ಕೆ.ಆರ್.ನಗರ : ಸಂಬಂದಿಕರ ಸಾವಿನ ಅಂತ್ಯಕ್ರಿಯೆಗೆ ದಂಪತಿಗಳು ಬೈಕ್ ನಲ್ಲಿ ಹೋಗುವಾಗ ಯಮರಾಜನಂತೆ ಎದುರುಗಡೆಯಿಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ದಂಪತಿಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕಗ್ಗರೆ ಮತ್ತು ನಾರಾಯಣಪುರ ಬಳಿ ನಡೆದಿದೆ.
ಮೃತಪಟ್ಟ ದಂಪತಿಗಳು ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಬೀರನಹಳ್ಳಿ ಗ್ರಾಮದ ನಂಜುಂಡಸೋಮ ಚಾರ್ (51) ಇವರ ಪತ್ನಿ ನೇತ್ರಾವತಿ(48), ಎಂಬ ದುರ್ದೈವಿಗಳಾಗಿದ್ದಾರೆ.

ಮೈಸೂರಿನ ಹೆಬ್ಬಾಳು ಮೂರನೇ ಹಂತದ ಸುಬ್ರಹ್ಮಣ್ಯ ನಗರದ ಮಗಳು ಮೇಘನಾ ಮನೆಯಲ್ಲಿ ವಾಸವಿದ್ದ ನಂಜುಂಡಸೋಮಚಾರ್ ಅವರು ಕಟ್ಟಡ ಕಾರ್ಮಿಕರ ಸೆಂಟ್ರಿಂಗ್ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದು ಇವರಿಗೆ ಒರ್ವ ಪುತ್ರ, ಪುತ್ರಿ ಇದ್ದಾರೆ.
ಘಟನೆ : ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಬಳಿಯ ಮುತ್ತಕದ ಹೊಸೂರು ಗ್ರಾಮದ ಸಂಬಂದಿಕರ ಸಾವಿನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇಂದು ಬೆಳಗ್ಗೆ ನಂಜುಂಡಸೋಮಚಾರ್ ತಮ್ಮ ಪತ್ನಿ ನೇತ್ರಾವತಿ ಜೊತೆ ಬಜಾಜ್ ಡಿಸ್ಕವರಿ ಬೈಕ್ ನಲ್ಲಿ ಇಲವಾಲ ಮತ್ತು ಸಾಗರಕಟ್ಟೆ ಮಾರ್ಗವಾಗಿ ನಾರಾಯಣಪುರ ಕಗ್ಗರೆ ಮೂಲಕ ಹಂಪಾಪುರ ಕಡೆಯಿಂದ ರಾಮನಾಥಪುರಕ್ಕೆ ತೆರಳುವ ಮಾರ್ಗ ಮದ್ಯೆ ನಾರಾಯಣಪುರ ಮತ್ತು ಕಗ್ಗರೆ ಬಳಿ ಅತೀ ವೇಗವಾಗಿ ಎದುರುನಿಂದ ಬಂದ ಕಾರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಅನತಿ ದೂರ ದಂಪತಿಗಳಿದ್ದ ಬೈಕ್ ಸಮೇತ ಹಾರೋಗಿ ಬಿದ್ದ ಪರಿಣಾಮ ತೀವ್ರವಾಗಿ ಗಂಬೀರವಾಗಿ ಗಾಯಗೊಂಡ ದಂಪತಿಗಳನ್ನು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಅಂಬ್ಯೂಲೆನ್ಸ್ ಮೂಲಕ ಕರತಂದಾಗ ದಂಪತಿಗಳು ಮೃತಪಟ್ಟಿದ್ದಾರೆ. ಅಪಘಾತ ಮಾಡಿದ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸಂಬಂದ ಅಪಘಾತದಲ್ಲಿ ಮೃತಪಟ್ಟ ದಂಪತಿಗಳ ಪುತ್ರ ರವಿಕುಮಾರ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿ ಕೊಂಡ ಪಟ್ಟಣದ ಪೊಲೀಸ್ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಅಪಘಾತ ನಡೆದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟ ದಂಪತಿಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸ್ಸುದಾರರಿಗೆ ನೀಡಿದರು.


