ಮೈಸೂರು : ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣ ಮೀರುತ್ತಿದ್ದು, ನಂಜನಗೂಡು ತಾಲೂಕಿನ ತಡಗೂರು ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿದ್ದು, ಅದೃಷ್ಟವಶಾತ್ ರೈತನೋರ್ವ ಪಾರಾಗಿದ್ದಾರೆ.
ತಡಗೂರು ಗ್ರಾಮದ ನಿಂಗೇಗೌಡ ಎಂಬುವವರಿಗೆ ಸೇರಿದ ಹಸು ಬಲಿಯಾಗಿದ್ದು, ಇವರಿಗೆ ಸೇರಿದ ಕರು ಒಂದು ತಿಂಗಳ ಹಿಂದೆ ಬಲಿಯಾಗಿತ್ತು.
ಇದೀಗ ಒಂದು ತಿಂಗಳ ಬಳಿಕ ಮತ್ತೆ ಚಿರತೆ ಪ್ರತ್ಯೆಕ್ಷಗೊಂಡು ಹಸುವನ್ನು ಹೊಂದು ಹಾಕಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸುದ್ದಿ ತಿಳಿದು ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆಗೆ ಕ್ರಮ ವಹಿಸಲಾಗಿದೆ.


