Online News in ಕನ್ನಡ

ಕೇರಳಾ ರಾಜ್ಯಕ್ಕೆ ಅಕ್ರಮ ಯೂರಿಯಾ ಸಾಗಾಣಿಕೆ ಪತ್ತೆ

ಚಾಮರಾಜನಗರ, ಆಗಸ್ಟ್ 6- ರಾಜ್ಯದಲ್ಲಿ ಯೂರಿಯಾ ಅಭಾವ ಉಂಟಾಗಿರುವ ಬೆನ್ನ ಹಿಂದೆಯೇ ಕೇರಳಾ ರಾಜ್ಯಕ್ಕೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದ್ದ 15 ಟನ್ ಯೂರಿಯಾವನ್ನು ಜಪ್ತಿ ಮಾಡಲಾಗಿದೆ. ಇದರೊಂದಿಗೆ ಅಕ್ರಮ ಸಾಗಾಣಿಕೆಗೆ ಬಳಸಲಾಗಿದ್ದ ಲಾರಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಶ ಪಡಿಸಿಕೊಂಡಿರುವ ಯೂರಿಯಾವನ್ನು ನಂಜನಗೂಡಿನ ಗೋದಾಮೊಂದರಿಂದ ಸಾಗಿಸಲಾಗುತಿತ್ತು ಎಂದು ಹೇಳಾಗಿದ್ದು, ಪೊಲೀಸರಿಗೆ ದೊರಕಿದ ಖಚಿತ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ಮಾಡಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆ ಹೊಳೆ ಚೆಕ್ ಪೋಸ್ಟ್ ಬಳಿ ಕೆಎಲ್ 73 ಡಿ-1699 ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಯೂರಿಯಾ ಸಾಗಾಣಿಕೆ ಪತ್ತೆಯಾಗಿದೆ.

Call Now Button