Online News in ಕನ್ನಡ

ಯಾರು ಏನೇ ಹೇಳಿದ್ರೂ ಹೈಕಮಾಂಡ್‌ ಸುಪ್ರೀಂ: ಗೃಹ ಸಚಿವ ಡಾ. ಜಿ.ಪರಮೇಶ್ವರ್‌

ಮೈಸೂರು: ʻಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿರೋದು ಹೈಕಮಾಂಡ್‌, ಹಾಗಾಗಿ ಅವರು (ಹೈಕಮಾಂಡ್‌) ಹೇಳುವವರೆಗೂ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ, ಅದು ನಾನೇನೇ ಹೇಳಿದ್ರೂ, ನೀವೇನೇ ಹೇಳಿದ್ರೂ. ಅದು ಕೇವಲ ನಮ್ಮ ನಮ್ಮ ವೈಯಕ್ತಿ ಅಭಿಪ್ರಾಯವಾಗಲಿದೆಯೆ ವಿನಃ ಹೈಕಮಾಂಡ್‌ ಅಭಿಪ್ರಾಯವಾಗುವುದಿಲ್ಲʼ ಹೀಗೆ ಪತ್ರಕರ್ತರಿಂದ ಪದೇ ಪದೇ ಎದುರಾದ ನಾಯಕತ್ವ ಬದಲಾವಣೆಯ ಪ್ರಶ್ನೆಗಳಿಗೆ ಉತ್ತರಿಸಿದವರು ಗೃಹ ಸಚಿವ ಡಾ. ಜಿ. ಪರಮೇಶ್ವರ್.‌
ಡಾ. ಯತೀಂದ್ರ ನೀಡಿರುವ ಹೇಳಿಕೆ ಅದು ಅವರ ವೈಯಕ್ತಿಕ ಹೇಳಿಕೆ. ಅವರಿಗಿರುವ ಮಾಹಿತಿಯನ್ನು ಹೇಳಿರಬಹುದು.
ಎಲ್ಲ ಶಾಸಕರದ್ದೂ ಒಂದೊಂದು ಅಭಿಪ್ರಾಯ ಇರುತ್ತದೆ. ಅದಲ್ಲ ಮುಖ್ಯ ಆಗುವುದಿಲ್ಲ. ನನಗೆ ವೈಯಕ್ತಿಕವಾಗಿ ತಿಳಿದಿರುವಂತೆ ಸಿಎಂ ಬದಲಾವಣೆಯ ವಿಷಯ ಹೈಕ ಮಾಂಡ್‌ ಮುಂದೆ ಇಲ್ಲವೇ ಇಲ್ಲ. ಹಾಗಂತ ಎಲ್ಲ ಶಾಸಕರ ಅಭಿಪ್ರಾಯಕ್ಕೆ ನಾನು ಪ್ರತಿಕ್ರಿಯೆ ಕೊಡಬೇಕಂತಯಿಲ್ಲ ಎಂದು ಖಾರವಾಗಿ ನುಡಿದರು.
ನೀವು ಮಾಧ್ಯಮದವರು ಎಷ್ಟು ಬುದ್ಧಿವಂತರೆಂದರೆ, ಇಲ್ಲಿ ನನಗೂ ಪ್ರಶ್ನೆ ಕೇಳಿ ಅಲ್ಲಿ ಅವರಿಗೂ ಪ್ರಶ್ನೆ ಕೇಳಿ, ಕೊನೆಗೆ ನಿಮಗೆ ಬೇಕಾದ ರೀತಿಯಲ್ಲಿ ತಿರುಚಿ ಸುದ್ದಿ ಮಾಡ್ತೀರ. ಒಂದು ವೇಳೆ ನಾಯಕತ್ವ ವಿಷಯದಲ್ಲಿ ಗೊಂದಲ ಇದ್ದಿದ್ದರೆ, ಮೊನ್ನೆಯಷ್ಟೇ ನಡೆದ ಸಿಎಲ್‌ಪಿ ಸಭೆಯಲ್ಲಿ ಶಾಸಕರು ಸಿಎಂ ಅವರಿಗೆ ಕೇಳುತ್ತಿದ್ದರು. ಎಲ್ಲೂ ಚರ್ಚೆಯಾಗಿಲ್ಲ, ಹೈಕಮಾಂಡ್‌ ಸಹ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿಲ್ಲ ಎಂದ ಮೇಲೆ ಸಿಎಂ ಬದಲಾವಣೆ ಗೊಂದಲ ಎಲ್ಲಿಂದ ಬರುತ್ತೆ ಎಂದು ಉತ್ತರಿಸಿದರು.
ಡ್ರಗ್ಸ್‌ ಪತ್ತೆ: ಎನ್‌ಸಿಬಿ ದ್ವಂದ್ವ ಹೇಳಿಕೆ

