Online News in ಕನ್ನಡ

ಕಾಂಗ್ರೆಸ್‌ ಸರಕಾರದಲ್ಲಿ ಫೋನ್‌ ಟ್ಯಾಪಿಂಗ್‌ ಹೆಚ್ಚಾಗಿದೆ : ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ

ಮೈಸೂರು: ಮುಖ್ಯಮಂತ್ರಿ ಆಗಲು ಹೊರಟಿರುವ ವ್ಯಕ್ತಿ ತಮ್ಮದೇ ಸರಕಾರದ ವಿರುದ್ಧ ಗೂಢಚಾರಿಕೆ ನಡೆಸುತ್ತಿರುವುದು ದುರಂತ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿಂದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ಕಾಲದಲ್ಲೂ ಫೋನ್‌ ಟ್ಯಾಪಿಂಗ್‌ ಇತ್ತು. ಈ ಸರಕಾರದಲ್ಲಿ ಹೆಚ್ಚಾಗಿದೆ ಎಂದು ದೂರಿದರು.
ನಾನು ಸತ್ಯ ಹೇಳ್ತೀನಿ ಕೇಳಿ, ಎಲ್ಲ ಸರಕಾರದಲ್ಲೂ ಫೋನ್‌ ಟ್ಯಾಪಿಂಗ್‌ ಇತ್ತು. ಇವತ್ತಿನ ಸರಕಾರದಲ್ಲೂ ಹೆಚ್ಚಾಗಿದೆ. ಸಚಿವರೇ ತಮ್ಮ ಪಕ್ಷದ ಶಾಸಕರ ವಿರುದ್ಧವೇ ಗೂಢಚಾರಿಕೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಅಗಬೇಕೆಂದುಕೊಂಡವರು ಅವರ ಸರಕಾರದ ಮೇಲೆ ಗುಪ್ತಚಾರಿಕೆ ಆರಂಭಿಸಿರುವುದು ದುರಂತ ಎಂದು ನುಡಿದರು.
ಭಾರತೀಯರ ಸುರಕ್ಷತೆ:
ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ಆರಂಭಗೊಂಡು ಭಾರತೀಯರು ಸಿಲುಕಿರುವ ಸಂಬಂಧ ಪ್ರತಿಕ್ರಿಯೆ ನೀಡಿದ ಹೆಚ್.ಡಿ.ಕೆ., ಯುದ್ಧ ಸಂಪೂರ್ಣ ನಿಲ್ಲುವವರೆಗೂ ಅಲ್ಲಿಂದ ಎಲ್ಲರನ್ನು ಕರೆಸುವುದು ಕಷ್ಟವಾಗಲಿದೆ, ವಿಮಾನ ಹಾರಾಟ ಬಂದ್ ಆಗಿರುವ ಕಾರಣ ಸಮಸ್ಯೆಯಾಗಿದೆ. ವಿಮಾನ ಹಾರಾಟ ಆರಂಭವಾದರೆ ಎಲ್ಲರೂ ಬಹುಬೇಗ ಸುರಕ್ಷಿತವಾಗಿ ಬರುತ್ತಾರೆ.
ದುಬೈನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಸಾಧ್ಯವಾದಷ್ಟು ಕನ್ನಡಿಗರ ಸಹಾಯಕ್ಕೆ ಬಂದಿದ್ದಾರೆ. ನನ್ನ ಜೊತೆಯೂ ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ, ಅವರನ್ನು ಸುರಕ್ಷಿತವಾಗಿ ಕರೆ ತರುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡಲಿದೆ ಎಂದು ಮಾಹಿತಿ ನೀಡಿದರು.

Call Now Button