Online News in ಕನ್ನಡ

ಬಿಹಾರ ವಿಧಾನಸಭಾ ಚುನಾವಣೆ: ಎನ್‍ಡಿಎ ಮೈತ್ರಿಗೆ ಚಾರಿತ್ರಿಕೆ ಗೆಲುವು

ಬಿಹಾರ: ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಆರ್‍ಜೆಡಿ ನೇತೃತ್ವದ ಎನ್‍ಡಿಎ ಮಿತ್ರ ಪಕ್ಷಕ್ಕೆ ಅಭೂತಪೂರ್ವ ಗೆಲುವು ದೊರಕಿದೆ. 243 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್‍ಡಿಎ ಪೈತ್ರಿಕೂಟ 204 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು 66 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ. ಸರಕಾರ ರಚನೆಗೆ 122 ಸ್ಥಾನಗಳು ಅಗತ್ಯವಿದ್ದು ಈಗಾಗಲೇ ಬಿಜೆಪಿ 95 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿಯಗೊಂಡಿದೆ. ಹಾಗೂ ಇದರ ಮಿತ್ರ ಪಕ್ಷ ಜೆಡಿಯು 84 ಸ್ಥಾನಗಳಲ್ಲಿ ಜಯಗಳಿಸುವ ಸ್ಪಷ್ಟ ಸೂಚನೆ ದೊರಕಿದೆ. ಮಿತ್ರ ಪಕ್ಷಗಳಾದ ಎಲ್‍ಜೆಪಿ (ಆರ್) 19 ಸ್ಥಾನಗಳನ್ನು, ಹೆಚ್‍ಎಎಂ (ಎಸ್) 5 ಸ್ಥಾನಗಳನ್ನು ಹಾಗೂ ಆರ್‍ಎಲ್‍ಎಂ 4 ಸ್ಥಾನಗಳನ್ನು ಪಡೆದಿವೆ. ಆಮೂಲಕ ಬಿಹಾರದಲ್ಲಿ ಮತ್ತೊಮ್ಮೆ ಎನ್‍ಡಿಎ ಸರಕಾರ ಅಸ್ಥಿತ್ವಕ್ಕೆ ಬರಲಿದೆ.
ಈ ಬಾರಿ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಲಿದೆ ಎಂದು ಭಾವಿಸಿದ್ದ ಆರ್‍ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾ ಘಟ ಬಂಧನ್ ಹೀನಾಯ ಸೋಲು ಅನುಭವಿಸಿದ್ದು ಕೇವಲ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆರ್‍ಜೆಡಿ 25 ಸ್ಥಾನ, ಕಾಂಗ್ರೆಸ್ 6 ಸ್ಥಾನ, ಎಡಪಕ್ಷ 4 ಸ್ಥಾನ ಮತ್ತು ಐಐಪಿ 1 ಸ್ಥಾನದಲ್ಲಿ ಗೆಲುವು ದಾಖಲಿಸಲು ಮಾತ್ರ ಶಕ್ತಗೊಂಡಿದೆ. ಈ ಬಾರಿ ಯಾದವ ಮತ್ತು ಮುಸ್ಲಿಂ ಸಮುದಾಯದ ಮತ ಸಮೀಕರಣ ಹಾಗೂ ಮಹಿಳೆಯರ ಖಾತೆಗೆ 10 ಸಾವಿರ ರೂ.ಗಳ ಗ್ಯಾರಂಟಿ ಹಣ ನೀಡಿದ ಎನ್‍ಡಿಎ ಮೈತ್ರಿಯ ರಾಜಕೀಯ ತಂತ್ರಗಾರಿಕೆ ಯಶಸ್ವಿಯಾಗಿದೆ.
ಆರಂಭದಲ್ಲಿ 20 ವರ್ಷಗಳ ಮುಖ್ಯಮಂತ್ರಿ ನಿತೀಶ್‍ಕುಮಾರ್ ಅವರ ಆಡಳಿತದಿಂದ ಬಿಹಾರಕ್ಕೆ ಮುಕ್ತಿ ಸಿಗಲಿದೆ ಎಂದು ಭಾವಿಸಿದ್ದ ಮಹಾ ಘಟ ಬಂಧನದ ನಾಯಕರ ನಿರೀಕ್ಷೆ ಹುಸಿಯಾಗಿದೆ. ಮೈತ್ರಿ, ಸೀಟು ಹಂಚಿಕೆ, ಮತ ಪ್ರಚಾರ, ಬಂಡಾಯ ಶಮನ ಹೀಗೆ ಎಲ್ಲ ಹಂತದಲ್ಲೂ ಎಡವಿದ ಮಹಾ ಘಟ ಬಂಧನ ಹೀನಾಯ ಸೋಲಿಗೆ ಕಾರಣವಾಯಿತು.
ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಾದ ಸುಮಾರು 100 ಕ್ಷೇತ್ರಗಳಲ್ಲಿ ಮಹಾ ಘಟ ಬಂಧನ ಮುನ್ನಡೆ ಸಾಧಿಸಿದ್ದರೂ, ಎಣಿಕೆ ಪ್ರಗತಿಯಾದಂತೆ ಎನ್‍ಡಿಎ ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಹಿಡಿಯಲು ಸಾಧ್ಯವಾದಷ್ಟರ ಮಟ್ಟಿಗೆ ಮತ ಪ್ರಮಾಣದಲ್ಲಿ ಏರಿಕೆಯಾಯಿತು.

Call Now Button