ಮೈಸೂರು: ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸಿ ಎಂದು ಉಪ ಪೊಲೀಸ್ ಅಧೀಕ್ಷಕರಾದ ಸಿ.ಮಲ್ಲಿಕ್ ಕರೆ ನೀಡಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರಿಗೆ ಡ್ರಗ್ಸ್ ಬಳಕೆ ಅಪರಾದ ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಯಾರು ಮತ್ತಿನಲ್ಲಿ ಇರುವ ಬಗ್ಗೆ ಅನುಮಾನ ಬಂದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಸೂಚನೆ ನೀಡಿದರು.
ಅಬಕಾರಿ ಇಲಾಖೆಯವರು ನಿಯಮಿತವಾಗಿ ರೈಡ್ ಗಳನ್ನು ಮಾಡಬೇಕು. ಕೃಷಿ ಜಮೀನಿನಲ್ಲಿ, ಮನೆಯ ಹಿತ್ತಲಿನ ಪರದೇಶಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಯುವ ಸಂಭವ ಇರುತ್ತದೆ. ನಿಯಮಿತವಾಗಿ ರೈಡ್ ಮಾಡುವ ಮೂಲಕ ಬೆಳೆಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ ಸಿಗರೇಟು ಸೇವನೆ ನಿಷಿದ್ದ, ತಾವು ಸೇವನೆ ಮಾಡುವುದಲ್ಲದೆ ಪಕ್ಕದಲ್ಲಿ ಇರುವವರಿಗೂ ಬೀಡಿ ಸಿಗರೇಟು ಹೊಗೆ ಸೇವನೆ ಮಾಡಿ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಬೀಡಿ ಸಿಗರೇಟು ಸೇವನೆ ಕಂಡು ಬಂದರೆ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಧ್ಯವ್ಯಸನಿಗಳನ್ನು ಅದರಿಂದ ಹೊರತರಲು ರಿ ಹ್ಯಾಬಿಟೇಷನ್ ಸೆಂಟರ್ ಗಳು ಕಾರ್ಯ ನಿರ್ವಹಿಸುತ್ತಿವೆ. ಎಷ್ಟೋ ವ್ಯಸನಿಗಳು ಈ ಸೆಂಟರ್ ಗೆ ಸೇರಿ ವ್ಯಸನವನ್ನು ತ್ಯಜಿಸಿದ್ದಾರೆ. ಕಳೆದ ಮಾಹೆಯಲ್ಲಿ 71 ಪ್ರಕರಣಗಳಲ್ಲಿ 80 ಜನರ ಮೇಲೆ ಎನ್ ಡಿ ಪಿ ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತರಾದ ಸುಂದರ್ ರಾಜ್ ಅವರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

