Online News in ಕನ್ನಡ

ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧೀಜಿ ಹೆಸರು ನಾಮಕರಣ : ರಾಜ್ಯ ಸರಕಾರ

ಕೇಂದ್ರದ ವಿಬಿ ಜಿ ರಾಮ್‌ ಜಿ ಕಾಯ್ದೆ ವಿರುದ್ದ ಕಾಂಗ್ರೆಸ್‌ ರಾಜ್ಯಭವನ ಚಲೋ ಚಳವಳಿ

ಬೆಂಗಳೂರು: ಮನರೇಗಾ ಯೋಜನೆಯಿಂದ ಮಹಾತ್ಮ ಗಾಂಧೀಜಿ ಹೆಸರು ಕೈಬಿಟ್ಟ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಿರುವ ರಾಜ್ಯ ಕಾಂಗ್ರೆಸ್‌ ಸರಕಾರ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧಿಜಿ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಧರಿಸಿದೆ. ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜಂಟಿ ಘೋಷಣೆ ಮಾಡಿದ್ದಾರೆ.
ಇಂದು ರಾಜಧಾನಿಯಲ್ಲಿ ಮನರೇಗಾ ಯೋಜನೆ ಮರು ಸ್ಥಾಪನೆಗೆ ರಾಜ್ಯಭವನ ಚಲೋ ಚಳವಳಿ ಹಮ್ಮಿಕೊಂಡು ಮಾತನಾಡಿದರು. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಸೇರಿದಂತೆ ರಾಜ್ಯದ ಪ್ರಮುಖ ಸಚಿವರು, ಶಾಸಕರು ಮತ್ತು ಕಾಂಗ್ರೆಸ್‌ ಮುಖಂಡರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಗೋಟ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಮನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದು ಇಲ್ಲಿ ಗಾಂಧೀ ಪ್ರತಿಮೆ ಮುಂದೆ ಪ್ರತಿಭಟನೆ ಮಾಡುವ ಬಿಜೆಪಿಗೆ ಹೋರಾಟ ಮಾಡುವ ನೈತಿಕತೆಯೆ ಇಲ್ಲ. ವಿಬಿ ಜಿ ರಾಂ ಜಿ ಕಾಯ್ದೆಯನ್ನು ಜಾರಿಗೆ ತಂದು ಗ್ರಾಮ ಪಂಚಾಯ್ತಿಗಳ ಅಧಿಕಾರ ಕಸಿದುಕೊಳ್ಳಲಾಗಿದೆ. ಗ್ರಾಮೀಣ ಜನರ ಕೈಯಲ್ಲಿದ್ದ ಹಕ್ಕು ಕಂಟ್ರಾಕ್ಟರ್‌ಗಳಿಗೆ ನೀಡಲಾಗಿದೆ. ಇದನ್ನು ವಿರೋಧಿಸಿ ರಾಜ್ಯದ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮ ಗಾಂಧೀಜಿ ಗ್ರಾಮ ಪಂಚಾಯ್ತಿ ಎಂದು ಹೆಸರು ನಾಮಕರಣ ಮಾಡಲಾಗುವುದು
– ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ‌


ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಬಿಜೆಪಿ ಸರಕಾರವು ಮನರೇಗಾ ಕಾಯ್ದೆಗೆ ತಿದ್ದುಪಡಿ ತಂದು ವಿಬಿ ಜಿರಾಮ್‌ ಜಿ ಕಾಯ್ದೆ ಜಾರಿಗೆ ತಂದಿರುವುದು ಒಂದೆಡೆ ಮಹಾತ್ಮ ಗಾಂಧೀಜಿ ಅವರಿಗೆ ಮಾಡಿದ ಅವಮಾನ ಮತ್ತೊಂದೆಡೆ ಗ್ರಾಮೀಣ ಜನರ ಸಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡಂತ್ತಾಗಿದೆ. ಮತ್ತೊಂದೆಡೆ ರಾಜ್ಯ ಸರಕಾರಗಳಿಗೂ ಶೇ.40ರಷ್ಟು ಪಾಲು ನಿಗದಿ ಮಾಡಿ ಆರ್ಥಿಕ ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಈಹಿನ್ನಲ್ಲೆಯಲ್ಲಿ ಇಂದಿನಿಂದ ಆರಂಭಗೊಂಡಿರುವ ರಾಜಭವನ ಚಲೋ ಚಳವಳಿ ಕಾಯ್ದೆ ಮರಳಿ ಸ್ಥಾಪಿಸುವವರೆಗೂ ಮುಂದುವರೆಯಲಿದ್ದು ತಾಲೂಕು ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಪಾದಯಾತ್ರೆ, ಪ್ರತಿಭಟನೆಗಳು ನಡೆಯಲಿದೆ ಎಂದು ತಿಳಿಸಿದರು.
ಕಳೆದ 20 ವರ್ಷಗಳ ಹಿಂದೆ ಪ್ರಧಾನಿ ಮನಮೋಹನ ಸಿಂಗ್‌ ಜಾರಿಗೆ ತಂದ ಮನರೇಗಾ ಯೋಜನೆಯಿಂದ ವರ್ಷಕ್ಕೆ ನೂರು ದಿನ ರೈತ ಬಯಸಿದಂತ ದಿನ ಮತ್ತು ಸ್ಥಳದಲ್ಲಿ ಕೆಲಸ ಸಿಗುತ್ತಿತ್ತು. ಆದರೆ, ಈಗ ಕಂಟ್ರಾಕ್ಟರ್‌ ಹೇಳಿದ ದಿನ ಮತ್ತು ಸ್ಥಳದಲ್ಲಿ ಕೆಲಸ ನೀಡಲು ಹೊರಟಿದ್ದಾರೆ. ಹಿಂದಿನ ಯೋಜನೆಯಲ್ಲಿ ನೂರಕ್ಕೆ ನೂರಷ್ಟು ಅನುದಾನವನ್ನು ಕೇಂದ್ರ ಸರಕಾರ ಭರಿಸುತ್ತಿತ್ತು. ಈಗ ಶೇ. 40ರಷ್ಟು ಹಣವನ್ನು ರಾಜ್ಯ ಸರಕಾರ ನೀಡಬೇಕೆಂದು ಕಾನೂನು ಮಾಡಿದ್ದಾರೆ. ಇದರಿಂದ ರಾಜ್ಯ ಸರಕಾರಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಾಗಿದೆ ಎಂದು ತಿಳಿಸಿದರು.
ಎಲ್ಲ ಗ್ರಾಮ ಪಂಚಾಯ್ತಿಗೆ ಗಾಂಧೀ ಹೆಸರು:

Call Now Button