Online News in ಕನ್ನಡ

ಯುದ್ಧದಲ್ಲಿ ಸಿಲುಕಿರುವ ಕನ್ನಡಿಗರ ಪಟ್ಟಿ ಬಿಡುಗಡೆ ಮಾಡಿದ ಸರಕಾರ: ಪ್ರಧಾನ ಮಂತ್ರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು: ಯುಎಐ(ದುಬೈ)ನಲ್ಲಿ ಸಿಲುಕಿರುವ ಕನ್ನಡಿಗರ ಪಟ್ಟಿ ಬಿಡುಗಡೆಗೊಳಿಸಿರುವ ರಾಜ್ಯ ಸರಕಾರ, ಅವರುಗಳ ಸುರಕ್ಷತಾ ವಾಪಸ್ಸಿಗೆ ಅಗತ್ಯ ಕ್ರಮ ಮತ್ತು ನೆರವು ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.


ಸದ್ಯ ಸರಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಯೂನೈಟಡ್‌ ಅರಬ್‌ ಅಮೆರೈಟ್ಸ್‌ನನಲ್ಲಿ 100 ಮಂದಿ ಮತ್ತು ಯುದ್ಧದ ತೀವ್ರತೆ ಹೆಚ್ಚಿರುವ ಬಹರೇನ್‌ನಲ್ಲಿ 10 ಮಂದಿ ಕನ್ನಡಿಗರು ಸಿಲುಕಿದ್ದಾರೆ. ಈ ಪೈಕಿ ಬಳ್ಳಾರಿಯಲ್ಲಿ ಗರಿಷ್ಠ 32 ಮಂದಿ, ಬೆಂಗಳೂರಿನ 25 ಮಂದಿ ಇದ್ದು ಬಹರೇನಲ್ಲಿ ಮೈಸೂರಿನ ಮೂಲ ನಿವಾಸಿ ನಿಂಗರಾಜು ಸೇರಿದಂತೆ 10 ಮಂದಿ ಸಿಲುಕಿದ್ದು ಇದರಲ್ಲಿ ಹಾಸನದ ನಾಲ್ವರು, ಉಡುಪಿಯ ಮೂವರು ಮತ್ತು ಕೊಡಗಿನ ಓರ್ವ ವ್ಯಕ್ತಿ ಸೇರಿದ್ದಾರೆ. ಇನ್ನು ಮೂರು ಮಂದಿನ ಜಿಲ್ಲೆ ಸ್ಪಷ್ಟವಾಗಿಲ್ಲ.
ಯುದ್ಧ ನಿಲ್ಲುವವರೆಗೂ ಕನ್ನಡಿಗರನ್ನು ವಾಪಸ್‌ ಕರೆಸಿಕೊಳ್ಳುವುದು ಕಷ್ಟ ಸಾಧ್ಯವೆಂದು ಹೇಳಲಾಗಿದ್ದು, ಅಮೇರಿಕಾ ಪ್ರಾಯೋಜಕತ್ವದ ಇರಾನ್‌ ದಾಳಿಯಿಂದಾಗಿ ಇಸ್ರೆಲ್‌ನಲ್ಲಿ ಭಾರೀ ನಷ್ಟ ಮತ್ತು ಜೀವ ಹಾನಿಗಳು ಸಂಭವಿಸಿದೆ.

 


ಪ್ರಧಾನಿಗೆ ಪತ್ರ:
ಈನಡುವೆ, ಯುದ್ಧದ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ದೃಷ್ಟಿನಿಂದ ಅಗತ್ಯ ಕ್ರಮ ಮತ್ತು ಸಹಕಾರ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

Call Now Button