Online News in ಕನ್ನಡ

ಐಪಿಎಲ್: ಕರ್ನಾಟಕದ ಕೆ.ಎಲ್.ರಾಹುಲ್ ಸೆಳೆಯಲು ಕೊಲಕತ್ತ ನೈಟ್ ರೈಡರ್ಸ್ ಯತ್ನ

ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಟ್ಟು ಅನುಭವೀ ಅಜಿಂಕ್ಯ ರಹಾನೆಗೆ ನಾಯಕತ್ವ ನೀಡಿದ್ದ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಇದೀಗ ಅವರನ್ನೂ ಕೈಬಿಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. 2026ಕ್ಕೆ ಪೂರ್ವಭಾವಿಯಾಗಿ ಪ್ರಸ್ತುತ ದಿಲ್ಲಿ ಕ್ಯಾಪಿಟಲ್ಸ್ ನಲ್ಲಿ ಆಡುತ್ತಿರುವ ಕರ್ನಾಟಕದ ಕೆಎಲ್ ರಾಹುಲ್ ಅವರನ್ನು ಟ್ರೇಡ್ ಮೂಲಕ ಖರೀದಿಸಿ ಅವರಿಗೆ ನಾಯಕ ಪಟ್ಟ ಕಟ್ಟಲು ಬಯಸಿದೆ ಎಂದು ವರದಿಯಾಗಿದೆ.

2024ರ ಐಪಿಎಲ್ ಆವೃತ್ತಿಯ ಚಾಂಪಿಯನ್ ಆಗಿದ್ದ ಕೋಲ್ಕತಾ ನೈಟ್ ರೈಡರ್ಸ್ ಕಳೆದ ಬಾರಿ ಐಪಿಎಲ್ ಹರಾಜಿನಲ್ಲಿ ಹಲವು ಎಡವಟ್ಟುಗಳನ್ನು ಮಾಡಿಕೊಂಡಿತ್ತು. ಅಗ್ರ ಕ್ರಮಾಂಕದ ಬ್ಯಾಟರ್ ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರೂಪಾಯಿಗಳಿಗೆ ಕೊಂಡುಕೊಂಡಿತು. ಚಾಂಪಿಯನ್ ತಂಡದ ನಾಯಕನಾಗಿದ್ದ ಶ್ರೇಯಸ್ ಅಯ್ಯರ್ ಅವರು ಹರಾಜಿಗೆ ತೆರಳಲು ಬಯಸಿದಾಗ ಅವರನ್ನು ನಿಲ್ಲಿಸುವ ಸಣ್ಣ ಪ್ರಯತ್ನವನ್ನೂ ನಡೆಸಲಿಲ್ಲ. ಬದಲಾಗಿ ರಾಜಾರೋಷವಾಗಿ ಬಿಡುಗಡೆ ಮಾಡಿತ್ತು. ಅವರನ್ನು ಹರಾಜು ಪ್ರಕ್ರಿಯೆಯಲ್ಲಿ 26.75 ಕೋಟಿ ರೂಪಾಯಿಗೆ ಖರೀದಿಸಿದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 26.75 ಕೋಟಿ ರೂಪಾಯಿಗೆ ಖರೀದಿಸಿತು. ಪರಿಣಾಮ ಪಂಜಾಬ್ 2025ರ ಆವೃತ್ತಿಯಲ್ಲಿ ಫೈನಲ್ ವರೆಗೂ ತಲುಪಿ ಕೊನೆಗೆ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಪರಾಭವಗೊಂಡು ರನ್ನರ್ ಅಪ್ ಆಯಿತು.

Call Now Button