Online News in ಕನ್ನಡ

ಎಸ್‌ಐಆರ್‌ ನೆಪದಲ್ಲಿ ದೇಶದ ಜನರ ಮೇಲೆ ಪ್ರಧಾನಿ ಮೋದಿ ಎಫ್‌ಐಆರ್:‌ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌

ಮೈಸೂರು: ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್)ಯಿಂದಾಗಿ ಆದಿವಾಸಿಗಳು, ಬುಡಕಟ್ಟು ಜನರು, ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು ಈ ದೇಶದಲ್ಲಿ ತಮ್ಮ ಅಸ್ಥಿತ್ವವವನ್ನೇ ಕಳೆದುಕೊಳ್ಳಲಿದ್ದಾರೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನ ನರೇಂದ್ರ ಮೋದಿ ಅವರು ರಾಷ್ಟ್ರೀಯ ಚುನಾವಣಾ ಆಯೋಗವನ್ನು ಮುಂದಿಟ್ಟುಕೊಂಡು ಈ ದೇಶದ 100 ಕೋಟಿ ಮರದಾರರ ವಿರುದ್ಧ ಎಫ್‌ಐಆರ್‌ ದಾಖಲಿಸುತ್ತಿದ್ದಾರೆ. ತಮಗೆ ಓಟು ಹಾಕಿದ ಜನರನ್ನೇ ಅನುಮಾನದಿಂದ ಕಾಣುತ್ತಿರುವುದು ಪ್ರಜಾಪ್ರಬುತ್ವದ ದುರಂತ ಎಂದು ನುಡಿದರು.
ಎಸ್‌ಐಆರ್‌ ಮೂಲಕ ದೇಶದ ಜನರ ಪೌರತ್ವ ಪ್ರಶ್ನಿಸುವ ಉದ್ದೇಶದಿಂದ  ಚುನಾವಣಾ ಆಯೋಗ ಕೇಳಿರುವ ದಾಖಲೆಗಳನ್ನು ಕೂಲಿಕಾರ್ಮಿಕರು, ಅಲ್ಪಸಂಖ್ಯಾರರು, ಆದಿವಾಸಿಗಳು, ದಲಿತರು ನೀಡಲು ಸಾಧ್ಯವಿಲ್ಲ. 2002ರ ಮತದಾರರ ಪಟ್ಟಿಯನ್ನು ಮಾನದಂಡವಾಗಿಟ್ಟುಕೊಂಡು ಪರಿಷ್ಕರಣಗೆ ಮುಂದಾಗಿರುವುದು ಬಡವರನ್ನು, ಕೂಲಿಕಾರ್ಮಿಕರನ್ನು, ಅಲ್ಪಸಂಖ್ಯಾತರನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಿಂದ ದೂರವಿಡುವ ಹುನ್ನಾರವಾಗಿದೆ ಎಂದು ತಿಳಿಸಿದರು.
ಈಗಾಗಲೇ ಪಶ್ಚಿಮ ಬಂಗಾಲ, ತಮಿಳುನಾಡಿನಲ್ಲಿ ಎಸ್‌ಐಆರ್‌ ಮೂಲಕ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ದೂರ ಉಳಿಸಲಾಗಿದ್ದು, ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಅಧಿಕಾರವನ್ನು ಜನಸಾಮಾನ್ಯರ ಕೈಗೆ ಕೊಟ್ಟಿದ್ದು, ಇದನ್ನೇ ಬಳಸಿಕೊಂಡು ಗುಜರಾಜ್‌ನಲ್ಲಿ ಸಾವಿರಾರು ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ದೂರಿದರು. ಸುದ್ದಿಗೋಷ್ಟಿಯಲ್ಲಿ ಎಸ್‌ಡಿಪಿಐ ಮುಖಂಡರಾದ ಅಮ್ಜದ್‌ ಖಾನ್‌, ಶಫೀ, ನಗರಪಾಲಿಕೆ ಮಾಜಿ ಸದಸ್ಯ ಸ್ವಾಮಿ ಮತ್ತಿತರರು ಹಾಜರಿದ್ದರು.

Call Now Button