Online News in ಕನ್ನಡ

ಮೈಸೂರಿನ ಪ್ರತಿಭೆ ಪ್ರಣತಿ-ತ್ರಿಶಾಂಕ: ರಾಷ್ಟ್ರ ಮಟ್ಟದ ಸರ್ಕಲ್ ಕಬಡ್ಡಿ ಸ್ಪರ್ಧೆಗೆ ಆಯ್ಕೆ

ಮೈಸೂರು: ಉತ್ತರಾಖಂಡ್ ನ ನೈನಿತಾಲ್ನ ಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸರ್ಕಲ್ ಕಬಡ್ಡಿ ಸ್ಪರ್ಧೆಗೆ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಣತಿ ಎಂಟಿ ತೃತೀಯ ಬಿಎ ಮತ್ತು ತ್ರಿಶಾಂಕ ಪ್ರಥಮ ಬಿಎ ಈ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ . ರಾಷ್ಟ್ರ ಮಟ್ಟದ ಈ ಸ್ಪರ್ಧೆಯು ಜನವರಿ ೧೦ರಿಂದ ೧೩ವರೆಗೆ ನೈನಿತಾಲ್ ನಲ್ಲಿ ನಡೆಯಲಿದೆ.
ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಣತಿ ಎಂ ಟಿ ತೃತೀಯ ಬಿಎ , ಮೈಸೂರು ಜಿಲ್ಲೆ, ಕೆ ಆರ್ ನಗರ ತಾಲೂಕು, ಮುದ್ದುಗುಪ್ಪೆ ಗ್ರಾಮದ ತುಳಸಿರಾಮೇಗೌಡ- ವಸಂತ ದಂಪತಿಯ ಪುತ್ರಿಯಾಗಿದ್ದಾರೆ. ತ್ರಿಶಾಂಕ ಪ್ರಥಮ ಬಿಎ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕು, ಮಿಕ್ಕೆರೆ ಗ್ರಾಮದ ಪುಟ್ಟ ಮತ್ತು ಪವಿತ್ರ ದಂಪತಿಯ ಪುತ್ರಿಯಾಗಿದ್ದಾರೆ . ಈ ಇಬ್ಬರು ಕ್ರೀಡಾಪಟುಗಳು ಈಗಾಗಲೇ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ, ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಸ್ಪರ್ಧಿಯಲ್ಲೂ ಸಹ ಭಾಗವಹಿಸಿದ್ದಾರೆ. ಈ ವಿದ್ಯಾರ್ಥಿ ಕ್ರೀಡಾಪಟುಗಳ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ ಎಸ್ ಅನಿತಾ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಡಾ. ಮೋಹನ್ ಕುಮಾರ್ ಸಿ ಎಸ್ ಮತ್ತು ಡಾ. ಭಾಸ್ಕರ್ ಕೆ ಎಸ್ ಹಾಗೂ ಎಲ್ಲಾ ಅಧ್ಯಾಪಕರು, ಆಧ್ಯಾಪಕೇತರ ವರ್ಗದವರು, ವಿದ್ಯಾರ್ಥಿನಿಯರು ಇವರ ಸಾಧನೆಯನ್ನು ಅಭಿನಂದಿಸಿದ್ದಾರೆ.

Call Now Button