Online News in ಕನ್ನಡ

ಸರಕಾರಿ ನೇಮಕಾತಿಯಲ್ಲಿ ಬಲಗೈ ಸಮುದಾಯಕ್ಕೆ ಮತ್ತೆ ಅನ್ಯಾಯ : ಸರಕಾರಕ್ಕೆ ಪತ್ರ

ಬೆಂಗಳೂರು: ರಾಜ್ಯ ಸರಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತೆ ಬಲಗೈ ಸಮುದಾಯಕ್ಕೆ ಘನಘೋರ ಅನ್ಯಾಯವಾಗಿದೆ.


ಹತ್ತು ಇಲಾಖೆಗಳ ೫೬೦ ಹುದ್ದೆಗಳಿಗೆ ನೇಮಕಾತಿ: ಶೇ. ೬+೬+೫ ಅನುಪಾತದಲ್ಲಿ ಹುದ್ದೆಗಳು ಹಂಚಿಕೆಯಾಗದೆ ಬಿ ಕ್ಯಾಟಗರಿ ಮತ್ತು ಸಿ ಕ್ಯಾಟಗರಿಗೆ ವಂಚನೆಯಾಗಿದೆ.
ಒಟ್ಟು ಹತ್ತು ಇಲಾಖೆಗಳಿಂದ ೫೬೦ ಹುದ್ದಿಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಎಡಗೈ ಸಮುದಾಯಕ್ಕೆ ೭೧ ಹುದ್ದೆ, ಬಲಗೈಗೆ ೨೧ ಹುದ್ದೆ ಹಾಗೂ ಸಿ ಕ್ಯಾಟಗರಿಗೆ ೧೪ ಹುದ್ದೆಗಳು ಮೀಸಲಾಗಿದೆ. ಇದು ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವಾದ್ದರಿಂದ ಒಳ ಮೀಸಲಾತಿ ಬಿಟ್ಟು ಹಳೆ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಸಂಚಾಲಕ, ನಿವೃತ್ತ ಐಎಎಸ್‌ ಅಧಿಕಾರಿ ಸಿದ್ದಯ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.

 

Call Now Button