Online News in ಕನ್ನಡ

ಜೈನ ದರ್ಮದ ಅವಹೇಳನ: ಗಿರೀಶ ಮಟ್ಟೇಣ್ಣವರ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್‌‍ ಠಾಣೆ ದೂರು

ಹುಬ್ಬಳ್ಳಿ, ಆಗಸ್ಟ್ 11, 2025-  ಜೈನ ದರ್ಮದ ಅವಹೇಳನೆ ಮಾಡಿರುವ ಗಿರೀಶ ಮಟ್ಟೇಣ್ಣವರ ಹಾಗೂ ಕುಡ್ಲ ಯುಟ್ಯೂಬರ್‌ ವಿರುದ್ಧ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್‌‍ ಠಾಣೆ ದೂರು ನೀಡಲಾಗಿದೆ.
ಗಿರೀಶ್‌ ಮಟ್ಟೆಣ್ಣವರ ಜೈನ್‌ ಧರ್ಮದ ಬಗ್ಗೆ ಅವಹೇಳನಕಾರಿ ಅಭಿಪ್ರಾಯ ಹಂಚಿಕೊಂಡಿದ್ದು ಇದು ಸಮುದಾಯದ ಬಾವನೆಗೆ ಧಕ್ಕೆ ಉಂಟಾಗಿದೆ ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಜೈನ್‌ ಸಮಾಜದ ಮುಖಂಡ ಅಜೀರ್‌ ಬಸಾಪುರ ಎಂಬುವವರು ದೂರು ನೀಡಿದ್ದಾರೆ.
ಜೈನ್‌ ಧರ್ಮೀಯರು ಕ್ರೂರಿಗಳು, ಸ್ತ್ರೀಲೋಲರು, ಮತಾಂಧರು ಇತ್ಯಾದಿ ಪದ ಗಿರೀಶ್‌ ಮಟ್ಟೆಣ್ಣವರ ಬಳಕೆ ಮಾಡಿದ್ದಾರೆ ಇದು ಖಂಡನೀಯ ಈ ಹೇಳಿಕೆ ಪ್ರಸಾರ ಮಾಡಿದ ಕುಡ್ಲ ಯುಟ್ಯೂಬರ್‌ ಇದನ್ನು ಪ್ರಸಾರ ಮಾಡಿದ್ದು ಇಬ್ಬರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ದೂರಿಗೆ ಸಂಭಂಧಿಸಿದಂತೆಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Call Now Button