ಮುಂದಿನ ವರ್ಷ ಶೂನ್ಯ ಸಾಧನೆಗೆ ಜಿಲ್ಲಾಡಳಿತ ಸಂಕಲ್ಪ
ಮೈಸೂರು: ಮೈಸೂರಿನಲ್ಲಿ ತಾಯಂದೀರಿಗೆ ನೆಮ್ಮದಿಯ ಸುದ್ದಿ ಹೊರ ಬಿದ್ದಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಮೈಸೂರಿನಲ್ಲಿ ತಾಯಂದಿರ ಮರಣದ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಮುಂದಿನ ವರ್ಷ ಶೂನ್ಯ ಸಾಧನೆಗೆ ಜಿಲ್ಲಾಡಳಿತ ಸಂಕಲ್ಪ ಮಾಡಿದೆ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಕಾರ ಜನವರಿ 2024 ರಿಂದ ಡಿಸೆಂಬರ್ 2024 ರವರೆಗೆ 28 ತಾಯಿ ಮರಣ ಎಂಎಂಆರ್ ರೇಟ್ 76.50 ಇದ್ದು, ಈ ವರ್ಷ ಜನವರಿ 2025ರಿಂದ ಡಿಸೆಂಬರ್ 2025 ರವರೆಗೆ 11 ತಾಯಿ ಮರಣ ಹೊಂದಿದ್ದು, ಎಂ.ಎಂ.ಆರ್ ರೇಟ್ 30.20 ಗೆ ಇಳಿಕೆಯಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಸಿರಾಜ್ ತಿಳಿಸಿದ್ದಾರೆ.ತಾಯಿ ಮರಣ ಪ್ರಮಾಣವನ್ನು ಕಡಿಮೆ ಮಾಡಿ ಶೂನ್ಯಕ್ಕೆ ತರಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ.
ತಾಯಿಯ ಮರಣ ಎಂದರೇನು ?
ತಾಯಿಯ ಮರಣ ಎಂದರೆ ಗರ್ಭಧಾರಣೆ, ಹರಿಗೆ ಅಥವಾ ಹೆರಿಗೆಯ ನಂತರದ ಸಮಯದಲ್ಲಿ ಸಂಭವಿಸುವ ತಾಯಿಯ ಸಾವು. ಇದು ಗರ್ಭಧಾರಣೆಗೆ ಸಂಬಂಧಿತ ತೊಡಕುಗಳಿಂದ ಉಂಟಾಗುತ್ತದೆ. ತಾಯಿ ಮರಣಕ್ಕೆ ಮುಖ್ಯ ಕಾರಣಗಳಲ್ಲಿ ತೀವ್ರ ರಕ್ತಸ್ರಾವ, ಸೋಂಕುಗಳು, ಅಧಿಕ ರಕ್ತದೊತ್ತಡ, ಅಸುರಕ್ಷಿತ ಗರ್ಭಪಾತ ಮತ್ತು ಹೃದಯ ಸಂಬಂಧಿ ರೋಗಗಳು ಸೇರಿವೆ. ತಾಯಿ ಮರಣ ಪ್ರಮಾಣ ಹೆಚ್ಚಾದಲ್ಲಿ ಇದು ಕುಟುಂಬ ಹಾಗೂ ಸಮಾಜದ ಮೇಲೆ ಆರ್ಥಿಕ ಮತ್ತು ಭಾವನಾತ್ಮಕ ದುಷ್ಪರಿಣಾಮಗಳನ್ನು ಊಂಟಾಗುತ್ತದೆ.

ʻಜಿಲ್ಲಾ ಆಡಳಿತವು ಗರ್ಭಿಣಿ- ತಾಯಂದಿರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರಗಳ ಸಮನ್ವಯತೆಯಿಂದ ಹಾಗೂ ವಿನೂತನ ಕಾರ್ಯ ವಿಧಾನಗಳ ಮೂಲಕ, ತಪ್ಪಿಸಬಹುದಾದ ತಾಯಂದಿರ ಮರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಮಹಿಳೆಯರಿಗೆ ಸುರಕ್ಷಿತ ತಾಯಿನದ ಆರೋಗ್ಯ ಸೇವೆಯನ್ನು ನೀಡುವಲ್ಲಿ ನಾವು ಬದ್ಧರಾಗಿದ್ದೇವೆ.ʼ
-ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ರವರ ಸಮ್ಮುಖದಲ್ಲಿ ಜಿಲ್ಲಾಮಟ್ಟದ ತಾಯಿ ಮರಣ ಪರಿಶೋಧನಾ ಸಮಿತಿಸಭೆಗಳ ಆಯೋಜನೆ ಮತ್ತು ತಾಯಿ ಮರಣ ಪರಿಶೋಧನಾ ಸಮಿತಿಯ ನಿರ್ದೇಶನಗಳ ಪಾಲನೆ ಹಾಗೂ ಈ ಬಗ್ಗೆ ಕ್ಷೇತ್ರಮಟ್ಟದಲ್ಲಿ ಅನುಷ್ಠಾನ ಮಾಡುತ್ತಿರುವುದು. ಕೆ.ಪಿ.ಎಂ.ಇ.ಎ ಪ್ರಾಧಿಕಾರದಡಿಯಲ್ಲಿ ಬರುವ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾಧಿಕಾರದ ಸಭೆಗಳಲ್ಲಿ ತಾಯಿ ಆರೋಗ್ಯ ಸಂಪರ್ಕವಾಗಿ ನಿರ್ವಹಣೆ ಮಾಡುವಲ್ಲಿ ನ್ಯೂನತೆಗಳು ಕಂಡು ಬಂದ ಖಾಸಗಿ ಆಸ್ಪತ್ರೆಗಳಿಗೆ ದಂಡವನ್ನು ವಿಧಿಸಲಾಗಿದೆ.
