ಮೈಸೂರು: ಅಮೇರಿಕಾ – ಇಸ್ರೇಲ್ ಯುದ್ದಕೋರ ನೀತಿ ಖಂಡಿಸಿ, ಯುದ್ದ ಬೇಡ, ಶಾಂತಿಗಾಗಿ ಒತ್ತಾಯಿಸಿ ಇಂದು ಎಡಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳಿಂದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಶ್ರೀಮಂತ ಬಂಡವಾಳಶಾಹಿ ದೇಶಗಳಿಂದು ಬಿಟ್ಟಕ್ಕಿನಲ್ಲಿವೆ. ಈ ಬಿಕ್ಕಟ್ಟಿನಿಂದ ಹೊರಬರಲು ಇತರ ರಾಷ್ಟ್ರಗಳ ಮೇಲೆ ದಾಳಿ ನಡೆಸಿ ಅಲ್ಲಿನ ತೈಲ ಸೇರಿದಂತೆ ಇತರ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ಅದರ ಭಾಗವಾಗಿ ಪ್ರಜಾಪ್ರಭುತ್ವ ಸ್ಥಾಪನೆ ಹೆಸರಿನಲ್ಲಿ, ಅಣುಶಕ್ತಿ ನೆಪದಲ್ಲಿ ತಮ್ಮ ಮಾತುಗಳನ್ನು ಕೆಳದ ಸಾರ್ವಭೌಮ ದೇಶಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಅಲ್ಲದೇ ಶಾಲೆ- ಆಸ್ಪತ್ರೆಗಳ ಮೇಲೆ, ನಾಗರಿಕರ ಮೇಲೆ ದಾಳಿಮಾಡಿ ಕೊಲ್ಲಲಾಗುತ್ತಿದೆ.ಈ ಯುದ್ದಗಳಿಂದ ಮೊದಲು ಬಲಿಯಾಗುವುದು ಮಕ್ಕಳು, ಮಹಿಳೆಯರು ಹಾಗೂ ತೊಂದರೆಗಳಗಾಗುವವರು ರೈತ- ಕಾರ್ಮಿಕ, ಸಾಮಾನ್ಯ ಜನರು ಆದ್ದರಿಂದ ಈ ಯುದ್ದ ಕೂಡಲೇ ನಿಲ್ಲಬೇಕು, ವಿಶ್ವ ಸಂಸ್ಥೆ, ಅಂತರಾಷ್ಟ್ರೀಯ ನ್ಯಾಯಾಲಯ ಮಧ್ಯಪ್ರದೇಶ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಇರಾನ್ ಮೇಲಿನ ಅಮೇರಿಕಾ, ಇಸ್ರೇಲ್ ದಾಳಿಯಿಂದ ನಮ್ಮ ದೇಶವೂ ಸಂಕಷ್ಟಕ್ಕೀಡಾಗಿದ್ದು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಪೂರೈಕೆ ಮೇಲೆ ಪರಿಣಾಮ ಬೀರಿ ಅಡುಗೆ ಅನಿಲದ ಕೊರತೆ ಉಂಟಾಗಿದೆ. ಬೆಲೆಗಳೂ ಏರಿಕೆ ಆಗುತ್ತಿದೆ ಕೂಡಲೇ ಕೇಂದ್ರ ಸರ್ಕಾರ ಯುದ್ದ ನಿಲ್ಲಿಸುವಂತೆ ಅಮೇರಿಕಾವನ್ನು ಒತ್ತಾಯಿಸಬೇಕು, ದೇಶ ನಾಗರಿಕರಿಗೆ ತೊಂದಯಾಗದಂತೆ ಕ್ರಮವಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ‌್ಯ, ಸಿಪಿಐ ಕಾರ್ಯದರ್ಶಿ ರಾಮಕೃಷ್ಣ, ಸಿಪಿಎಂಲ್ ಕಾರ್ಯದರ್ಶಿ ಜವರಯ್ಯ,ಎಸ್‌ಯುಸಿಐ ಕಾರ್ಯದರ್ಶಿ ರವಿ, ಪ್ರಗತಿಪರರಾದ ಟಿ.ಗುರುರಾಜ್, ಸವಿತಾ ಮಲ್ಲೇಶ್,ಒಡನಾಡಿ ಸ್ಟ್ಯಾನ್ಲಿ, ಲಕ್ಷ್ಮಣ್ ಹೊಸಕೋಟೆ, ರಾಜ್ಯ ರೈತ ಸಂಘದ ಹೊಸಕೋಟೆ ಬಸವರಾಜ್, ಕಾಳಚನ್ನೇಗೌಡ,ಕೆ.ಬಸವರಾಜ್, ಎನ್.ವಿಜಯ್‌ಕುಮಾರ್,ಜಯರಾಂ,ನೆಲೆ ಗೋಪಾಲ್ ಕೃಷ್ಣ,ಶಾಕುಂತಲ, ಬಾಲಾಜಿರಾವ್,ಪ್ರಭಾಕರ್,ಯಶೋಧರ, ಸೋಮರಾಜೇ ಅರಸ್,ರಾಜೇಂದ್ರ, ಶ್ರೀಕಾಂತ್, ಸುಬ್ರಹ್ಮಣ್ಯ, ರಾಘವೇಂದ್ರ,ಬಾಲಕೃಷ್ಣ ಮುಂತಾದವರು ಭಾಗವಹಿಸಿದ್ದರು.


