Online News in ಕನ್ನಡ

ಬಾಯ್ಲರ್ ನೀರು ಸ್ಫೋಟಗೊಂಡು ಸುಟ್ಟು ಕರಕಲಾಗಿರುವ ಕಾರ್ಮಿಕನ ಅರ್ಧ ದೇಹ..!

ನಂಜನಗೂಡು : ಕಳೆದ 9 ವರ್ಷಗಳಿಂದ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ನೆಸ್ಲೆ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ನಂಜನಗೂಡು ತಾಲೂಕು ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹದಿನಾರು ಮೋಳೆ ಗ್ರಾಮದ ಚಂದ್ರು ಎಂಬ ಕಾರ್ಮಿಕನ ಮೇಲೆ ಬಾಯ್ಲರ್ ನೀರು ಸ್ಫೋಟಗೊಂಡು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಹದಿನಾರು ಮೊಳೆ ಗ್ರಾಮದ ಚಂದ್ರು ಎಂಬ ಕಾರ್ಮಿಕನ ದೇಹದ ಬಲ ಭಾಗ ಸಂಪೂರ್ಣವಾಗಿ ಸುಟ್ಟು ಬೆಂದು ಗಂಭೀರವಾಗಿ ಗಾಯಗೊಂಡ ಆತನನ್ನು ನೆಸ್ಲೆ ಕಂಪನಿ ವತಿಯಿಂದ ಮೈಸೂರಿನ ಖಾಸಗಿ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೂ ಕಾರ್ಮಿಕನ ದೇಹ ಸಂಪೂರ್ಣ ಗುಣವಾಗದ ಪರಿಣಾಮ ಇನ್ನು ಗಂಭೀರ ಸ್ಥಿತಿಯಲ್ಲಿ ಕಾರ್ಮಿಕ ನರಳಾಡುತ್ತಿದ್ದಾನೆ. ಇದರಿಂದಾಗಿ ಆತನ ಕುಟುಂಬ ನಿರ್ವಹಣೆ ತುಂಬಾ ಕಷ್ಟಕರವಾಗಿದ್ದು ಗಂಭೀರ ಗಾಯಗೊಂಡಿರುವ ಕಾರ್ಮಿಕ ಚಂದ್ರು ಎಂಬಾತನ ಪತ್ನಿಗೆ ನೆಸ್ಲೆ ಕಾರ್ಖಾನೆಯಲ್ಲಿ ಖಾಯಂ ಹುದ್ದೆ ನೀಡಬೇಕು ಎಂದು ಬೇಡಿಕೆ ಇಡಲಾಗಿತ್ತು. ನೆಸ್ಲೆ ಕಾರ್ಖಾನೆಯ ಆಡಳಿತ ಮಂಡಳಿ ಖಾಯಂ ಹುದ್ದೆ ನೀಡುತ್ತೇವೆ ಎಂದು ಹೇಳಿ ಒಂದು ವರ್ಷ ಕಳೆಯುತ್ತಾ ಬಂದಿದ್ದರು ಇಂದು ನಾಳೆ ಎಂದು ದಿನ ದೂಡುತ್ತಿದ್ದಾರೆ. ಕಾರ್ಖಾನೆಯ ಸಿಬ್ಬಂದಿಗಳು ಮತ್ತು ಮಾಲೀಕರ ಉಡಾಫೆ ವರ್ತನೆಯಿಂದ ಬೇಸತ್ತ ನೊಂದ ಕುಟುಂಬ ಇಂದು ನೆಸ್ಲೆ ಕಾರ್ಖಾನೆಯ ಮುಂಭಾಗದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕನ ಕುಟುಂಬದ ಜೊತೆಗೂಡಿ ಅನಿರ್ದಿಷ್ಟ ಅವಧಿ ಪ್ರತಿಭಟನೆಗೆ ಮುಂದಾಯಿತು. ನೆಸ್ಲೆ ಕಾರ್ಖಾನೆಯ ಆಡಳಿತ ಮಂಡಳಿ ಸಿಬ್ಬಂದಿಗಳು ಜನವರಿ 26ರಂದು ರಜೆ ಇದ್ದ ದಿನ ನನ್ನನ್ನು ಬಲವಂತವಾಗಿ ಕೆಲಸಕ್ಕೆ ಕರೆಯಿಸಿ ಕೊಂಡು ಮ್ಯಾಗಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನು ಯಾವುದೇ ಸುರಕ್ಷತೆ ಇಲ್ಲದೆ ಕಾಫಿ ಘಟಕದಲ್ಲಿ ಕೆಲಸ ಮಾಡಿಸಿರುತ್ತಾರೆ . ಈ ಸಂದರ್ಭ ನನಗೆ ಬಾಯ್ಲರ್ ಕುದಿಯುವ ನೀರು ನನ್ನ ದೇಹಕ್ಕೆ ಬಿದ್ದು ನಾನು ಈ ಸ್ಥಿತಿ ತಲುಪಿದ್ದೇನೆ ಎಂದು ಕಂಪನಿಯ ಕಿರುಕುಳವನ್ನು ವ್ಯಕ್ತಪಡಿಸಿ ತಮ್ಮ ಅಳಲು ತೋಡಿಕೊಂಡರು. ಕಳೆದ ಒಂದು ವರ್ಷಗಳಿಂದ ನಿರಂತರವಾಗಿ ನಾವು ನೊಂದಿದ್ದೇವೆ ನೆಸ್ಲೆ ಕಾರ್ಖಾನೆಯ ಮಾಲೀಕರು ಮತ್ತು ಸಿಬ್ಬಂದಿಗಳು ನಮಗೆ ನ್ಯಾಯ ಕೊಡಿ ಇಲ್ಲವೇ ವಿಷ ಕೊಡಿ, ಇಲ್ಲೇ ಕುಡಿದು ನಮ್ಮ ಕುಟುಂಬ ಸಾಮೂಹಿಕವಾಗಿ ಸಾವನ್ನಪ್ಪುತ್ತೇವೆ ಎಂದು ಸಂತ್ರಸ್ತ ಕಾರ್ಮಿಕ ಕುಟುಂಬದವರು, ಹಾಗೂ ಕಾರ್ಮಿಕರು ನ್ಯಾಯಕ್ಕಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು

