Online News in ಕನ್ನಡ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕುತೂಹಲ : ಉಪಹಾರ ಕೂಟ ಆರಂಭ

ಬೆಂಗಳೂರು: ಬದಲಾದ ರಾಜಕೀಯ ಸನ್ನಿವೇಶದ ಹಿನ್ನಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಕ್ಷಣಗಣನೆ ಆರಂಭಗೊಂಡಿದೆ.
ಈಗಾಗಲೇ ಸಿಎಂ ನಿವಾಸದಲ್ಲಿ ಆಯೋಜಿಸಿರುವ ಉಪಹಾರಕೂಟಕ್ಕೆ ಕಾಂಗ್ರೆಸ್ ಶಾಸಕರು , ಸಚಿವರು ಆಗಮಿಸಲು ಆರಂಭಿಸಿದ್ದಾರೆ. ಕುತೂಹಲ ಸಂಗತಿಯೆಂದರೆ, ಈವರೆಗೂ ಶಾಸಕಾಂಗ ಸಭೆ ಕರೆಯುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಪ್ರತಿಕ್ಷಣದ ಬೆಳವಣಿಗೆಯನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈಗಾಗಲೇ ಸಿಎಂ ರಾಜೀನಾಮೆ ವಿರೋಧಿಸಿ ರಾಜ್ಯವ್ಯಾಪಿ ಹೋರಾಟ ಆರಂಭಗೊಂಡಿದೆ.
ರಾಜ್ಯಪಾಲರು ಅಲಭ್ಯ:
ಈನಡುವೆ, ಸಿಎಂ ಕಚೇರಿಯಿಂದ ರಾಜ್ಯಪಾಲರಿಗೆ ಸಿಎಂ ಭೇಟಿಗೆ ಸಮಯ ಕೋರಲಾಗಿತ್ತು. ಬೆಳಗ್ಗೆ 10.30 ಅಥವಾ 3.30ಕ್ಕೆ ಸಮಯ ಕೋರಲಾಗಿತ್ತು. ಆದರೆ, ಸಂಬಂಧಿಕರ ಅನಾರೋಗ್ಯ ಕಾರಣ ರಾಜ್ಯಪಾಲರು ಹೊರ ರಾಜ್ಯಕ್ಕೆ ತೆರಳಿದ್ದಾರೆ.

Call Now Button