Online News in ಕನ್ನಡ

ನಿಯೋಜಿತ ಸಿಎಂ ಡಿಕೆ ಶಿವಕುಮಾರ್‌ ಜತೆ ಹತ್ತುಕ್ಕೂ ಹೆಚ್ಚು ಮಂದಿ ಸಚಿವರಾಗಿ ಪ್ರಮಾಣವಚನ

ಡಾ. ಯತೀಂದ್ರ ಸಿದ್ದರಾಮಯ್ಯ, ಯು.ಟಿ. ಖಾದರ್‌, ಡಾ. ಜಿ. ಪರಮೇಶ್ವರ್‌, ಎಂ.ಬಿ. ಪಾಟೀಲ್‌, ರೂಪಾ ಶಶಿಧರ್‌ಗೆ ಮಂತ್ರಿಗಿರಿ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಾಳೆ ಪ್ರವಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭಗೊಂಡಿದ್ದು, ಇವರೊಂದಿಗೆ ಸಚಿವ ಸಂಪುಟ ಸೇರಿದಂತೆ 14 ಮಂದಿಯ ಪಟ್ಟಿ ಅಂತಿಮ ಪಡಿಸಲಾಗಿದೆ. ಮೈಸೂರು ಭಾಗದಿಂದ ಉಸ್ತುವಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

  1. ಯು.ಟಿ. ಖಾದರ್-‌ ಮಂಗಳೂರು ಕ್ಷೇತ್ರ
  2. ಡಾ. ಯತೀಂದ್ರ ಸಿದ್ದರಾಮಯ್ಯ- ವಿಧಾನ ಪರಿಷತ್‌ ಸದಸ್ಯ.
  3. ರೂಪಾ ಶಶಿಧರ್‌ / ಮುನಿಯಪ್ಪ 
  4. ಡಾ. ಜಿ. ಪರಮೇಶ್ವರ್‌ – ಕೊಟಗೇರಿ
  5. ಚಲುವರಾಯಸ್ವಾಮಿ- ನಾಗಮಂಗಲ
  6. ರಾಮಲಿಂಗಲಿಂಗ ರೆಡ್ಡಿ –  ಬಿಟಿಎಂ ಲೇಔಟ್‌
  7. ಸತೀಶ್‌ ಜಾರಕಿಹೊಳಿ-  ಯಮಕನಮರಡಿ
  8. ಭೈರತಿ ಸುರೇಶ್ – ಹೆಬ್ಬಾಳ ಕ್ಷೇತ್ರ
  9. ಕೃಷ್ಣಭೈರೇಗೌಡ-  ಬ್ಯಾಟರಾಯನಪುರ ಕ್ಷೇತ್ರ
  10. ಪ್ರಿಯಾಂಕ ಖರ್ಗೆ- ಚಿತ್ತಾಪುರ ಕ್ಷೇತ್ರ
  11. ಎಂ.ಬಿ.ಪಾಟೀಲ್-‌ ಬಬಲೇಶ್ವರ ಕ್ಷೇತ್ರ
  12. ಕೆ.ಜೆ.ಜಾರ್ಜ್‌ – ಸರ್ಜಜ್ಙ ನಗರ ಕ್ಷೇತ್ರ                                                                                                                                                                                                                                                                                ಇನ್ನುಳಿದಂತೆ ಡಾ. ಜಿ.ಪರಮೇಶ್ವರ್‌,  ಚಲುವರಾಯಸ್ವಾಮಿ, .ಟಿ.ಖಾದರ್‌, ಎಂ.ಬಿ.ಪಾಟೀಲ್‌, ಕೆ.ಜೆ.ಜಾರ್ಜ್‌, ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ರಾಮಲಿಂಗರೆಡ್ಡಿ, ಸತೀಶ್‌ ಜಾರಕಿಹೊಳಿ, ರೂಪ ಶಶಿಧರ್ ಅವರ ಹೆಸರನ್ನು ಹೈಕಮಾಂಡ್‌ ಅಂತಿಮ ಪಡಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
    ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ವರಿಷ್ಠರ ಸಮ್ಮುಖದಲ್ಲಿ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೆವಾಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಜರಿದ್ದರು. ಹಲವು ಸುತ್ತಿನ ಮಾತುಕತೆಯ ಬಳಿಕ ಈ ಹತ್ತು ಮಂದಿಯ ಹೆಸರನ್ನು ಅಂತಿಮ ಪಡಿಸಲಾಗಿದೆ.
    ಮೊದಲ ಹಂತದಲ್ಲಿಯೇ ಸಚಿವ ಸಂಪುಟ ಸೇರಲು ಅವಿರತ ಪ್ರಯತ್ನ ನಡೆಸಿದ ಸಚಿವ ಜಮೀರ್‌ ಅಹಮದ್‌, ಡಾ. ಹೆಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕ ಹಿರಿಯ ನಾಯಕರು ಮತ್ತು ಹೊಸಬರು ನಡೆಸಿದ ಪ್ರಯತ್ನ ಕೈಗೂಡಿಲ್ಲ. ಒಟ್ಟಾರೆ, ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದ ಏಳು ಮಂದಿಗೆ ಮತ್ತೆ ಸಚಿವ ಸ್ಥಾನದ ಅವಕಾಶ ದೊರಕಿದ್ದು, ಮೂವರು ಹೊಸಬರಿಗೆ ಮಂತ್ರಿಗಿರಿ ಲಭಿಸಿದೆ. ಜಾತಿ, ಪ್ರಾಂತ್ಯ, ಜಿಲ್ಲಾವಾರು ಸಚಿವರನ್ನು ಆಯ್ಕೆಮಾಡಿ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ನಡೆದಿದೆ.
Call Now Button