Online News in ಕನ್ನಡ

ದಾವಣಗೆರೆ ಉಪ ಸಮರ: ಕಣದಿಂದ ನಿವೃತ್ತರಾದ ಸಾದಿಕ್‌ ಪೈಲ್ವಾನ್‌ : ಅಲ್ಪಸಂಖ್ಯಾತರಿಗೆ ಅಘಾತ

ಬೆಂಗಳೂರು: ದಾವಣಗೆರೆ ಉಪ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಲ್ಪ ಸಂಖ್ಯಾತ ಮುಖಂಡ ಸಾದಿಕ್‌ ಪೈಲ್ವಾನ್‌ ಅವರು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದಾರೆ. ಕಾಂಗ್ರೆಸ್‌ ರಾಜ್ಯ ನಾಯಕರ ಒತ್ತಡಕ್ಕೆ ಪೈಲ್ವಾನ್‌ ಮಣಿದಿದ್ದು, ಈ ಬೆಳವಣಿಗೆ ಕ್ಷೇತ್ರದ ಅಲ್ಪಸಂಖ್ಯಾತರಲ್ಲಿ ಮತ್ತಷ್ಟು ಬೇಸರವನ್ನುಂಟು ಮಾಡಿದೆ.

ಸಾದಿಕ್‌ ಪೈಲ್ವಾನ್‌ ಅವರು ಕಾಂಗ್ರೆಸ್‌ ಪಕ್ಷದಲ್ಲಿ 40 ವರ್ಷಗಳಿಂದ ಕಾರ್ಯಕರ್ತರಾಗಿ ಕುಡಿದು ಕಟ್ಟಾಳು ಅಗಿದ್ದಾರೆ. ಪಕ್ಷಕ್ಕೆ ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ನಾವು ಅರಿತಿದ್ದೇವೆ. ದಾವಣಗೆರೆಯಲ್ಲಿ ಸುಮಾರು 70 ಸಾವಿರ ಮುಸ್ಲಿಂ ಮತದಾರರು ಇದೆ. ಆದರೆ, ಯಾವುದೇ ಶಾಸಕರ ಸಾವು ಸಂಭವಿಸಿದರೆ, ಅವರ ಸ್ಥಾನಕ್ಕೆ ಆ ಕುಟುಂಬದವರಿಗೆ ಟಿಕೆಟ್‌ ನೀಡಬೇಕೆಂಬ ಪದ್ಧತಿ ಕಾಂಗ್ರೆಸ್‌ನಲ್ಲಿ ಇದೆ. ಆ ಕಾರಣಕ್ಕೆ ಮಲ್ಲಿಕಾರ್ಜುನ ಮಗನಿಗೆ ಟಿಕೆಟ್‌ ನೀಡಿದ್ದೇವೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ನಾಮಪತ್ರ ವಾಪಾಸ್‌ ಪಡೆಯಲು ಕೊನೆದಿನ ಮುಗಿದ ಬಳಿಕವೂ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯದ ಸಾದಿಕ್‌ ಪೈಲ್ವಾನ್‌ ಚುನಾವಣೆಯಲ್ಲಿ ಸ್ಪರ್ಧಿಸಿಯೆ ತೀರುವುದಾಗಿ ಪ್ರಕಟಿಸಿದ್ದರು. ದಾವಣಗೆರೆಯಲ್ಲಿ 70000ಕ್ಕೂ ಅಧಿಕ ಮುಸ್ಲಿಂ ಮತಗಳು ಇದ್ದು ಪೈಲ್ವಾನ್‌ ಸ್ಪರ್ಧೆಯಿಂದ ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲು ಖಚಿತ ಎಂದು ಮನಗಂಡ ಕಾಂಗ್ರೆಸ್‌ ರಾಜ್ಯ ನಾಯಕರು ಸಾದಿಕ್‌ ಪೈಲ್ವಾನ್‌ ಬೆನ್ನಟ್ಟಿತು.

ಸಾದಿಕ್‌ ಪೈಲ್ವಾನ್‌ ಓರ್ವ ನಿಷ್ಟಾವಂತ ಸಿಪಾಯಿ. ಕಾಂಗ್ರೆಸ್‌ ಪಕ್ಷಕ್ಕೆ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ದಾವಣಗೆರೆ ಉಪ ಚುನಾವಣೆಯಲ್ಲಿ ಅವರೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಕೆಲ ಕಾರಣಗಳಿಂದ ಹೈಕಮಾಂಡ್‌ ಎಸ್.ಎಸ್.ಮಲ್ಲಿಕಾರ್ಜುನ ಮಗನಿಗೆ ಟಿಕೆಟ್‌ ನೀಡಿದೆ. ರಾಜ್ಯ ನಾಯಕರ ಮನವಿಗೆ ಒಪ್ಪಿ ಕಣದಿಂದ ನಿವೃತ್ತರಾಗಿರುವ ಸಾದಿಕ್‌ ಪೈಲ್ವಾನ್‌ ಅವರ ತ್ಯಾಗ ಮತ್ತು ನಿಷ್ಟೆಗೆ ಪಕ್ಷ ಮುಂದೆ ಒಳ್ಳೆಯ ಅವಕಾಶ ನೀಡಲಿದೆ
ಡಿ.ಕೆ.ಶಿವಕುಮಾರ್‌, ಅಧ್ಯಕ್ಷರು, ಕೆಪಿಸಿಸಿ

ಸಂಧಾನದ ಜವಾಬ್ದಾರಿಯನ್ನು ಸಲೀಂ ಮೊಹಮ್ಮದ್‌ ಮತ್ತು ರಿಜ್ವಾನ್‌ ಅರ್ಷದ್‌ ವಹಿಸಿಕೊಂಡು ದಾವಣಗೆರೆಗೆ ತೆರಳಿ ಪೈಲ್ವಾನ್‌ ಜತೆ ಮಾತುಕತೆ ಮುಂದಾಗುವಷ್ಟರಲ್ಲಿ ನಾಮಪತ್ರ ವಾಪಾಸ್‌ ಪಡಯುವ ಸಮಯ ಮೀರಿ ಹೋಗಿತ್ತು. ಆದರೆ, ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮಧ್ಯಸ್ಥಿಕೆಯಲ್ಲಿ ಸಾದಿಕ್‌ ಪೈಲ್ವಾನ ಅವರನ್ನು ಮನವೊಲಿಸಲಾಗಿದೆ.

 

 

Call Now Button