ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ಹೊಸದಾಗಿ ಆರಂಭಗೊಂಡಿದ್ದ ಮೊಬೈಲ್ ಅಂಗಡಿಯಲ್ಲಿ ಕಳೆದ ರಾತ್ರಿ ಕಳ್ಳತವಾಗಿದ್ದು, ಕದೀಮರ ಕೈಚಳ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇತ್ತೀಚೆಗೆ ಬೈಲಕುಪ್ಪೆಉಯಲ್ಲಿ ಅಡಿಕೆ ತೋಟಕ್ಕೆ ನುಗ್ಗಿ ಲಕ್ಷಾರಂತರ ರೂ. ಮೌಲ್ಯದ ಅಡಿಕೆ ಬೆಳೆ ಕಳವು ಮಾಡಿದ ಬೆನ್ನ ಹಿಂದೆಯೇ ಈ ಕಳ್ಳತನ ನಡೆದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಇದೀಗ ಮೊನ್ನೆಯಷ್ಟೇ ಆರಂಭಗೊಂಡಿದ್ದ ಮಹಾಲಕ್ಷ್ಮೀ ಮೊಬೈಲ್ ಸೆಂಟರ್‍ನಲ್ಲಿ ಕಳ್ಳರ ಗ್ಯಾಂಗ್ ಸುಮಾರು 1 ಲಕ್ಷ ರೂ. ಮೌಲ್ಯದ ಎಲೆಕ್ಟ್ರಿಕಕ್ಸ್ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಅಂಗಡಿಯ ಬಾಗಿಲು ಹೊಡೆದು ಕಳವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


