Online News in ಕನ್ನಡ

ಹನಗೋಡಿನಲ್ಲಿ ಮತ್ತೆ ಹುಲಿ ದಾಳಿ : ಜರ್ಸಿಹಸು ಬಲಿ

ಹುಣಸೂರು: ವಾರದಿಂದ ಕಾಣಿಸಿಕೊಳ್ಳದಿದ್ದ ಹುಲಿಯು ಸೋಮವಾರದಂದು ಹಗಲು ವೇಳೆಯೇ ಹನಗೋಡು ಭಾಗದಲ್ಲಿ ಮತ್ತೆ ದಾಳಿ ನಡೆಸಿರುವ ಹುಲಿಯು ಗಬ್ಬದ ಹಸುವನ್ನು ಬಲಿ ತೆಗೆದುಕೊಂಡು ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದೆ.
ಹನಗೋಡಿಗೆ ಸಮೀಪದ ಕಾಮಗೌಡನಹಳ್ಳಿಯ ದಿ.ಲಿಂಗಪ್ಪರ ಪುತ್ರ ಸೋಮಶೇಖರ್‌ರಿಗೆ ಸೇರಿದ ಗಬ್ಬದ ಜರ್ಸಿಹಸು ಇದಾಗಿದ್ದು, ಸುಮಾರು ೧.೨೦ಲಕ್ಷರೂ ಬೆಲೆ ಬಾಳಲಿದೆ.
ಇವರು ಹೆಮ್ಮಿಗೆ ಬಳಿಯ ತಮ್ಮ ಜಮೀನಿನಲ್ಲಿ ಮನೆ ನಿರ್ಮಿಸಿ ಅಲ್ಲಿಯೇ ವಾಸಿಸುತ್ತಿದ್ದು, ಪಕ್ಕದ ಬೀರತಮ್ಮನಹಳ್ಳಿ ಅರಣ್ಯ ಪ್ರದೇಶದಿಂದ ದಾವಿಸಿ ಬಂದಿರುವ ಹುಲಿಯು ಮನೆ ಬಳಿಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಗಬ್ಬದ ಹಸುವನ್ನು ಸಾಯಿಸಿ ರಕ್ತ ಹೀರಿದೆ. ಅಲ್ಲದೆ ಮಾಂಸ ತಿನ್ನಲು ಸುಮಾರು ನೂರು ಮೀಟರ್‌ನಷ್ಟು ಎಳೆದೊಯ್ದಿದೆ. ಅಲ್ಲಿ ಬೇಲಿ ಇದ್ದುದರಿಂದ ಕಾಡಿನತ್ತ ಎಳೆದೊಯ್ಯಲಾಗದೆ ಬಿಟ್ಟು ಹೋಗಿದೆ ಎಂದು ಹಸುವಿನ ಮಾಲಿಕ ಸೋಮಶೇಖರ್ ನೋವು ತೋಡಿಕೊಂಡರು.
ವಾರದ ಹಿಂದಷ್ಟೆ ಜೋಡಿ ಹಸುಗಳನ್ನು ಬಲಿ ಪಡೆದಿರುವ ಹುಲಿಯು ನಂತರ ಮರೆಯಾಗಿ ಇದೀಗ ಮತ್ತೆ ಹಸು ಭೇಟೆಯಾಡಿ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಲೇ ಇದೆ. ಅರಣ್ಯ ಇಲಾಖೆಯವರು ದಾಳಿ ನಡೆದಾಗ ಬರುತ್ತಾರೆ. ಒಂದೆರಡು ದಿನ ಕೂಂಬಿAಗ್ ನಡೆಸಿ ಹೋಗುತ್ತಾರೆ ಹೊರತು ಹುಲಿ ಸೆರೆ ಮಾಡಲು ಯಾವುದೇ ಬಿಗಿ ಕ್ರಮವಹಿಸುತ್ತಿಲ್ಲ, ಜಾನುವಾರುಗಳ ಬೆಲೆಗೆ ತಕ್ಕಂತೆ ಪರಿಹಾರ ನೀಡುತ್ತಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಆರ್‌ಎಫ್‌ಒ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ಶಾಸಕರು ಗಮನಹರಿಸಲಿ: ಈ ಭಾಗದಲ್ಲಿ ಹುಲಿ ದಾಳಿ ನಡೆಸಿ ಹತ್ತಾರು ಜಾನುವಾರುಗಳನ್ನು ಸಾಯಿಸಿದೆ, ಜನರು ಭಯಬೀತರಾಗಿದ್ದರೂ ಶಾಸಕ ಹರೀಶ್‌ಗೌಡರು ಯಾವುದಕ್ಕೂ ಪ್ರತಿಕ್ರಿಯಿಸುತ್ತಿಲ್ಲಾ, ಸ್ಥಳಕ್ಕೂ ಭೇಟಿ ನೀಡುತ್ತಿಲ್ಲಾ, ಇನ್ನಾದರೂ ಸರಕಾರದ ಮೇಲೆ ಒತ್ತಡ ಹಾಕಿ ಹುಲಿ ಸೆರೆಗೆ ಹಾಗೂ ಸೂಕ್ತ ಪರಿಹಾರ ಕೊಡಿಸಲು ಮುಂದಾಗುವ ಅನಾಹುತ ತಪ್ಪಿಸಲು ಕ್ರಮವಹಿಸಬೇಕೆಂದು ಕಾಮಗೌಡನಹಳ್ಳಿಯ ಡೇರಿ ಅಧ್ಯಕ್ಷ ಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಹೆಮ್ಮಿಗೆ ರಾಮೇಗೌಡ ಹಾಗೂ ಮುಖಂಡರಾದ ಮಹದೇವಪ್ಪ, ಪ್ರಕಾಶ್, ಹೆಮ್ಮಿಗೆರಾಮೇಗೌಡ, ಮಂಜು, ಶಿವಮೂರ್ತಿ ಒತ್ತಾಯಿಸಿದ್ದಾರೆ. ಈ ವೇಳೆ ಅನೇಕ ರೈತರು ಇದ್ದರು.
ಈ ಹಿಂದೆ ಈ ಭಾಗದಲ್ಲಿ ದಾಳಿ ನಡೆಸಿದಾಗ ಸಾಕಾನೆಗಳ ಸಹಾಯದಿಂದ ಕೂಂಬಿAಗ್ ನಡೆಸಲಾಗಿತ್ತು. ಕ್ಯಾಮರಾ ಕಟ್ಟಲಾಗಿತ್ತು. ಡ್ರೋಣ್ ಕ್ಯಾಮರ ಬಳಸಲಾಗಿತ್ತಾದರೂ ಹುಲಿ ಕಾಣಿಸಿಕೊಂಡಿಲ್ಲಾ. ಇದೀಗ ಮತ್ತೆ ಕೂಂಬಿAಗ್ ನಡೆಸಲಾಗುವುದು. ಕ್ಯಾಮರಾ ಅಳವಡಿಸಿ ನಿಗಾವಹಿಸಲಾಗುವುದು. ಈ ಭಾಗದ ರೈತರು ಒಬ್ಬೂಬರೆ ತಿರುಗಾಡಬೇಡಿ, ಜಮೀನಿಗೆ ಜೊತೆಯಲ್ಲಿ ಓಡಾಡಿ ಎಂದು ಎಸಿಎಫ್ ಲಕ್ಷಿö್ಮಕಾಂತ್ ಮನವಿ ಮಾಡಿದ್ದಾರೆ.

Call Now Button