Online News in ಕನ್ನಡ

ಹುಣಸೂರು : ಆತಂಕ ಹುಟ್ಟಿಸಿದ್ದ ಗಂಡು ಚಿರತೆಯೊಂದು ಬೋನಿನಲ್ಲಿ ಬಂದಿ !

ಹುಣಸೂರು :ಹಲವಾರು ತಿಂಗಳಿಂದ ಜಮೀನು ಬಳಿ ಕಾಣಿಸಿಕೊಳ್ಳುತ್ತಾ ಆತಂಕ ಹುಟ್ಟಿಸಿದ್ದ ಗಂಡು ಚಿರತೆಯೊಂದು ಬೋನಿನಲ್ಲಿ ಬಂದಿಯಾಗಿದೆ. ತಾಲೂಕಿನ ಹನಗೋಡಿಗೆ ಸಮೀಪದ ವಡ್ಡಂಬಾಳಿನ ರೈತ ಸಿದ್ದರಾಜನಾಯ್ಕರ ಜಮೀನು ಬಳಿಯ ಕಲ್ಲಿನ ಗುಡ್ಡದ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸುಮಾರು 5-6 ವರ್ಷದ ಗಂಡು ಚಿರತೆ ಬೋೀನಿನಲ್ಲಿರಿಸಿದ್ದ ನಾಯಿ ತಿನ್ನುವ ಆಸೆಗೆ ಬಂದು ಸೆರೆಯಾಗಿದ್ದರಿಂದ ಸಿದ್ದರಾಜನಾಯ್ಕರ ಕುಟುಂಬ ನಿಟ್ಟುಸಿರುಬಿಟ್ಟಿದೆ. ಕಳೆದ ಹಲವಾರು ತಿಂಗಳಿಂದ ಗ್ರಾಮಕ್ಕೆ
ಅನತಿ ದೂರದ ಜಮೀನಿನಲ್ಲಿ ಮನೆ ಮಾಡಿಕೊಂಡಿರುವ ಸಿದ್ದರಾಜನಾಯ್ಕ ಹಾಗೂ ಅನೇಕ ರೈತರಿಗೆ ಜಮೀನು ಬಳಿಯ ಕಲ್ಲಿನ ಗುಡ್ಡದಲ್ಲಿ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ಓಡಾಡಲು ಭಯಪಡುತ್ತ್ತಿದ್ದರು. ಚಿರತೆಯ ಪೊಟೋ ಸೆರೆ ಹಿಡಿದು ಪ್ರಾದೇಶಿಕ ಅರಣ್ಯ ವಿಭಾಗದ ಆರ್‍ಎಫ್‍ಓ ನಂದಕುಮಾರ್‍ರಿಗೆ
ಗಮನಕ್ಕೆ ತಂದ ನಂತರ ಭಾನುವಾರ ಬೋನ್ ಇಡಲಾಗಿತ್ತು. ಒಂದೇ ದಿನದಲ್ಲಿ ಸೆರೆÉ ಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನದಲ್ಲಿ ಬಂಧ ಮುಕ್ತಗೊಳಿಸಲಾಯಿತೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Call Now Button