ಮೈಸೂರು (ಕೆ.ಆರ್.ನಗರ): ಬಾಂಧವ್ಯ ಮತ್ತು ಭಾವನೆ ಕೇವಲ ಮನುಷ್ಯ ಮನುಷ್ಯರ ನಡುವೆಯೇ ಇರಬೇಕು ಎಂದ್ದೇನಿಲ್ಲ. ಅದು ಮನಷ್ಯ ಮತ್ತು ಪ್ರಾಣಿಗಳ ನಡೆಯೂ ಇರುತ್ತೆ ಎಂಬುವುದಕ್ಕೆ ನೂರಾರು ಸಂಗತಿಗಳನ್ನು ನಾನು ನೋಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ. ಅಂತಾಹುದೇ ಒಂದು ಪ್ರಸಂಗ ಭತ್ತದ ಕಣಜ ಕೆ.ಆರ್.ನಗರದಲ್ಲಿ ಜರುಗಿದೆ. ಓರ್ವ ರೈತ ಮಹಿಳೆ ತನ್ನ ಹಟ್ಟಿಯಲ್ಲಿ ಹುಟ್ಟಿ ಬೆಳೆದ ಪ್ರೇತಿಯ ಹಸು ಚೊಚ್ಚಲ ಗರ್ಭ ಧರಿಸಿದ ಸಂಭ್ರಮಕ್ಕೆ ಊರಿನ ಮುತ್ತೈದೆಯರನ್ನೆಲ್ಲ ಕರೆದು ಹಸುವಿನ ಸೀಮಂತ ಶಾಸ್ತ್ರ ಮಾಡಿ ತಾಯ್ತತನ ಮೆರೆದ ಅಪರೂಪದ ಪ್ರಸಂಗ ಪಟ್ಟಣದ ಹೊರವಲಯದ ಕೆಂಪನಕೊಪ್ಪಲು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ರೈತ ಮಹಿಲೆ ರೇಣುಕಾ ಕೃಷ್ಣೇಗೌಡ ಎಂಬುವರು, ತಮ್ಮ ಹಟ್ಟಿಯಲ್ಲಿ ಹುಟ್ಟಿದ ಹೆಣ್ಗರುವನ್ನು ಮಗಳಂತೆಯೇ ಪ್ರೀತಿಯಿಂದ ಸಾಕಿ-ಸಲುಹಿದ್ದರೂ. ಪ್ರೌಢಾವಸ್ತೆಗೆ ಬಂದ ಹಸು ಮೊದಲ ಬಾರಿಗೆ ಗರ್ಭ ಧರಿಸಿದ್ದರಿಂದ ಒಂಬತ್ತು ತಿಂಗಳು ತುಂಬುತಿದ್ದಂತೆಯೆ ಶುಭ ದಿನದಂದು ಸೀಮಂತ ಶಾಸ್ತ್ರ ನಿಗಧಿಪಡಿಸಿದ್ದಾರೆ.
ಕಾಮಧೇನು ಕಲ್ಪವೃಕ್ಷ ಅನ್ನುವ ಮಾತು ಇದೆ. ವರ್ಷ ಇಡೀ ದಿನ ಹಾಲು ಹಿಂಡಿ ಹಣ ಮಾಡಿಕೊಳ್ಳವ ಜನರೇ ಹೆಚ್ಚು. ಆದರೆ ಈ ರೈತ ಮಹಿಳೆ ರೇಣುಕಾ ಅವರು ತಮ್ಮ ಹಸುವಿನ ಸೀಮಂತ ಮಾಡಿ, ಈ ಸಮಾಜಕ್ಕೆ ಮೂಕ ಪ್ರಾಣಿಗಳಿಗೆ ಭಾವನೆಗಳು ಇವೆ ಎಂದು ತೋರಿಸಿಕೊಟ್ಟಿದ್ದಾರೆ- ಮಮತ ಜಗದೀಶ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ, ಕೆಂಪನಕೊಪ್ಪಲು
ಅದರಂತೆ ನಿನ್ನೆ ರೇಣುಕಾ ಅವರು ಮನೆ ಮುಂದೆ ಶಾಮೀಯಾನ ಹಾಕಿಸಿ ನೆರೆ ಹೊರೆಯ ಮುತ್ತೈದೆಯರನ್ನು ಬರಮಾಡಿಕೊಂಡು ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಹೆಣ್ಣು ಮಗಳಿಗೆ ಮಡಿಲು ತುಂಬುವ ರೀತಿಯಲ್ಲಿಯೇ ಹಸುವಿಗೆ ರೇಷ್ಮೆ ಸೀರೆ, ಹಸಿರುಬಳೆ ತೊಡಿಸಿ, ಕೊರಳಿಗೆ ಹೂ ಮಾಲೆ ಹಾಕಿ, ಕಾಲಿಗೆ ಗೆಜ್ಜೆ ಕಟ್ಟಿ ಶೃಂಗಾರ ಮಾಡಿದ ಬಳಿಕ ಸಿಹಿ ತಿಂಡಿ, ಐದು ಬಗೆಯ ಹಣ್ಣು ಹಂಪಲು, ಐದು ಬಗೆಯ ಆರತಿ, ಊರಿನ ಐದು ಮುತ್ತೈದೆಯರಾದ ಪವಿತ್ರ, ಮಂಜುಳಾ, ಮಮತಾ, ಶಾಲಿನಿ, ರಶ್ಮಿ ಇವರುಗಳಿಂದ ಆರತಿ ಬೆಳಗಿಸಿದ್ದಾರೆ. ನಂತರ ಊರಿನವರಿಗೆಲ್ಲ ಸಿಹಿಯೂಟ ಹಾಕಿಸಿ ಸಂಭ್ರಮಿಸಿದ್ದಾರೆ.
ತನ್ನ ಮನೆಯಲ್ಲಿ ಹುಟ್ಟಿ ಬೆಳೆದ ಹಸುವಿಗೆ ತನ್ನ ಮಗಳಂತೆಯೇ ಕಂಡು ಸೀಮಂತಶಾಸ್ತ್ರ ಮಾಡಿಸಿ, ಊರಿಗೆ ಊಟ ಹಾಕಿಸಿದ ರೇಣುಕಾರ ಪ್ರಾಣಿ ಪ್ರೇಮ ಇದೀಗ ಗ್ರಾಮದ ಮನೆಮಾತಾಗಿದೆ.


