ನವ ದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಎನ್ಡಿಎ ಸರಕಾರದ 2026ನೇ ಸಾಲಿನ ಬಜೆಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ನಿರೀಕ್ಷೆಯಂತೆ ಕರ್ನಾಟಕಕ್ಕೆ ನಿರಾಶೆ ಉಂಟಾಗಿದೆ.
ಒಂದೆಡೆ ಸಂಬಳ ಪಡೆಯುವ ವರ್ಗಕ್ಕೆ ಯಾವುದೇ ಹೊಸ ತೆರಿಗೆ ವಿನಾಯ್ತಿ ನೀಡಿಲ್ಲ. 12 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯವು ತೆರಿಗೆ ಮುಕ್ತವಾಗಿ ಉಳಿಯುವ ವ್ಯವಸ್ಥೆಯನ್ನು ಬಜೆಟ್ ಉಳಿಸಿಕೊಂಡಿದೆ.
ಈನಡುವೆ, ಸುಂಕ ವಿನಾಯ್ತಿನೊಂದಿಗೆ ಸುಮಾರು 17 ಕ್ಯಾನ್ಸರ್ ಔಷಧಿಳು ಅಗ್ಗವಾಗಲಿದ್ದು, ಇತರೆ ಏಳು ಅಪರೂಪದ ಕಾಯಿಲೆಗಳಿಗೆ ಔಷಧಗಳಿಗೆ ಸುಂಕ ಮುಕ್ತ ವೈಯಕ್ತಿಕ ಅಮದುಳನ್ನು ಅನುಮತಿಸಲಾಗುತ್ತದೆ.
ಅಗ್ಗದ ಉತ್ಪನ್ನಗಳ ಸಾಲಿನಲ್ಲಿ ಮೈಕ್ರೋವೇವ್ ಓವನ್ಗಳು, ಟಿವಿ ಉಪಕರಣಗಳು, ಚರ್ಮದ ಸರಕುಗಳು ಮತ್ತು ಪಾದರಕ್ಷೆಗಳ ತಯಾರಿಕೆಯಲ್ಲಿ ವಸ್ತುಗಳು ಸೇರಿದೆ.
ಈ ಸಾಲಿನಲ್ಲಿ ಉದ್ಯೋಗ ಸೃಷ್ಟಿಗೆ ಕೇಂದ್ರ ಸರಕಾರ ಮುಂದಾಗಿದ್ದು ಪ್ರವಾಸೋದ್ಯಮ, ರೈಲ್ವೆ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹಂಚಿಕೆಗಳನ್ನು ಮಾಡಲಾಗಿದೆ. ಲಾಜಿಸ್ಟಿಕ್ಸ್ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಮೇಲೂ ಗಮನ ಹರಿಸಲಾಗಿದೆ.
ಆದರೆ, ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಲು ವಿದೇಶಿ ಹಣ ರವಾನೆಗಳ ಮೇಲೆ ಅನುಸರಣೆ ಹೊರೆ ಮತ್ತು ಕಸ್ಟಮ್ಸ್ ದರಗಳನ್ನು ಕಡಿಮೆ ಮಾಡುವ ಗುರಿಯನ್ನು ಬಜೆಟ್ ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದಾರೆ.
ರೈತರ ಆದಾಯ ಹೆಚ್ಚಳ:
ಮತ್ಸ್ಯೋದ್ಯಮ ಸದೃಡಗೊಳಿಸಲು 500 ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿಗಾಗಿ ಉಪ ಕ್ರಮಗಳನ್ನು ಕೈಗೊಲಾಗುವುದು. ಗುಣಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸಲು ಪಶು ಸಂಗೋಪನಾ ಕ್ಷೇತ್ರದಲ್ಲಿ ಉದ್ಯಮಶೀಲತೆ ಅಭಿವೃದ್ಧಿಗೆ ಆಧ್ಯತೆ ನೀಡಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.


