Online News in ಕನ್ನಡ

ಪೊಲೀಸರಿಂದ ಭರ್ಜರಿ ಬೇಟೆ, ಅಂತಾರಾಜ್ಯ ಡಕಾಯಿತರಿಂದ ವಶಪಡಿಸಿಕೊಂಡ ಬೆಳ್ಳಿ ಎಷ್ಟು ?

ಮೈಸೂರು, ಆಗಸ್ಟ್ 14, 2025- ಮೈಸೂರು ನಗರದ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಅಂತರರಾಜ್ಯ ಡಕಾಯಿತರನ್ನು ಬಂಧಿಸಿ ಸುಮಾರು 18 ಲಕ್ಷದ 18 ಸಾವಿರ ರೂಪಾಯಿಗಳ ಮೌಲ್ಯದ 16 ಕೆಜಿ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೃತ್ಯಕ್ಕೆ ಬಳಸಲಾದ ಎರಡು ಕಾರು, 1 ಪಿಸ್ತೂಲು, 9 ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿವಿಧ ವೈಜ್ಞಾನಿಕ ಸುಳಿವುಗಳ ಆಧಾರದ ಮೇರೆಗೆ ಇಬ್ಬರು ಆರೋಪಿಗಳನ್ನು ಗುಜರಾಜ್ ರಾಜ್ಯದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿ ಅವರು ನೀಡಿದ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಒಬ್ಬ ಆರೋಪಿಯನ್ನು ಹಾಗೂ ಬೆಂಗಳೂರಿನಲ್ಲಿ 3 ಆರೋಪಿಗಳನ್ನು ಒಟ್ಟು 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಆರೋಪಿಗಳು ಒಂದು ತಿಂಗಳ ಅವಧಿಯಲ್ಲಿ 5 ಕನ್ನ ಕಳವು, ಮನೆಗಳ್ಳತನ, 1 ಸುಲಿಗೆ, 9 ವಾಹನ ಕಳ್ಳತನ, 3 ಸಾಮಾನ್ಯ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಒಟ್ಟು 21 ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಮಾಡಿದ್ದು, ಸರದಿ ಪ್ರಕರಣದಲ್ಲಿ ಸುಮಾರು 47,57,000 ರೂಪಾಯಿಗಳ ಮೌಲ್ಯದ ಸ್ವತ್ತನ್ನು ವಶ ಪಡಿಸಿಕೊಳ್ಳಲಾಗಿದೆ. ಈ ವಿಷಯವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡವನ್ನು ಅಭಿನಂದಿಸಿದ್ದಾರೆ. ಡಿಸಿಪಿ ಸುಂದರರಾಜ್, ಎಸಿಸಿ ರವಿ ಪ್ರಸಾದ್ ಹಾಜರಿದ್ದರು.

Call Now Button