ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಹುಟ್ಟುಹಬ್ಬ ಆಚರಿಸಿದ ಮುಖಂಡರು
ಮೈಸೂರು: ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಮೂರ್ತಿ ಅವರಿಗೆ ಮೈಸೂರು ಕಾಂಗ್ರೆಸ್ ಸಾರಥಿಗೆ – 74 ರ ಹುಟ್ಟುಹಬ್ಬದ ಗೌರವ ಕಾರ್ಯಕ್ರಮವನ್ನು ಆಯೋಜಿಸಲಾಯಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಾ.ಬಿ.ಜೆ ವಿಜಯ್ ಕುಮಾರ್ ದೇಶದಲ್ಲಿನ ರಾಷ್ಟ್ರೀಯ ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ಸುದೀರ್ಘವಾಗಿ ದುಡಿದ ಸಾಮಾನ್ಯ ಕಾರ್ಯಕರ್ತರು ಕೆಲವು ಸಂದರ್ಭಗಳಲ್ಲಿ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಜೀವನ ಹಾಗೂ ಚಿಕಿತ್ಸಾ ವೆಚ್ಚಕ್ಕಾಗಿ ಪರಿತಪಿಸುತ್ತಿದ್ದಾರೆ. ಅದಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ತುರ್ತು ನಿಧಿ ಸ್ಥಾಪಿಸಿ ಸಂಬಂಧಿಸಿದ ತಮ್ಮ ಬಡ ಕಾರ್ಯಕರ್ತರಿಗೆ ಸಂಕಷ್ಟದ ಸಂದರ್ಭದಲ್ಲಿ ತುರ್ತು ನಿಧಿಯಿಂದ ನೆರವು ನೀಡಿದರೆ ಅಂತಹ ಕಾರ್ಯಕರ್ತರ ಬದುಕು ಸಾರ್ಥಕವೆನಿಸುತ್ತದೆ ಎಂದರು.
ನಮ್ಮ ಮೈಸೂರು ಜಿಲ್ಲೆಯ ಕಾಂಗ್ರೆಸ್ ಕ್ಯಾಪ್ಟನ್ ನಮ್ಮ ಆರ್. ಮೂರ್ತಿ. 1974 ರಲ್ಲಿ ಅವರು ಪಕ್ಷಕ್ಕೆ ಬಂದರು ಈಗ ಅವರಿಗೆ 74ರ ವಸಂತ ಹಾಗಾಗಿ ಪಕ್ಷದ ವತಿಯಿಂದ ಅವರಿಗೆ ಸಾಂಪ್ರದಾಯಕ ಗೌರವ ಸಲ್ಲಿಸಲಾಗುತ್ತಿದೆ ಎಂದರು. ವಿದ್ಯಾರ್ಥಿ ಜೀವನದಿಂದಲೂ ಆರ್ ಮೂರ್ತಿ ಅವರ ಪಕ್ಷನಿಷ್ಠ ಕಾರ್ಯಗಳನ್ನು ನೋಡಿಕೊಂಡು ಬಂದಿದ್ದೇನೆ ಎಂದು ಹೇಳಿ ಕಾಂಗ್ರೆಸ್ ಕಚೇರಿಯಲ್ಲಿ ಬಹುತೇಕ ಎಲ್ಲಾ ಜನಪ್ರತಿನಿಧಿಗಳ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಅದೆಲ್ಲಕ್ಕಿಂತ ಮುಖ್ಯವಾಗಿ ಅಧ್ಯಕ್ಷರ ಹುಟ್ಟು ಹಬ್ಬ ಆಚರಣೆ ಪ್ರಮುಖ ಎಂದರು.
ಮಾಜಿ ಮಂತ್ರಿಗಳಾದ ಕೋಟೆ ಶಿವಣ್ಣನವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕಾರ್ಯಕರ್ತರಿಗೆ ಶಾಸಕರು ಹಾಗೂ ಮಂತ್ರಿಗಳು ಮನ್ನಣೆ ನೀಡುತ್ತಿರುವುದು ಕಡಿಮೆಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್.ಮೂರ್ತಿ ಕಾಂಗ್ರೆಸ್ ಪಕ್ಷದಲ್ಲಿ ಸರ್ಕಾರ ನೀಡಿದ ಹುದ್ದೆಗಿಂತ ಪಕ್ಷ ನೀಡಿದ ಹುದ್ದೆಯೇ ಅತ್ಯಂತ ಶ್ರೇಷ್ಠ . ನಾನು ಕಾಂಗ್ರೆಸ್ ಪಕ್ಷದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿರುವುದು ನನಗೆ ಹೆಮ್ಮೆ . ನನ್ನ ಜೀವನದಲ್ಲಿ ಈ ಗೌರವ ಅತ್ಯಂತ ವಿಶೇಷ ಹಾಗೂ ಮರೆಯಲಾಗದ ಘಟನೆ ಎಂದರು.
ಸಮಾರಂಭದಲ್ಲಿ ಅಶೋಕ್ ಪುರಂ ಪಿ ವಾಸು, ಮಾಜಿ ಮೇಯರ್ಗಳಾದ ಶ್ರೀ ಚಿಕ್ಕಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಪುಷ್ಪಲತಾ ಚಿಕ್ಕಣ್ಣ, ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷರಾದ ನಾಗೇಶ್, ಈಶ್ವರ್ ಚಕ್ಕಡಿ, ಎಂ ಕೆ ಅಶೋಕ್, ಡೈರಿ ವೆಂಕಟೇಶ್, ಶಾಮ. ಯೋಗೇಶ್,ರಮೇಶ್, ವೆಂಕಟಸುಬ್ಬಯ್ಯ, ಗಿರೀಶ್, ಮಹೇಶ್, ಶಿವಶಂಕರ್ ಮೂರ್ತಿ, ಟಿಂಬರ್ ನಾಗರಾಜ್, ಮಾದೇವ, ಆಶಾ, ವನಜ,ಸುಭವಣಿ , ಮೋಹನ್ ಕುಮಾರಿ ಹಾಗೂ ಇನ್ನಿತರರು ಹಾಜರಿದ್ದರು.


