Online News in ಕನ್ನಡ

ʻಉಚಿತ ಸಂಸ್ಕೃತಿ ಬಿಡಿ- ಉದ್ಯೋಗ ಸೃಷ್ಟಿಸಿ ಕೊಡಿʼ : ರಾಜ್ಯ ಸರಕಾರಗಳಿಗೆ ಸುಪ್ರೀಂಕೋರ್ಟ್‌ ಮಹತ್ವದ ಸಲಹೆ

ನವದೆಹಲಿ: ದೇಶದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದ ಆರಂಭಗೊಂಡಿರುವ ʻಗ್ಯಾರಂಟಿ ಯೋಜನೆʼ ಟ್ರೆಂಡ್‌ ಬಗ್ಗೆ ಅಚ್ಚರಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌ ʻಫ್ರೀಬೀಸ್‌ʼ ಸಂಸ್ಕೃತಿಯಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಲಿದೆ ಎಂದಿದೆ. ಸಾರ್ವಜನಿಕರ ಆರ್ಥಿಕ ಸ್ಥಿತಿಗತಿಗಳನ್ನು ಪರಾಮರ್ಶೆ ಮಾಡದೆಯೆ ಉಚಿತ ವಿದ್ಯುತ್‌ ಒದಗಿಸಲು ಮುಂದಾಗಿರುವ ತಮಿಳುನಾಡು ವಿದ್ಯುತ್‌ ವಿತರಣಾ ನಿಗಮ ಲಿ.ನ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ನೇತೃತ್ವದ ಪೀಠ, ಯಾವುದೇ ರಾಜ್ಯವಾಗಲಿ ಬಡವರನ್ನು ಬೆಂಬಲಿಸುವುದು ಸೂಕ್ತವಾಗಿದೆ. ಆದರೆ, ಶ್ರೀಮಂತ ಮತ್ತು ಬಡವರ ನಡುವೆ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಉಚಿತವಾಗಿ ನೀಡುವುದು ತಪ್ಪ ಎಂದು ಹೇಳಿದೆ.
ಭಾರತದಲ್ಲಿ ಅನೇಕ ರಾಜ್ಯಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಇದಕ್ಕೆ ಉಚಿತ ಕೊಡುಗೆಗಳೇ ಕಾರಣವಾಗಿದೆ. ಈ ರೀತಿ ದೊಡ್ಡ ದೊಡ್ಡ ಉಚಿತ ಕೊಡುಗೆಗಳಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ರಾಜ್ಯ ಸರಕಾರಗಳು ಉಚಿತ ಆಹಾರ, ಸೈಕಲ್‌ಗಳು, ವಿದ್ಯುತ್‌ ನೀಡುವ ಬದಲು ಉದ್ಯೋಗ ಒದಗಿಸುವು ಮಾರ್ಗಗಳನ್ನು ಹುಡಕಬೇಕೆಂದು ಪೀಠ ಸಲಹೆ ಮಾಡಿದೆ.
ತಮಿಳುನಾಡಿನಲ್ಲಿ ಉಚಿತ ವಿದ್ಯುತ್ ಒದಗಿಸಲು ಪ್ರಸ್ತಾಪಿಸಿರುವ ಡಿಎಂಕೆ ಸರ್ಕಾರದ ನೇತೃತ್ವದ ವಿದ್ಯುತ್ ವಿತರಣಾ ಸಂಸ್ಥೆಯ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ. ತಮಿಳುನಾಡು ವಿದ್ಯುತ್ ಸಂಸ್ಥೆಯು 2024 ರ ವಿದ್ಯುತ್ ತಿದ್ದುಪಡಿ ನಿಯಮವನ್ನು ಸುಪ್ರೀಂ ಪ್ರಶ್ನಿಸಿದೆ.

Call Now Button