Online News in ಕನ್ನಡ

ಸೋಶಿಯಲ್ ಮೀಡಿಯಾ: ಕಸದೊಳಗೆ ರಸ ಹುಡುಕುವುದೇ ದೊಡ್ಡ ಸವಾಲಾಗಿದೆ

ಮೈಸೂರು: ಅಸಲಿ ಮತ್ತು ನಕಲಿ ನಡುವೆ ವ್ಯತ್ಯಾಸ ಕಂಡುಕೊಳ್ಳಲಾಗದಷ್ಟು ಪತ್ರಿಕೋದ್ಯಮ ವ್ಯವಸ್ಥೆ ಹದಗೆಟ್ಟಿದ್ದು ನೈಜ ಪತ್ರಕರ್ತರು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಕೆ.ದೀಪಕ್ ಕಳವಳ ವ್ಯಕ್ತಪಡಿಸಿದರು.
ನಗರದ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿ.ವಿ. ಶ್ರೀನಾಥ್ ಶೆಟ್ಟಿ ಸಂಪಾದಕತ್ವದಲ್ಲಿ ಆರಂಭಗೊಂಡಿರುವ `ಪ್ರೊಟೆಕ್ಟ್ ದಿ ಪಬ್ಲಿಕ್’ ಬಹುಭಾಷೆಯ ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮೊಬೈಲ್ ಹೊಂದಿರುವವರೆಲ್ಲ ಪತ್ರಕರ್ತರಂತೆ ವರ್ತಿಸುತ್ತಿದ್ದು, ನೈಜ ಪತ್ರಿಕೋದ್ಯಮಕ್ಕೆ ಧಕ್ಕೆ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಪತ್ರಕರ್ತರಾಗಿರುವವರು ಗಾಂಧೀ, ಅಂಬೇಡ್ಕರ್, ತಿಲಕರು ಪತ್ರಕರ್ತರಾಗಿದ್ದರು ಎಂಬ ಬಗ್ಗೆ ಪ್ರಜ್ಞೆ ಇರಬೇಕು. ಅಂತಹ ಮಹಾನ್ ನಾಯಕರು ಸ್ಪರ್ಶಿಸಿದ ಪತ್ರಿಕೋದ್ಯಮದ ಮುಂದುವರೆದ ಭಾಗವಾಗಿ ನಾವು ಮತ್ತು ನಮ್ಮ ಆಲೋಚನೆಗಳು ಹೇಗಿರಬೇಕು. ನಮ್ಮ ಪತ್ರಿಕೋದ್ಯಮದ ಧ್ಯೇಯ ಏನಾಗಿರಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕೆಂದರು.
ಭಾರತದ ಪತ್ರಿಕೋದ್ಯಮದ ವಿಶ್ವಾಸಾರ್ಹತೆ ಕುಸಿಯುತ್ತಿದೆ. ಸಾಮಾಜಿ ಮಾಧ್ಯಮ ಬಂದ ಮೇಲೆ ಮಾಧ್ಯಮ ಗಠಾರದಂತ್ತಾಗಿದ್ದು, ಕಸಗಳ ನಡುವೆ ಒಳ್ಳೆಯದನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ. ಇಂತಹ ಕಾಲಮಾನದಲ್ಲಿ `ಪ್ರೊಟೆಕ್ಟ್ ದಿ ಪಬ್ಲಿಕ್’ ಹೆಸರಿನಲ್ಲಿ ಬಹುಭಾಷಾ ಮಾಸ ಪತ್ರಿಕೆಯನ್ನು ಹೊರ ತರುತ್ತಿರುವುದು ಸಾಹಸದ ಕೆಲಸ ಎಂದರು.
ಮಾಧ್ಯಮ ದುರ್ಬಲಗೊಂಡರೆ ಪ್ರಜಾಪ್ರಭುತ್ವವೂ ದುರ್ಬಲಗೊಳ್ಳುತ್ತದೆ. ಮಾಧ್ಯಮ ಉಳಿದರೆ ಮಾತ್ರ ಸ್ವಾತಂತ್ರ್ಯ ಉಳಿಯುತ್ತದೆ. ಮುಂದೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬಂದರೆ ಮತ್ತೊಮ್ಮೆ ನೈಜ ಪತ್ರಿಕೋದ್ಯಮ ಮತ್ತು ನೈಜ ಪತ್ರಕರ್ತರ ಜಾಗೃತರಾಗುವುದಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸಿ.ವಿ. ಶ್ರೀನಾಥ್, ಪತ್ರಿಕೋದ್ಯಮದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡ, ಇಂಗ್ಲಿಷ್, ತಮಿಳ್, ಮಳಯಾಳಂ, ತೆಲಗು, ಹಿಂದಿ ಭಾಷೆಗಳಲ್ಲಿ ಮಾಸ ಪತ್ರಿಕೆಯನ್ನು ಹೊರ ತರಲಾಗುತ್ತಿದ್ದು, ಈಗಾಗಲೇ 30 ಸಾವಿರ ಓದುಗರನ್ನು ಹೊಂದಿದ್ದೇವೆ. ಮಾನವ ಹಕ್ಕು, ಭ್ರಷ್ಟಾಚಾರ, ಕಾನೂನು ಜಾಗೃತಿಗಾಗಿ ಪತ್ರಿಕೆಯನ್ನು ಆರಂಭಿಸಿರುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಶಿಕ್ಷಣ ತಜ್ಞ ಸಿ.ಜೆ. ವೆಂಕಟರಮಣ ಶೆಟ್ಟಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಶೈಲೇಶ್ ರಾಜೇ ಅರಸ್, ಹಿರಿಯ ವಕೀಲ ಪಿ. ಪಾಲಾಕ್ಷ, ಪತ್ರಕರ್ತ ರಾಜು ಕಾರ್ಯ ಮೊದಲಾದವರು ಹಾಜರಿದ್ದರು.

Call Now Button