Online News in ಕನ್ನಡ

ಪಿರಿಯಾಪಟ್ಟಣ: ತಾಯಿ, ಮಗಳು, ಮಗ ಅನುಮಾನಾಸ್ಪದ ಸಾವು

ಮೈಸೂರು : ಪಿರಿಯಾಪಟ್ಟಣ ತಾಲೂಕಿನ ಹೆಚ್‌ ಮಠದ ಕೊಪ್ಪು ಗ್ರಾಮದಲ್ಲಿ ತಾಯಿ, ಮಗಳು ಮತ್ತು ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

ಗ್ರಾಮದ ನಿವಾಸಿ ಮಹದೇವ ಎಂಬುವರ ಪತ್ನಿ ಹೇಮಲತಾ (೩೮), ಮಗಳು ಅನು (೧೫) ಮತ್ತು ಮಗ ಚೇತನ್‌ (೧೩) ಸಾವಿಗೀಡಾಗಿದ್ದಾರೆ. ಈ ಮೂವರು ತಂಬಾಕು ಬ್ಯಾರನ್‌ ಮನೆಯ ಪೋಲ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಹಂತದಲ್ಲಿ ಕೌಟುಂಬಿಕ ಕಲಹದಿಂದ ತಾಯಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

 

Call Now Button