ಮೈಸೂರು: ಕರ್ನಾಟಕ ಏಕೀಕರಣ ಟ್ರಸ್ಟ್ ವತಿಯಿಂದ “ಕರ್ನಾಟಕ ಏಕೀಕರಣ ಹೋರಾಟಗಾರರ ಉಪನ್ಯಾಸ ಮಾಲೆ” ಕಾರ್ಯಕ್ರಮವನ್ನು ರಾಮಕೃಷ್ಣ ನಗರದ ನೃಪತುಂಗ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ “ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಟೀಲ್ ಪುಟ್ಟಪ್ಪರ ಪಾತ್ರ” ವಿಷಯವಾಗಿ ಸಾಹಿತಿ ಮತ್ತು ಅಂಕಣಕಾರರಾದ ನಾ. ದಿವಾಕರ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ನೃಪತುಂಗ ಶಾಲೆಯ ಮಕ್ಕಳಿಂದ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ, ಹಿರಿಯ ಹೋರಾಟಗಾರರಾದ ಶ್ರೀ ಹೊರೆಯಲ ದೊರೆಸ್ವಾಮಿ ಅವರು ಕರ್ನಾಟಕ ಏಕೀಕರಣದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕರ್ನಾಟಕ ಏಕೀರಣ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸುಜಾತ ಅಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೃಪತುಂಗ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಎ.ಜಿ. ಕೃಷ್ಣಪ್ಪ, ಸವಿತ ಪಿ.ಮಲ್ಲೇಶ್, ನಿರಂತರ ತಂಡದ ಶ್ರೀನಿವಾಸ್ ಪಾಲಹಳ್ಳಿ, ಹಿರಿಯ ಹೋರಾಟಗಾರರಾದ ಎನ್.ಎಸ್. ಗೋಪಿನಅಥ್, ಡಾ. ರಾಜಶೇಖರ ಜಮದಂಡಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.


