನುತ್ತೀರ್ಣರಾಗಿರುವ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು. ಮೈಸೂರು, ಹುಣಸೂರು, ಕೆ.ಆರ್.ನಗರ, ಎಚ್.ಡಿ.ಕೋಟೆ ತಾಲೂಕುಗಳ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಮೈಸೂರಿನ ಕಡಕೊಳದ ಟಿ.ವಿ.ಎಸ್. ಕಂಪನಿಯ ವಿವಿಧ ವಿಭಾಗದಲ್ಲಿ ಉದ್ಯೋಗ ಕಲ್ಪಿಸಲಾಗುವುದು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಅಭ್ಯರ್ಥಿಗಳಿಗೆ 17.500 ರಿಂದ 19 ಸಾವಿರ ಹಾಗೂ ಡಿಪ್ಲೊಮೋ ಮತ್ತು ಡಿಗ್ರಿ ಪಾಸಾದವರಿಗೆ 19 ರಿಂದ 20500 ರೂ ವರೆಗೆ ಸಂಬಳ. ಊಟದ ವ್ಯವಸ್ಥೆ. ಪಿ.ಎಫ್ ,ಇ ಎಸ್.ಐ. ಸೌಲಬ್ಯ ಸಿಗಲಿದ್ದು. ಆಸಕ್ತರು ಮೇಳದಲ್ಲಿ ಬಾಗವಹಿಸುವಂತೆ ಮನವಿ ಮಾಡಿದರು.
ವಿಷನ್ ಅಸ್ರ ಇ.ವಿ. ಅಕಾಡೆಮಿ ಅಧ್ಯಕ್ಷ
ಮಾತನಾಡಿ ತಮ್ಮ ಅಕಾಡೆಮಿಯು ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ಯದುಜತವದನ್ ಮಾತನಾಡಿ ಹೊರ ರಾಜ್ಯಗಳ. ವಿವಿಧ ಪ್ರತಿಷ್ಟಿತ ಕಂಪನಿಗಳಿಗೆ ಉದ್ಯೋಗಿಗಳನ್ನು ನೇಮಿಸಿಕೊಡುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು. ಮೇಳದಲ್ಲಿ ಕಂಪನಿಯವರೆ ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಇದರಲ್ಲಿ ಯಾವುದೇ ಮದ್ಯವರ್ತಿಗಳಿಗೆ ಅವಕಾಶ ವಿಲ್ಲ. ಹುಣಸೂರಿನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಮೈಸೂರು ಜಿಲ್ಲೆಯ ಯಾವುದೇ ಬಾಗದ ನಿರುದ್ಯೋಗಿಗಳು ಬಾಗವಹಿಸಬಹುದಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿರುವ ತಾಲೂಕು ಅಥವಾ ಹೋಬಳಿಗೆ ಟಿ.ವಿ.ಎಸ್. ಕಂಪನಿವತಿಯಿಂದಲೇ ಬಸ್ ಹಾಗೂ ಅಗತ್ಯ ಉಳ್ಳವರಿಗೆ ಪಿ.ಜಿ.ವ್ಯವಸ್ಥೆ ಸಹ ಕಲ್ಪಿಸುವರೆಂದು ಮಾಹಿತಿ ನೀಡಿದರು.ಸುದ್ದಿಗೋಷ್ಟಿಯಲ್ಲಿ ಸ್ನೇಹಜೀವಿ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಆರ್.ಆನಂದ್, ಕಾರ್ಯದರ್ಶಿ ಸಚ್ಚಿನ್ ಪ್ರಕಾಶ್, ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಕುಮಾರ್ ಇದ್ದರು.

Call Now Button