Online News in ಕನ್ನಡ

ಮೈಸೂರಿನ ಸರಕಾರಿ ವಸತಿ ನಿಲಯಗಳಿಗೆ ಎಡಿಸಿ ದಿಢೀರ್‌ ಭೇಟಿ ಪರಿಶೀಲನೆ

ಮೈಸೂರು: ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ರವರ ನಿರ್ದೇಶನದ ಮೇರೆಗೆ ಮೈಸೂರು ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಮೈಸೂರು ತಾಲೂಕಿನ ಉಸ್ತುವಾರಿ ಕೆ.ಎ.ಎಸ್ ಅಧಿಕಾರಿ ಆಗಿರುವ ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ. ಶಿವರಾಜು ರವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಕುವೆಂಪುನಗರ, ಬೋಗಾಧಿ ಹಾಗೂ ಮೈಸೂರು ನಗರದ ಸುತ್ತಮುತ್ತ ಇರುವ ಇಲಾಖೆಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಅಡುಗೆ ಕೋಣೆ, ಶೌಚಾಲಯ ವ್ಯವಸ್ಥೆ, ಸಾಮಗ್ರಿ ಕೊಠಡಿಗಳು ಮುಂತಾದ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಹಾಜರಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿ ಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಆಲಿಸಿದ್ದಾರೆ.
ನಗರದ ಹಾಸ್ಟೆಲ್ ಒಂದರಲ್ಲಿ ಪೋಷಕರ ಸಭೆ ನಡೆಯುತ್ತಿದ್ದು ಸದರಿ ಸಭೆಗೆ ಹಾಜರಾಗಿ ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿರುತ್ತಾರೆ .ಈ ಭೇಟಿಯ ಸಮಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ
ತಾಲೂಕು ಅಧಿಕಾರಿ ಚಂದ್ರಕಲಾ ಹಾಗೂ ವಾರ್ಡನ್ಗಳು ಹಾಜರಿರುತ್ತಾರೆ .

Call Now Button