ನೊಂದ ಕಾರ್ಮಿಕನ ಬೆನ್ನಿಗೆ ನಿಂತ ನೆಸ್ಲೆ ಕಾರ್ಖಾನೆಯ ಕಾರ್ಮಿಕರ ಸಂಘಟನೆ
ನೆಸ್ಲೆ ಕಾರ್ಖಾನೆಯ ಮುಂಭಾಗದಲ್ಲಿ ಬಾಯ್ಲರ್ ನೀರಿನ ಸ್ಫೋಟಕ್ಕೆ ಗಂಭೀರ ಗಾಯಗೊಂಡಿರುವ ಕಾರ್ಮಿಕನ ಕುಟುಂಬ ನಡೆಸುತ್ತಿದ್ದ ಪ್ರತಿಭಟನೆಗೆ ನೂರಾರು ಕಾರ್ಮಿಕರು ಸಹಕಾರ ನೀಡಿ ನ್ಯಾಯ ಸಿಗುವವರೆಗೂ ನಾವು ನೊಂದ ಕಾರ್ಮಿಕನ ಪರವಾಗಿ ನಿಲ್ಲುತ್ತೇವೆ ಎಂದು ಕೆಲಸಕ್ಕೆ ತೆರಳದೆ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಮಾನವೀಯತೆ ಮೆರೆದಿದ್ದಾರೆ

ಕೆಲಸಕ್ಕೆ ಕೈಕೊಟ್ಟ ಕಾರ್ಮಿಕರ ಫೋಟೋ ಕ್ಲಿಕ್ಕಿಸಿದ ಸೆಕ್ಯೂರಿಟಿ ವಿರುದ್ಧ ಆಕ್ರೋಶ..!
ನೆಸ್ಲೆ ಕಾರ್ಖಾನೆಯಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಮೂಲದ ಶರವಣ ಎಂಬ ಸೆಕ್ಯೂರಿಟಿ ಹೆಡ್ ಕೆಲಸಕ್ಕೆ ಗೈರಾಗಿ ಪ್ರತಿಭಟನೆಗೆ ಸಹಕರಿಸಿದ ಕಾರ್ಮಿಕರ ಫೋಟೋವನ್ನು ತನ್ನ ಮೊಬೈಲ್ ಫೋನಿನ ಮೂಲಕ ಕ್ಲಿಕ್ಕಿಸಿರುವುದನ್ನು ಗಮನಿಸಿದ ಕಾರ್ಮಿಕರು ಮತ್ತು ನೊಂದ ಕುಟುಂಬಸ್ಥರು ಸೆಕ್ಯೂರಿಟಿ ಹೆಡ್ ಶರವಣ ಎಂಬಾತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈತನ ವರ್ತನೆಯಿಂದ ರೊಚ್ಚಿಗೆದ್ದ ನೊಂದ ಕುಟುಂಬಸ್ಥರು ಹಿಗ್ಗ ಮಗ್ಗ ಚಿಮಾರಿ ಹಾಕಿದರು ಇದರಿಂದ ಕೆಲ ಕಾಲ ಗೊಂದಲದ ವಾತಾವರಣವೂ ಕೂಡ ನಿರ್ಮಾಣವಾಯಿತು.

ಪ್ರತಿಭಟನೆಯ ಸೂಕ್ಷ್ಮತೆಯನ್ನರಿತ ನೆಸ್ಲೆ ಕಂಪನಿ ಆಡಳಿತ ಮಂಡಳಿ ಕಾರ್ಮಿಕ ಮುಖಂಡರು ಹಾಗೂ ಸಂತ್ರಸ್ತ ಕಾರ್ಮಿಕ ಕುಟುಂಬದವರನ್ನು ಕರೆಯಿಸಿ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆ ಕಾರ್ಮಿಕರು ಮತ್ತು ನೊಂದ ಕುಟುಂಬಸ್ಥರು ನಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕಾರ್ಖಾನೆ ಮುಂಭಾಗ ಮತ್ತೆ ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು

Call Now Button