ಮೈಸೂರು: ಮೈಸೂರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಗಳು ದ್ವಂದ್ವ ಹೇಳಿಕೆ ನೀಡಿ ಎಲ್ಲರನ್ನೂ ಗೊಂದಲಕ್ಕೆ ಎಡೆಮಾಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ಎನ್‌ಸಿಬಿ ಅಧಿಕಾರಿಗಳು ಕೋರ್ಟ್‌ಗೆ ಕೊಟ್ಟಿರುವ ಮಾಹಿತಿಯಲ್ಲಿ ಡ್ರಗ್ಸ್‌ ಸಿಕ್ಕಿಲ್ಲ ಎಂದು ಹೇಲಿದ್ದಾರೆ. ಆದರೆ, ಪತ್ರಿಕಾ ಹೇಳಕೆಯಲ್ಲಿ ಡ್ರಗ್ಸ್‌ ಸಿಕ್ಕಿದೆ ಎಂದು ಹೇಳಿದ್ದಾರೆ. ಎನ್ ಸಿಬಿ ಕೋರ್ಟ್ ಗೆ ಕೊಟ್ಟಿರುವ ಮಾಹಿತಿಯಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂದು ಹೇಳಿದೆ. ಯಾಕೆ ಈ ರೀತಿ ಗೊಂದಲ ಸೃಷ್ಟಿಸಿದ್ದಾರೆ ಗೊತ್ತಿಲ್ಲ ಎಂದರು.
ಮೈಸೂರು ನಗರದಲ್ಲಿ ಎನ್‌ಸಿಬಿ ಅವರು ದಾಳಿಗಳನ್ನು ನಡೆಸಿದಾಗ ನಮ್ಮ ಪೊಲೀಸರು ಜೊತೆಯಲ್ಲೇ ಇದ್ದರು. ಎಲ್ಲಿಯೂ ಡ್ರಗ್ಸ್‌ ಸಿಕ್ಕಿಲ್ಲ. ಮೈಸೂರು ಪೊಲೀಸರು ನನಗೆ ಸರಿಯಾದ ಮಾಹಿತಿ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಯಾವ ಡ್ರಗ್ಸ್ ಪತ್ತೆಯಾಗಿಲ್ಲ. ಆದರೂ ರಾಜ್ಯದ ಎಲ್ಲಾ ಕೆಮಿಕಲ್ ಫ್ಯಾಕ್ಟರಿಗಳ ಮೇಲೆ ಹೆಚ್ಚಿನ ನಿಗಾ ಇಡುವುವಂತೆ ಸೂಚನೆ ಕೊಟ್ಟಿದ್ದೇನೆ ಎಂದರು.
ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಸಾಲ ಮನ್ನಾ ಕುರಿತು ಕೇಳಿದ ಪ್ರಶ್ನೆಗೆ ತಪ್ಪೇನಿದೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ಬಾರಿ ರೈತರ ಸಾಲ ಮನ್ನಾ, ಹಿಂದುಳಿದ ವರ್ಗಗಳ ಸಾಲ ಮನ್ನ ಮಾಡಿವೆ. ಹಾಗೆ ಇದು ಸಹ ಎಂದು ನುಡಿದರು.

Call Now Button