Online News in ಕನ್ನಡ

ಮೈಸೂರು: ಗಾಂಜಾ ಅಕ್ರಮ ಸಾಗಾಣಿಕೆ, ಇಬ್ಬರ ಬಂಧನ, ಗಾಂಜಾ, ಕಾರು ವ಼ಶ

ಮೈಸೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಅರೋಪಿಗಳನ್ನು ಅಬಕಾರಿ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ. ಕೆ.ಆರ್.ನಗವರ ಪಟ್ಟಣದ ಚೀರಹಳ್ಳಿ ಮುಖ್ಯ ರಸ್ತೆಯ ಸಾಯಿ ಕನ್ವನ್ಸನ್‌ ಹಾಲ್‌ ಬಳಿ ಮಾರುತಿ ಕಾರಿನಲ್ಲಿ ಬಂದ ಇಬ್ವರು ಅಕ್ರಮವಾಗಿ ಗಾಂಜಾ ಮಾರಲು ಯತ್ನಿಸುವಾಗ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೊಡಗು ಜಿಲ್ಲೆಯ ಮಕ್ಕಂದೂರು ಪೋಸ್ಟ್‌ ರಾಜ ರಾಜೇಶ್ವರಿ ನಗರದ ನಿವಾಸಿ .ವಿ. ಮಹಮ್ಮದ್‌ ಮಿರ್ಶದ್‌ (23) ಹಾಗೂ ಕುಶಾಲನಗರದ, ಕಲಂದರ್‌ ಕ್ಯಾಂಪ್‌ ನಿವಾಸಿ  ಎಲ್.‌ ಪದ್ಮನಾಭ (23) ಎಂದು ಗುರುತಿಸಲಾಗಿದ್ದು ಇವರಿಂದ 974 ಗ್ರಾಂ ತೂಕದ ಬೀಜ ಮಿಶ್ರಿತ ಒಣ ಗಾಂಜಾ ಮತ್ತು ಸಾಗಾಣಿಕೆಗೆ ಬಳಸಿದ್ದ ಮಾರುತಿ 800 ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿ ಕಾರ್ಯಚರಣೆಯಲ್ಲಿ ಕೆ.ಆರ್.ನಗರ ವಲಯ ಕಚೇರಿಯ ಅಬಕಾರಿ ನಿರೀಕ್ಷಕ ಲೋಕೇಶ್‌ ವೈ.ಎಸ್.‌, ಉಪ ನಿರೀಕ್ಷಕ ಸಿ.ವಿ. ರಾಘವೇಂದ್ರ, ಅಬಕಾರಿ ಬಿಇ ಶಿವಕುಮಾರ್‌, ಅಬಕಾರಿ ಪೇದೆಗಳಾದ ಶಿವಪ್ಪಮಾಳಪ್ಪಭಾನುಸಿ ಮತ್ತು ಚಾಲಕ ಮಹದೇವ.ಕೆ. ಮತ್ತು ಗೃಹರಕ್ಷದಳದ ಸಿಬ್ಬಂದಿ ಆರ್.‌ ರವೀಶ್‌ ಭಾಗವಹಿಸಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಳಿಸಿಕೊಂಡು ಮುಂದಿನ ಕ್ರಮಕೈಗೊಳ್ಳಲಾಗಿದೆ.

 

 

 

97

Call Now Button