ತಾಯಿ ಮರಣ ಸಂಭವಿಸಿದಂತೆ ನಿಗದಿತ ಸಮಯದೊಳಗೆ ಸಮುದಾಯ ಮತ್ತು ಸಾಂಸ್ಥಿಕ ಪರಿಶೋಧನೆಗಳನ್ನು ನಿರ್ವಹಿಸುತ್ತಿರುವುದು ಹಾಗೂ ಈ ಬಗೆ ಕಂಡು ಬಂದ ನ್ಯೂನತೆಗಳ ಕುರಿತು ಕ್ಷೇತ್ರ ಮಟ್ಟದಲ್ಲಿ ಮಾಹಿತಿ ನೀಡುತ್ತಿರುವುದು. ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಯಡಿಯಲ್ಲಿ ತಾಯಿ ಕಾರ್ಡ್ ಅನುಸಾರ ಸಾಮಾನ್ಯ ಗರ್ಭಿಣಿ ಮತ್ತು ಹೆಚ್ಆರ್ಪಿ ಗರ್ಭಿಣಿಯ ಆರೋಗ್ಯ ತಪಾಸಣೆ. ತುರ್ತು ಹೆರಿಗೆ ನ ನಿರ್ವಹಣೆಗೆ ಹಾಗೂ ಹೆಚ್ಆರ್.ಪಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಾಟ್ಸಾಫ್ ಗ್ರೂಫ್ ಗಳನ್ನು ಸೃಜಿಸಿ, ಆಮೂಲಕ ಮಾಹಿತಿಯನ್ನು ರವಾನಿಸಲಾಗುತ್ತಿದೆ. ಕ್ಷೇತ್ರ ಮಟ್ಟದ ಆಯಕಟ್ಟಿನ ಪ್ರದೇಶಗಳಲ್ಲಿ ತುರ್ತು ವಾಹನಗಳನ್ನು ನಿರ್ವಹಣೆಗೆ ಮಾಡುತ್ತಿದ್ದು ಇದರ ಸಂಪರ್ಣ ಮೇಲ್ವಿಚಾರಣೆಯನ್ನು ಜಿಲ್ಲಾಮಟ್ಟದಿಂದಲೇ ನಿರ್ವಹಿಸಲಾಗುತ್ತಿರುವುದು.
ಪ್ರತಿ ಮಾಹೆ ನಿರೀಕ್ಷಿತ ಗರ್ಭಿಣಿಯರ ಮಾಹಿತಿಯನ್ನು ಪಡೆದು ಈ ಮಾಹಿತಿಯನ್ನು ಅನುಸಾರ ನೇರ ಕಣ್ಗಾವಲಿನಲ್ಲಿರುವಂತೆ ವ್ಯವಸ್ಥೆ ಮಾಡಿರುವುದು. ಸಮುದಾಯ ಮಟ್ಟದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ವಿ.ಹೆಚ್.ಎಸ್.ಎನ್.ಸಿ.. ವಿ.ಹೆಚ್.ಎನ್.ಡಿ ಮತ್ತು ಬಾಲ ವಿಕಾಸ ಸಮಿತಿಗಳ ಮೂಲಕ ಗರ್ಭಿಣಿಯರ ರ ಕುರಿತು ಪ್ರಸವ ಪೂರ್ವ ಮತ್ತು ಪ್ರಸನ ನಂತರದ ಮಾಹಿತಿಗಳನ್ನು ಕುರಿತು ಜಾಗೃತಿ ಮೂಡಿಸುತ್ತಿರುವುದು. ಕ್ಷೇತ್ರ ಮಟ್ಟದಿಂದ ಹೆಚ್ಚಿನ ಚಿಕಿತ್ಸೆಗೆ ರೆಫರ್ ಆಗುವ ಎಲ್ಲಾ ಪ್ರಕರಣಗಳ ಕುರಿತು (ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ) ನಿರಂತರ ಸಂಪರ್ಕದಲ್ಲಿ ತೊಡಗಿಕೊಳ್ಳಲಾಗಿದೆ.
ರಾಜ್ಯ ಮಟ್ಟದ ಮಾರ್ಗಸೂಚಿಗಳ ಅನುಸಾರ ಹಾಗೂ ನಿರ್ದೇಶನದಂತೆ ಮತ್ತು ಜಿಲ್ಲಾ ಆಡಳಿತದ ಮಾರ್ಗದರ್ಶನದಂತೆ ಕ್ಷೇತ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿರುವುದು. ಸಹಾಯವಾಣಿ ಸಂವಾದದ ಬಗ್ಗೆ ಹಾಗೂ ಸಹಾಯವಾಣಿಯನ್ನು ಆಲಿಸುವ ಬಗೆ ಕ್ಷೇತ್ರ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವುದು. ಹದಿಹರೆಯದ ಹೆಣ್ಣು ಮಕ್ಕಳ ಗರ್ಭವ್ಯವಸ್ಥೆಯ ಕುರಿತು ವಿಶೇಷ ಕಾಳಜಿ ಹಾಗೂ ಈ ಬಗ್ಗೆ, ಸಮುದಾಯದಲ್ಲಿ ಜಾಗೃತಿ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪ್ರಕರಣಗಳ ಕುರಿತು ಮಾಹಿತಿ ನೀಡುತ್ತಿರುವುದು. ಗರ್ಭಾವಸ್ಥೆಯ ಕನಿಷ್ಠ ಮೂರು ವರ್ಷಗಳ ಅಂತರದ ಬಗ್ಗೆ ಸಮುದಾಯ ಮಟ್ಟದಲ್ಲಿ ಅರಿವು ಮೂಡಿಸಲಾಗುತ್ತಿದೆ.


