ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ಕಳೆದ 15 ದಿನಗಳಿಂದ ನಡೆಯುತ್ತಿದ್ದು, ಇಂದು ರಾತ್ರಿಯೇ ಸಚಿವರ ಪಟ್ಟಿ ಅಂತಿಮ ಪಡಿಸುವ ಸಾಧ್ಯತೆ ಇದೆ. ಈ ಸುಳಿವನ್ನು ನೀಡಿದವರು ಮಾಜಿ ಸಿಎಂ ಸಿದ್ದರಾಮಯ್ಯ. ಮೈಸೂರಿಗಿಂದು ಆಗಮಿಸಿದ್ದ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.
ʻರಾಜ್ಯ ಸರಕಾರದ ಸಚಿವ ಸಂಪುಟ ಇಂದು ರಾತ್ರಿ ಅಂತಿಮಗೊಳ್ಳುವ ಎಲ್ಲ ಸಾಧ್ಯತೆ ಇದೆ. ಇಂದು ರಾತ್ರಿ ದೆಹಲಿಯಲ್ಲಿ ಮತ್ತೆ ಸಭೆ ಕರೆಯಲಾಗಿದೆʼ ಎಂದಷ್ಟೇ ಹೇಳಿ ಉಳಿದ ಪ್ರಶ್ನೆಗಳಿಗೆ ಸಿಎಂ ಡಿ.ಕೆ.ಶಿವಕುಮಾರ್ ಅವರತ್ತ ಕೈತೋರಿಸಿ ಮುಂದೆ ನಡೆದಿದ್ದಾರೆ.
ತಮ್ಮ ಹಿರಿಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ ಪುಣ್ಯ ಸ್ಮರಣೆಯ ಅಂಗವಾಗಿ ಮೈಸೂರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಯಾವತ್ತು ವಿಸ್ತರಣೆ ಆಗುತ್ತೆ ? ಎಂಬ ಪ್ರಶ್ನೆಗೆ ಇದನೆಲ್ಲ ಸಿಎಂಗೆ ಕೇಳಿ ಎಂದರು.
ಇಂದು ಮಧ್ಯಾಹ್ನ ಮೈಸೂರಿಗೆ ಆಗಮಿಸಿ ಮಗನ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮತ್ತೆ ಸಂಜೆ ವಾಪಸ್ ದೆಹಲಿಗೆ ತೆರಳುವರು.


