ಬೆಂಗಳೂರು: ರಾಸಾಯನಿಕ ಪಟಾಕಿ ಮಾರಾಟ ಮಾಡುವುದು ಕಂಡು ಬಂದರೆ ಅಂಥವರಿಗೆ ನೀಡಿದ ವ್ಯಾಪಾರ ಪರವಾನಗಿಯನ್ನು ತಕ್ಷಣ ರದ್ದು ಮಾಡಲಾಗುವುದು ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ದೀಪಾವಳಿ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಪಟಾಕಿಗಳ ಮಾರಾಟ ಹೆಚ್ಚಲಿದೆ. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳು ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಯ ಬಗ್ಗೆ ಸಾಕಷ್ಟು ಎಚ್ಚರಿಕೆ ತೆಗೆದುಕೊಂಡಿದ್ದಾರೆ. ಒಂದು ವೇಳೆ ರಾಸಾಯನಿಕಯುಕ್ತ, ಅಪಾಯಕಾರಿ ಪಟಾಕಿಗಳ ಮಾರಾಟ ಮಾಡಿದರೆ ಅಂಥವರಿಗೆ ನೀಡಿದ ಪರವಾನಗಿ ರದ್ದು ಮಾಡಿ, ಕ್ರಮ ಕೈಗೊಳ್ಳಾಗುವುದು. ಇದಕ್ಕೂ ಮುನ್ನ ಹಸಿರು ಪಟಾಕಿ ಮಾರಾಟ ಮಾಡುವ ಸಂಬಂಧ ವ್ಯಾಪಾರಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.


