Online News in ಕನ್ನಡ

ಬಳ್ಳಾರಿಯಲ್ಲಿ ಜಿಎಸ್‍ಟಿ ಅಧಿಕಾರಿಗಳ ಕಾರ್ಯಾಚರಣೆ, 18 ಕೋಟಿ ರೂ. ವಂಚನೆ ಪತ್ತೆ

ಬಳ್ಳಾರಿ, ಆಗಸ್ಟ್ 6, 2025- ಬಳ್ಳಾರಿ ಹಾಗೂ ಇತರ ಸ್ಥಳಗಳಲ್ಲಿ ಕೇಂದ್ರ ಜಿಎಸ್‌‍ಟಿ ಅಧಿಕಾರಿಗಳು ನಡೆಸಿರುವ ಕಾರ್ಯಚರಣೆಯಲ್ಲಿ 16 ಕೋಟಿ ರೂ.ಗಳ ಜಿಎಸ್‌‍ಟಿ ವಂಚನೆ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬೆಳಗಾವಿ ಘಟಕದ ಕೇಂದ್ರ ಜಿಎಸ್‌‍ಟಿ ಗುಪ್ತಚರ ನಿರ್ದೇಶನಾಲಯ (ಡಿ.ಜಿ.ಜಿ.ಐ)ದ ಅಧಿಕಾರಿಗಳು ಪ್ರಾರಂಭಿಸಿದ ತನಿಖೆಯಲ್ಲಿ, ಕರ್ನಾಟಕದ ಬಳ್ಳಾರಿಯಲ್ಲಿರುವ 3 ಸ್ಥಳಗಳಲ್ಲಿ ಶೋಧ ಮತ್ತು ತಪಾಸಣೆ ಪ್ರಕ್ರಿಯೆಗಳನ್ನು ನಡೆಸಲಾಯಿತು.
ಹಲವು ಸ್ಥಳಗಳಲ್ಲಿ ನಡೆದ ಶೋಧ ಮತ್ತು ತಪಾಸಣೆಯಲ್ಲಿ, ವಂಚನೆಯ ಇನ್‌ಪುಟ್‌ ಟ್ಯಾಕ್‌್ಸ ಕ್ರೆಡಿಟ್‌ (ಐಟಿಸಿ) ವಹಿವಾಟುಗಳಲ್ಲಿ ತೊಡಗಿರುವ ನಕಲಿ ಕಂಪನಿಗಳ ಅತ್ಯಾಧುನಿಕ ಜಾಲ ಬಹಿರಂಗಗೊಂಡಿದೆ. ಶೋಧ ಪ್ರಕ್ರಿಯೆಯ ಸಮಯದಲ್ಲಿ 16 ಕೋಟಿ ರೂ.ಗಳ ವಂಚನೆಯ ಇನ್‌ಪುಟ್‌ ಟ್ಯಾಕ್‌್ಸ ಕ್ರೆಡಿಟ್‌ (ಐಟಿಸಿ) ಪಡೆದ ಮತ್ತು ವರ್ಗಾಯಿಸಿದ ಇನ್‌ವಾಯ್‌್ಸಗಳು ಪತ್ತೆಯಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರೋಪಿಯು ಯಾವುದೇ ಕಾನೂನುಬದ್ಧ ವ್ಯವಹಾರ ಕಾರ್ಯಾಚರಣೆಗಳಿಲ್ಲದೇ ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ, ನಕಲಿ ಇನ್‌ವಾಯ್‌್ಸಗಳು ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿದ್ದು, ಕಂಡು ಬಂದಿದೆ. ವಹಿವಾಟುಗಳಿಗೆ ಸಂಬಂಧಿಸಿದಂತೆ ದತ್ತಾಂಶ ವಿಶ್ಲೇಷಣೆಯು ಆರೋಪಿಯು ನಡೆಸಿದ ಚಟುವಟಿಕೆಯ ವಂಚನೆಯ ಸ್ವರೂಪದ ಬಗ್ಗೆ ಗಣನೀಯ ಆಧಾರಗಳನ್ನು ನೀಡಿದೆ ಎಂದು ತಿಳಿದು ಬಂದಿದೆ.
ಬಂಧಿತ ವ್ಯಕ್ತಿ ಈ ಶೆಲ್‌ ಕಂಪನಿಗಳನ್ನು ರಚಿಸುವ ಮತ್ತು ನಿರ್ವಹಿಸುವ ಹಿಂದಿನ ಮಾಸ್ಟರ್‌ ಮೈಂಡ್‌ ಆಗಿದ್ದು, ಐಟಿಸಿಯ ಲಾಭವನ್ನು ಪಡೆಯಲು ಮತ್ತು ವರ್ಗಾಯಿಸಲು ಯಾವುದೇ ನಿಜವಾದ ವ್ಯವಹಾರ ಚಟುವಟಿಕೆಗಳಿಲ್ಲದೆ ಶೆಲ್‌ ಕಂಪನಿಗಳನ್ನು ಪ್ರಾರಂಭಿಸಿದ್ದನು ಎಂದು ತಿಳಿಸಲಾಗಿದೆ.
ವ್ಯವಹಾರದ ಪ್ರಧಾನ ಸ್ಥಳದಲ್ಲಿ ಶೋಧ ಕಾರ್ಯದ ಸಮಯದಲ್ಲಿ, ನಕಲಿ ಇನ್‌ವಾಯ್‌್ಸ ಹಾಗೂ ಮುಂತಾದ ದಾಖಲೆಗಳು ಕಂಡುಬಂದಿವೆ. ಮಾಸ್ಟರ್‌ ಮೈಂಡ್‌ ಈ ಶೆಲ್‌ ಕಂಪನಿಗಳನ್ನು ರಚಿಸಲು ನಕಲಿ ಬಾಡಿಗೆ ಒಪ್ಪಂದ, ಲೆಟರ್‌ ಹೆಡ್‌ ಇತ್ಯಾದಿಗಳನ್ನು ಬಳಸಿದ್ದು ಮತ್ತು ವಂಚನೆಯ ಚಟುವಟಿಕೆಯನ್ನು ನಡೆಸಲು ತನ್ನ ಉದ್ಯೋಗಿಗಳ ಆಧಾರ್‌, ಪ್ಯಾನ್‌ ಇತ್ಯಾದಿಗಳಂತಹ ವೈಯಕ್ತಿಕ ದಾಖಲೆಗಳನ್ನು ಬಳಸಿರುವುದು ಕಂಡುಬಂದಿದೆ.
ಮಾಸ್ಟರ್‌ ಮೈಂಡ್‌ ಅನ್ನು ಬಂಧಿಸಿ ಗೌರವಾನ್ವಿತ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ತನಿಖೆ ಮುಂದುವರೆದಿದೆ.

Call Now Button